ನೀರು ತಬ್ಬುವ ಬಂಡೆ

ನೀರು ತಬ್ಬುವ ಬಂಡೆ

ಈ ಆಕ್ರಮಣದ ಯುಗದಲ್ಲಿ
ನಂಬಿಕೆಯ ಗುತ್ತಿಗೆ ಹಿಡಿದ ಧಾರ್ಮಿಕ ಮೂಲಭೂತವಾದಿ
ನುಡಿಯ ಗುತ್ತಿಗೆ ಹಿಡಿದ ಭಾಷಾ ಮೂಲಭೂತವಾದಿ
ಕನಸು ಗುತ್ತಿಗೆ ಹಿಡಿದ ಮಾರ್ಕೆಟ್ಟಿನ ಮೂಲಭೂತವಾದಿ
ಕಲೆಯ ಗುತ್ತಿಗೆ ಹಿಡಿದ ಜನಪ್ರಿಯತೆಯ ಮೂಲಭೂತವಾದಿ
ಇದ್ದಿದ್ದಲ್ಲೇ ಅವತರಿಸುತ್ತಾರೆ.

ಆದರೆ,
ಕಲ್ಲುಬಂಡೆಗಳಿಗೆ ಎಡೆಮಾಡಿಕೊಟ್ಟು
ಅವನ್ನು ತಬ್ಬುವಂತೆ ಕಂಡರೂ
ಬಳಸಿ ಹರಿವ ನದಿಯ ಹಾಗೆ
ಜನಪದ
ವಿದ್ಯೆ, ಆರೋಗ್ಯ ಹಾಗು ಅವಕಾಶಗಳ
ಹಂಬಲವನ್ನು ಎದೆಯಲ್ಲಿ ಕಾಪಾಡಿಕೊಂಡು
ಮಟ್ಟವನ್ನು ಹುಡುಕುತ್ತಾ ಹರಿಯುತ್ತಲೇ ಇರುತ್ತದೆ.

ಈ ನನ್ನ ಮಾತು ವೇದವಾಕ್ಯದಂತೆ ಕಂಡರೆ
ದಯವಿಟ್ಟು ಮನ್ನಿಸಿ, ಅದು ನನ್ನ ಉದ್ದೇಶವಲ್ಲ.

 

Rating
No votes yet

Comments