ಸಂಬಂಧ
ಕವನ
''ಸಂಬಂಧ" ಒಂದು ಸವಿಯಾದ ಅನುಬಂಧ,
ಜನುಮ ಜನುಮದ ಹೃದಯಾನುಬಂಧ.
ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಪತಿ-ಪತ್ನಿ,
ಹೀಗಿದೆ ಸಂಬಂಧಗಳ ಸರಮಾಲೆ,
ಆ ದೇವ ನಮಗೆ ತೊಡಿಸಿಹ ಇದರ ಸಂಕೋಲೆ.
ಸಂಬಂಧಗಳ ಉಳಿವು-ಅಳಿವು ಇರುವುದು ನಮ್ಮ ಕೈಯಲ್ಲೇ,
ಇದೆಲ್ಲಾ ಮೇಲೆ ಇರುವವನ ಒಂದು ಲೀಲೆ!
ಪ್ರೀತಿ-ನಂಬಿಕೆ ಮೇಲೆ ನಿಂತಿದೆ ಸಂಬಂಧಗಳ ಗಟ್ಟಿತನ,
ಇದನ್ನು ತಿಳಿಯದೇ ಆಗುತ್ತಿದೆ ಮನೆ ಮನೆಗಳಲ್ಲಿ ಕದನ.
ಕುರುಕ್ಷೇತ್ರದಲ್ಲಿ ಯುದ್ಧ ಮಾಡಲು ನಿಂತಿದ್ದ ಪಾರ್ಥನಿಗೆ,
ಶಸ್ತ್ರ ಕೆಳಗಿಳಿಸಲು ಮಾಡಿದ್ದು ಈ ಸಂಬಂಧಗಳೇ,
ಇದಕ್ಕಾಗಿ ಶ್ರೀ ಕೃಷ್ಣ ಬೋಧಿಸಬೇಕಾಯ್ತು ಭಗವದ್ಗೀತೆ ಅರ್ಜುನನಿಗೆ,
'ತಾನಿಲ್ಲಿ ನಿಮಿತ್ತ ಮಾತ್ರ " ಎಂದರಿವಾಯ್ತು ಆಗ ಆತನಿಗೆ.
ಬೇರೇನು ಹೇಳಲಿ ಈ ಸಂಬಂಧಗಳ ಬಗ್ಗೆ,
ಈ ಲೋಕದಲ್ಲಿ ಇರುವವರೆಗೆ ಇರಬೇಕು,
ಸಂಬಾಂಧವ್ಯದೊಳಗೆ.
Comments
ಉ: ಸಂಬಂಧ
ಉ: ಸಂಬಂಧ
ಉ: ಸಂಬಂಧ
In reply to ಉ: ಸಂಬಂಧ by Nandish.H.B
ಉ: ಸಂಬಂಧ