ಕನ್ನಡ ಅನುವಾದಕರಿಗೆ ಪುನರ್ಮನನ ಶಿಬಿರ

ಕನ್ನಡ ಅನುವಾದಕರಿಗೆ ಪುನರ್ಮನನ ಶಿಬಿರ

 ರಾಷ್ಟ್ರೀಯ ಅನುವಾದ ಮಿಶನ್

ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ,

ಹುಣಸೂರು ರಸ್ತೆ, ಮಾನಸಗಂಗೋತ್ರಿ, ಮೈಸೂರು.

 

ರಾಷ್ಟ್ರೀಯ ಅನುವಾದ ಮಿಷನ್ ಸಂವಿಧಾನದ 8ನೇ ಅನುಚ್ಛೇದದಲ್ಲಿ ಪಟ್ಟಿಮಾಡಿರುವ ಎಲ್ಲ ಭಾರತೀಯ ಭಾಷೆಗಳ ಜ್ಞಾನಾಧಾರಿತ ಪಠ್ಯಗಳು ಭಾಷಾಂತರದ ಮೂಲಕ ಲಭ್ಯವಾಗುವಂತೆ ಮಾಡುವ ಭಾರತ ಸರ್ಕಾರದ ಪ್ರಯತ್ನವಾಗಿದೆ. ಆಂಗ್ಲಭಾಷೆಯಲ್ಲಿ ಮಾತ್ರ ಲಭ್ಯವಿರುವಂತಹ ಜ್ಞಾನಾಧಾರಿತ ಪಠ್ಯಪುಸ್ತಕಗಳನ್ನು ಅನುವಾದಿಸಿ, ಗ್ರಾಮೀಣ ಮತ್ತು ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಸುಲಭವಾಗಿ ಕೈಗೆಟಕುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ಧೇಶ.

 

ವಿವಿಧ ವಿಷಯಗಳ ಜ್ಞಾನಪಠ್ಯಗಳನ್ನು ಇಂಗ್ಲಿಶಿನಿಂದ ಕನ್ನಡಕ್ಕೆ ಅನುವಾದಿಸಲು ಬೇಕಾಗಿರುವ ತರಬೇತಿಯನ್ನು ನೀಡುವ ಉದ್ಧೇಶದಿಂದ ರಾಷ್ಟ್ರೀಯ ಅನುವಾದ ಮಿಷನ್ ಈ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಯಾವುದೇ ಶಿಸ್ತಿನ ಆಸಕ್ತ ವಿದ್ಯಾರ್ಥಿಗಳಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಮತ್ತು ಅನುವಾದಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಿದೆ. ಈ ಕಾರ್ಯಕ್ರಮದಲ್ಲಿ ಅನುವಾದ ಕ್ಷೇತ್ರದ ನುರಿತ ವಿದ್ವಾಂಸರುಗಳು ತರಬೇತಿ ನೀಡಲಿದ್ದಾರೆ.

 

ದಿನಾಂಕ: 22 ರಿಂದ 24 ಸೆಪ್ಟಂಬರ್, 2011,

ಸ್ಥಳ: ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

 

ಆಸಕ್ತರು ಹೆಚ್ಚಿನ ಮಾಹಿತಿಗಾಗಿ  ಸಂಪರ್ಕಿಸಿ : ಜ್ಞಾನಮೂರ್ತಿ- 9986048159, jnanabelur@gmail.com

 

ವಿ.ಸೂ.: ಮೊದಲು ಬಂದವರೆಗೆ ಮೊದಲ ಆದ್ಯತೆ. 30 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶ.

Rating
No votes yet

Comments