ಅವನು-ಅವಳು -ಮತ್ತು ನಾವು...........
ಇದೇ 'ಕೊನೆಯ ಮೆಸೇಜ್' ಕಣೆ ನಿಂಗೆ, ಇನ್ಮೇಲೆ ನಾ ನಿಂಗೆ ಮೆಸೇಜ್ ಮಾಡಲ್ಲ,
ಇದೇ 'ಕೊನೆಯ ಕಾಲ್' ಕಣೆ ನಿಂಗೆ ನಾ ಇನ್ಮೇಲೆ ಕಾಲ್ ಮಾಡೋದೇ ಇಲ್ಲ.......
ಅವ ಹೇಳಿದ,
ಅದಕ್ಕವಳು ಹೋಗ್ಗೊಗೋ ನಾ ಕಾಣದೇ ಇರೋನ ನೀ? ಅವಳಿಂದ ಕಾಲ್ -ಮೆಸೇಜ್ ಕಟ್!!
ಹಾಗೆ ಮೆಸೇಜ್ ಕಳಿಸಿದ ತಕ್ಷಣವೇ ,ಅವಂಗೆ ಮತ್ತು ಅವಳ್ಗೆ ಅನ್ಸುತ್ತೆ,
ಅವಳನ್ನ ,ಮರೀಬಹುದ? ಯಾಕೆ? ಹೇಗೆ? ಆದ ನನ್ನಿನ್ನ್ದ ಸಾಧ್ಯವ?
ಅವನನ್ನ , ಮರೀಬಹುದ? ಯಾಕೆ? ಹೇಗೆ? ಆದ ನನ್ನಿನ್ನ್ದ ಸಾಧ್ಯವ?
ಅವನಿಗೆ ಈ ಕಥೆಯಲ್ಲಿ ಹೆಸರಿಲ್ಲ, ಅವಳಿಗೂ ಇಲ್ಲ.ಬೇಕೂಂತಲೇ ನಾ ಹೆಸರನ್ನ ಅವರಿಬ್ರ್ಗೂ ಇಟ್ಟಿಲ್ಲ!!
ಅವ್ನು, ಹಾಗಂತ ಅವಳಿಗೆ ಹೇಳಿದ್ದು ಅದು ಕೊನೆಯ ಸಲವೂ ಅಲ್ಲ- ಮೊದಲನೆಯದೂ ಅಲ್ಲ!
ಇದು ವಾರದಲ್ಲಿ ಒಮ್ಮೆಯಾದರೂ, ಅವರಿಬ್ಬರ ನಡುವೆ ನಡೆಯುತ್ತಿದ್ದ 'ಸಾಮಾನ್ಯ್ ಸಂಗತಿ' ಹೀಗಾಗಿ ಇವನ-ಅವಳ ಸ್ನೇಹಿತ(ತೆ)ರಿಗೆ ಯಾವ ಪರಿಣಾಮವೂ ಆಗುತ್ತಿದ್ದಿಲ!! ಅವರಿಗ್ಗೊತ್ತು ಅವರಿಬ್ಬರೂ ಅದೆಸ್ತು ಗಾಢವಾಗಿ ಪ್ರೀತಿಸುತ್ತಾರೆ ಅಂತ.
ಹಾಗಂತ ಅವರಿಬ್ಬರಿಗೆ ಮುನಿಸಿಗೆ ಕಾರಣಗಳೆಲ್ಲವೂ ಸಣ್ಣ-ಪುಟ್ಟದವೆ.
ಇವ ಫೋನ್ -ಮೆಸೇಜ್ ಮಾಡಿದಾಗ ಅವಳು ಬ್ಯುಸಿ , ಆದ ಇವಂಗೆ ಇರಿಸು-ಮುರಿಸಿನ ವಿಸ್ಯ.
ಇವನದು ನಾ ಫೋನ್ ಮೆಸೇಜ್ ಮಾಡಿದಾಗ , ಅವಳಿಂದ ಪ್ರತಿಕ್ರಿಯೆ ಬರಲೇಬೇಕು ಅನ್ನುವ ಮನೋ ಸ್ಥಿತಿ , ಅವಳದೋ ಪ್ರೇಮಿಗಳೆಂದ ಮಾತ್ರಕ್ಕೆ ದಿನನಿತ್ಯ- ಪ್ರತಿ ಕ್ಷಣ ಸಂಪರ್ಕದಲ್ಲಿ ಇರಲೇಬೇಕು ಎನ್ನುವ ಅಗತ್ಯವಿಲ್ಲ ಎನ್ನುವ ಜಾಯಮಾನ.
ಅವರಿಬ್ಬರೂ ದೂರವಿದ್ದು ಮಾನಸಿಕವಾಗಿ ಹತ್ತಿರವಾದವರು, ಮತ್ತೊಂದು ವಿಶೇಷವೆಂದರೆ ಚಿಕ್ಕವರಿದ್ದಾಗ ಒಬ್ಬರನು ಕಂಡರೆ ಮತ್ತೊಬ್ಬರಿಗೆ ಆಗ್ತಿರ್ಲಿಲ್ಲ!
ಅನ್ತಿಪ್ಪ ಅವ್ರು ಒಂದಾಗಿದ್ದು- ಪ್ರೀತಿಲ್ ಬಿದಿದ್ದು ಹೇಗೆ?
ಇಂತಿಪ್ಪ ಅವನು ಪ್ರಾಥಮಿಕ-ಮಾಧ್ಯಮಿಕ-ಪ್ರೌಡ-ಶಿಕ್ಷಣ ಮುಗಿಸಿ ಕಾಲೇಜ್ ಸೇರಿ ಅಲ್ 'ಗೋತಾ' ಹೊಡೆದು, ಏನೇನೋ ಕಲೆತು ಕೊನೆಗೊಂದು ಕಡೆ ಖಾಸಗಿಕೆಲಸಕ್ಕೆ ಸೇರ್ಕೊಂಡ ತಕ್ಕಮಟ್ಟಿಗೆ ಹಣ ಸಂಪಾದಿಸುತ್ತಿದ್ದ.
ಅವಳೂ ತನ್ನ ಶಿಕ್ಷಣ ಮುಗಿಸಿ ತನಗಿಸ್ತವಾದ ಶಿಕ್ಷಕ ತರಭೇತಿ ಪಡೆದು, ಸರಕಾರೀ ಶಿಕ್ಷಕಿಯಾಗ್ ನೇಮಕವಾಗಿ ಕೈ ತುಂಬಾ ಸಂಬಳ ತರ್ತಾಳೆ.
ಅವನ ಅವಳ ಭೇಟಿ ಇದಕ್ಕಿಂತ ಮುಂಚೆ ಅದೆಸ್ಟ್ ಸಾರಿ ಆಗಿದ್ರೂ ಅದು ಹಾಯ್-ಬಾಯ್ ಗಸ್ಟೇ ಸೀಮಿತವಾಗಿತ್. ಒಮ್ಮೆ ಹಳ್ಳಿ ಜಾತ್ರೆಗ್ ಬಂದ್ ಅವಳನ್ ನೋಡಿದ ಅವಂಗೆ, ಅವಳು ಮಾಮೂಲಿಗಿಂತ ತುಸು ವಿಭಿನ್ನವಾಗೆ ಕಂಡಳು! ಅವಳ ಬಗ್ಗೆ ಮುಂಚಿದ್ದ ಭಾವನೆ ಹೋಗಿ, ಅಲ್ಲೀಗ ಹೊಸ ತರದ ಭಾವನೆ ಮೂಡತೊಡಗಿತ್ತು.
ಅವಳಿಗೂ ಅಸ್ಟೇ. ಈ ಮುಂಚೆ ಅಬ್ಬೆಪಾರೀ, ಕೆಲಸಕ್ಕೆ ಬಾರದ ಮುಟ್ಟಾಳ, ಒರಟ, ಕಲ್(ಕಳ್ಳ !) ಮನಸೋನ್ ಆಗಿದ್ದ ಅವ ಈಗೀಗ ಇದ್ದಕ್ಕಿದ್ದಂತೆ 'ಹೊಸದಾಗ್' ಕಾಣಿಸಿದ....
ಜಾತ್ರೆ ನಂತರದ ಒಂದು ವರ್ಷ ಇಬ್ಬರ ಮಧ್ಯೆ ರಾಗ-ಅನುರಾಗ! ಆಗಾಗ ಅಪಸ್ವರ-ಕಿತ್ತಾಟ ಇದ್ದಿತ್. ಮೋಡ ಮೊದಲ್ಗೆ ಕಾಲ್ ಮೆಸ್ಸಗಿಗೆ ಕಾಯ್ತಿದ್ದ ಅವಳ್ಗೆ, ಇದ್ದಕ್ಕಿದ್ದಂಗೆ ಈ ಕಾಲೂ- ಮೆಸೇಜ್ ಗಳು ಅಹಿತಕಾರಿ ಭಾವನೆ ಮೂಡ್ಸೋಕೆ ಶುರು ಹಚ್ಚಿಕೊಂಡವು. ಅದೊಂದಿನ ಅವಳು ಅವಂಗೆ ಹೇಳೇ ಬಿಟ್ಲು, ನಂಗೆ ಈ ಕಾಲೂ ಮೆಸೇಜ್ ಇಷ್ಟವಾಗ್ತಿಲ್ಲ ,ನಾವ್ಯಾಕ್ ಯಾವಾಗದರೊಮ್ಮೆ ಕಾಲ್ ಮೆಸೇಜ್ ಮಾಡಬಾರದು?
ಅವಂಗೆ ಶಾಕ್! ಆದರೂ ಹೇಳಿದ, ಅದ್ರ ಅವಶ್ಯಕತೆ ಇದ್ಯಾ?
ಆಯ್ತು ಯಾವಾಗಲೋ ಒಮ್ಮೆ ಸಿಗೋಣ.
ಅಮೇಲ್ ಇಬ್ಬರ ನಡುವೆ ಒಂದು ತಿಂಗಲ್ವರ್ಗೆ ಮಾತಿಲ್ಲ-ಕಥೆಯಿಲ್ಲ (ಒಂದರ್ಥದಲ್ಲಿ ಅವನಲ್ಲಿ ಇವಳಿಲ್ಲಿ -ಮಾತಿಲ್ಲ-ಕಥೆಯಿಲ್ಲ!) ಆಮೇಲ್ ಒಮ್ಮೆ ಅವಂಗೆ ಮತ್ತು ಅವಳ್ಗೆ ಮನಸಾಲ್ಲಿ ಭಾವನೆ ಬಂದೆ ಬಿಡ್ತು,ಕಾಲ್ ಮೆಸೇಜ್ ಬೇಡ ಅಂತೇಳಿ , ನಾನ್ ತಪ ಮಾಡಿದ್ನೇನೋ?
ಮಾರನೆ ದಿನವೇ ಮತ್ತೆ ಅವಳಿಂದ ಅವಂಗೆ ಮೆಸೇಜ್ ಬಂತು, ನೀ ಇಲ್ಲದ ಇಸ್ಟ್ ದಿನ ನಂಗೆ ಅದೆಸ್ಟೋ ವರ್ಷಕ್ಕೆ ಸಮ!
ನಾವ್ ಮುಂಚಿನ ತರವೇ ಇರೊಣ!!
ಅವನು ಹೇಳ್ದ ಸರೀ ಯಾಕಾಗಬಾರದು?
ಮತ್ತೆ ರಾಗ-ಅನುರಾಗ- ಒಮ್ಮೊಮ್ಮೆ ಅಪಸ್ವರ, ಇದಾದಮೇಲೆ ಅವಳೊಮ್ಮೆ ಹೇಳಿದಳು 'ಅಲ್ಲ ನೀ ಯಾಕ್ ನಮ್ ಅಪ್ಪನ ಈ ವಿಸ್ಯವಾಗ್ ಮಾತಾಡ್ಬಾರ್ದು?
ಪ್ರೀತಿಲ್ ಮುಳ್ಗಿದ್ದ ಅವಂಗೆ, ಇವಳ ಈ ಮಾತು ಕೇಳುತ್ತಲೇ, ಶೇಕ್ ಆಗ್, ಅದೇನೋ ಸರಿ ಆದ್ರೆ ಈ ವಿಸ್ಯಾನ ಅದೆಂಗೆ ನಾ ನಿಮ್ ಪಾ' ಗೆ ಹೇಳಲಿ? ನಂಗ್ ಭಯವಾಗ್ತೆ.
ಅವ್ಳು, 'ಓಹೋ ಇದಕ್ಕೇನು ಕಡಮೆ ಇಲ್ಲ" ಮತ್ತೆ ನಂಗೆ ಮೆಸೇಜ್ ಮಾಡ್ವಾಗ, ಕಾಲ್ ಮಾಡ್ವಾಗ 'ಅದೇನೇನೋ' ಹೇಳ್ತಿರ್ತ್ಯ! ಇದಕ್ಕ ಧೈರ್ಯ ಸಾಲಲ್ವ?
ಅದಕ್ಕವನು, ಸರೀ ಈ ಸಾರ್ ಊರ್ ಕಡೆ ಬಂದಾಗ್, ಖಂಡಿತ ನಿಮ ಪಾ' ಜೊತೆ ಮಾತಾಡ್ತೀನ್.
ಅವನೊಮ್ಮೆ ಊರ್ಗೆ ಹೋದಾಗ್ ಅವಳ ಮನೆಗೊಗ್ ಅದೂ ಇದೂ ಮಾತಾಡ್ತಾ , 'ಮನಸಲ್ಲೇ ಮಂಡ್ಗೆ ತಿಂತಾ' ಈ ವಿಸ್ಯಾನ ಅದೆಂಗಪ್ಪ ಕೇಳಲಿ ಅಂತ , ಸಂದಿಗ್ದ ಸ್ಥಿತೀಲ್ ಇದ್ರೆ, ಅವಲೋ ಇವನ ಪಾಡು ನೋಡೋಕಾಗದೆ 'ಮುಸ್-ಮುಸಿ ನಗ್ತಿದ್ಲು'.... ಬೇಕ್ಕಿಗ್ ಚೆಲ್ಲಾಟ ,ಇಲಿಗ್ ಪ್ರಾಣ ಸಂಕಟ!!
ಕೊನೆಗ್ ಧೈರ್ಯ ಮಾಡ್, ಮಾವ ಅವ್ಳು ಜಾಬ್ ಹಿಡಿದಾಯ್ತಲ್ಲ ಮುಂದೆ ಏನು?
ಮಾವ: ಮುಂದೇನು ಅಂದ್ರೆ?
ಇವ: ಅಂದ್ರೆ ಮದ್ವೆ? ಆ ವಿಸ್ಯವಾಗ್ ನೀವ್ ಇದ್ವರ್ಗೆ ಏನು ಹೇಳಿಯೇ ಇಲ್ಲ?
ಓಹೋ ಮದ್ವೇನ? ಅದ್ರ ಬಗ್ಗೆ ನಾವಿನ್ ಯೋಚೆನೇನ್ ಮಾಡಿಲ್ಲ. ಅಲ್ದೆ ಅವ್ಳು ಈಗ ತಾನೇ ಕೆಲಸಕ್ ಸೇರವ್ಲೇ ,ಸ್ವಲ್ಪ ದಿನ ಹೋಗ್ಲಿ, ಅಮೇಲ್ ನೋಡೋಣ..
ಈ ವಿಚಾರ್ವಾಗೆ ಮಾತಾಡೋಕ್ ಬಂದಿದ್ದ್ದ ಅವಂಗೆ ಸಕತ್ ನಿರಾಸೆಯಾಗ್, ನೀವ್ ಯಾರ್ನಾರ ನೋಡಿದೀರಾ ಅಂದ,
ಅದಕ ಮಾವ ಇಲ್ಲ ಯಾರ್ನೂ ನೋಡಿಲ್ಲ, ನಿಜ ಹೇಳ್ಬೇಕಂದ್ರೆ ನಾವ್ ಅವಳ ಮದ್ವೆ ವಿಚಾರ್ವಾಗ್ ಇದ್ವರ್ಗೆ ಒಂದ್ಕಿತವೂ ಯೋಚ್ಸಿಲ್ಲ, ಹೌದು ನೀ ಅದ್ಯಾಕ್ ಮತ್-ಮತ್ತೆ ಅದನೆ ಕೇಳ್ತಿದ್ಯ?
ನಮಗಿಂತ ನಿಂಗೆ ಈ ವಿಸ್ಯವಾಗ್ ಹೆಚ್ಗೆ ಆಸಕ್ತಿ ಇರೊಂಗಿದೆ!
ಇವ್ನು ಹಾಗೇನಿಲ್ಲ,(ಮನಸ್ಸಲ್ ಮಾತ್ರ: ಅಲ್ದೆ ಏನು? ನಾ ಅವಳನ್ ಪ್ರೀತಿಸ್ತಿಲ್ವ?)
ಅದೆಂಗೋ ಧೈರ್ಯ ತಗಂಡ್ , ಮನೇಲ್ ಅಮ್ಮ-ಅಪ್ಪಂಗೆ ಅವಳ ಮೇಲ ಒಲವಿದೆ, ಅವಳನ ಮನೆ ಸೊಸೆ ಮಾಡಿಕೊಳ್ಳೋ ಆಶೆ ಇದೇ, ನಂಗೂ ಅವಳೆಂದ್ರೆ ಇಷ್ಟ, ಅದ್ಕೆ ನಾ ಕೇಳಿದ್.
ಮಾವನ್ಗೋ ಆಶ್ಚರ್ಯ ! ಭಲಾ ಹುಡುಗನೇ ನಂ ಮುಂದೇನೆ-ಚೆಡ್ಡಿ ಹಾಕೊಂಡ್ ಬೆಳದು ಈಗ ನಂ ಮುಂದೇನೆ ಕುಳತು ನನ್ನೇ ಮಗಳನ ಕೊಡ್ತ್ಯ ಅಂತ ಕೆಳ್ತಿಯಲ.
ನಾ ಈಗಲೇ ಅದರ ಬಗ್ಗೆ ಏನೂ ಹೇಳಕಾಗಲ್ಲ, ಇನ್ನೆರಡು ವರ್ಷ ಹೋಗ್ಲಿ ಆಮೇಲೆ ನೋಡೋಣ....
ಇವ ಆಲ್ ಇನ್ನೇನ್ ತಾನೇ ಮಾಡೋಕ್ ಸಾಧ್ಯ? ತೆಪ್ಪಗೆ ಜಾಗ ಖಾಲಿ ಮಾಡಿದ!!
ಅವ್ಳು ಅವನ್ನ ಬಿಡೋಕಂತ ರಸ್ಥೆವರ್ಗೆ ಬಂದ್ರೆ , ಈ ಶಿಷ್ಯ ಅವಳನ್ ಮೂರ್ ಸಾರ್ ಕಣ್ಣಲ ಕಣ್ಣಿಟ್ ನೋಡಿದ, ಅದು ಅವನು ಅವಳ ಕಂಗಳಲ್ಲಿ ತಂ ಬಗ್ಗೆ ಇರಬಹುದಾದ 'ಅದೇನೋ ಭಾವನೆಯನ್ನ' ಹುಡುಕ್ತಿದ್ದ, ಆದ್ರೆ ಅವ್ಳೋ, ಇವನ ಈ ಮೊದಲನೇ ಸಲದ 'ಆ ತರಹದ ' ನೋಟ ಎದುರ್ಸೋಕಾಗದೆ ಎರಡು ಸಾರ್ ಮಾತ್ರ ದಿಟ್ಟಿಸ ನೋಡ್ ಮಾತಾಡ, ಅಮೇಲ್ ಮೂರನೆ ಸಾರ್ ಅದೆಲ್ಲೋ ನೋಡ್ತಾ , ಸಾಕ್ ಹೋಗಪ್ಪ, ಪ್ಲೀಜ್ ಹೋಗಪ್ಪ ಯಾರಾರ ನೋಡ್ ಬಿಟ್ರೆ?
ಇವನೋ ಮನ್ಸಿಲ್ದ-ಮನಸಿಂದ ಅವಳ್ಗೆ ಬಾಯ್ ಹೇಳ್ ವಾಪಾಸ್ ಊರ್ಗೆ ಹೊರಟ.
ಅಮೇಲ್ ಮತ್ತೆ ಇವರ ಮೆಸೇಜ್ ಕಾಲು ಯಥಾ ಪ್ರಕಾರ್ ಸ್ವಲ್ಪ ದಿನ ನಡೆದು ಮತ್ತೆ ಇವ ಅದೊಮ್ಮೆ ಹೇಳ್ದ, ನನ್ನ ಮರಿತೀಯ? ಆಗುತ್ತಾ?
ನಿಮ್ ಪಾ ಬೇರೆ ಈಗ್ಲೂ ಖಚಿತವಾಗ್ ನಿನ್ನನ್ನ್ ನಂಗ್ ಕೊಡ್ತಿನನ್ಲೂ ಇಲ್ಲ, ಕೊಡೋದಿಲ್ ಅಂತ ಸ್ಪುಸ್ತವಾಗ್ ಹೇಳಲಿಲ್ಲ. ಈ ತರಹ 'ಅಡ್ಡ ಗೋಡೆ ಮೇಲೆ ದೀಪವಿಕ್ಕಿದ್ರೆ' ನಂ ಕಥೆ ಹೆಂಗೆ?
ಇದೆ ಲಾಸ್ಟ್ ಮೆಸೇಜ್, ನಾಳೆ ಕೊನೆದಾಗ್ ಕಾಲ್ ಮಾಡ್ ಮಾತಾಡ್, ಅಮೇಲ್ ಒಬ್ರನೋಬ್ರು ಮರ್ತು ಬಿಡೋಣ ಸರೀನಾ?
ಅವಲ್ಗಿದೇನೂ ಹೊಸದಲ್ವಳ, ತುಟಿಯಂಚಲೆ ನಕ್ಕು ಆಯ್ತು , ನೀ ಹೇಳ್ದಂಗೆ ಆಗ್ಲಿ,
ಮತ್ತೆ 'ಕೊನೆದಾಗ್' ಕಾಲ್ ಮಾಡ್ ಮಾತಾಡಿದ್ದು ಆಯಿತು,
ಬೈ - ಬೈ ಅಂದದ್ದೂ ಆಯ್ತು.
ಅದಾಗ್ ಎರಡೇ ದಿನ ಅಸ್ಟೇ!!
ಇವಂಗೆ ಇನ್ನು ಈ ಮೌನ- ಈ ಏಕಾಂತ ಸಹಿಸ್ಕೊಳೋಕೆ ಆಗಲ್ಲ, ನಂಗ್ ಅವ್ಳು ಬೇಕು ಅಂತನ್ಸ್ಲಿಕ್ಕೆ ಶುರುವಾಗ್ ಮಧ್ಯೆ ರಾತ್ರಿಯೇ ಅವಳ್ಗೆ ಮೆಸೇಜ್ ಕಳಿಸಿದ, ಸಾರಿ ಕಣೆ ಕೋಪದಲ್ ಏನೇನೋ ಅಂದ್ಬಿಟ್ಟೆ,
ಅವಳದನ್ನ ಅದಾಗಲೇ ನಿರೀಕ್ಷೆ ಮಾಡ ಆಗಿತ್. ಅವ್ಳು ನಗ್ತಾ ನನಗ್ಗೊತ್ತು ನೀ ಮತ್ತದೇ ರಾಗ ಹಾಡ್ತೀ ಅಂತ, ಸರಿ ಬಿಡು ನಂದು -ನಿಂದು ಬಿಡಲಾಗದ ಬಂಧ,
ಆದ್ರೆ ನೀ ಮತ್ತೆ ಮತ್ತೆ ಕಾಲು ಮೆಸೇಜ್ ಮಾಡೋದ್ ನಂಗಿಸ್ಟವಿಲ್ಲ,
ಸರೀನಾ?
ಇವಂಗೆ ಮತ್ತೆ ತಳಮಳ, ಛೆ! ಇವ್ಳು ಮತ್ತೆ ಅದೇ ಹೇಳ್ತಾಳಲ್ಲ.
ಮತ್ತೆ ಕಾಲು ಮೆಸೇಜ್ ಕಟ್,
ಆದ್ರೆ ಮತ್ತೆ ಮುಂದೆ ಮತ್ತೆ, ಮತ್ತೆ-ಮತ್ತೆ ಸರಸ-ವಿರಸ- ಆಗೋದು, ದೂರಾಗೋದು , ಒಂದಾಗೋದು ಇದ್ದೆ ಇದೆ!!
ಅದಿನ್ನೂ ಮುಂದುವರಿತಿದೆ........ ಅದಕ್ಕೆ ಸದ್ಯಕ್ಕಂತೂ ಕೊನೆಯಿಲ್ಲ.
ಮುಂದೇನು?
ನನಗೊತ್ತಿಲ್ಲ!!
ನಿಮಗೆ?
Comments
ಉ: ಅವನು-ಅವಳು -ಮತ್ತು ನಾವು...........
In reply to ಉ: ಅವನು-ಅವಳು -ಮತ್ತು ನಾವು........... by partha1059
ಉ: ಅವನು-ಅವಳು -ಮತ್ತು ನಾವು...........
ಉ: ಅವನು-ಅವಳು -ಮತ್ತು ನಾವು...........
In reply to ಉ: ಅವನು-ಅವಳು -ಮತ್ತು ನಾವು........... by makara
ಉ: ಅವನು-ಅವಳು -ಮತ್ತು ನಾವು...........
ಉ: ಅವನು-ಅವಳು -ಮತ್ತು ನಾವು...........
In reply to ಉ: ಅವನು-ಅವಳು -ಮತ್ತು ನಾವು........... by kavinagaraj
ಉ: ಅವನು-ಅವಳು -ಮತ್ತು ನಾವು...........