ನಿಲ್ಲದು ಅಮಾಯಕರ ಸಾವು ನೋವು

ನಿಲ್ಲದು ಅಮಾಯಕರ ಸಾವು ನೋವು

ದೇಶವು ನಡುಗುತ್ತದೆ ಪ್ರತಿ ಬಾರಿ ಬಾಂಬ್ ಸ್ಫೋಟಿಸಿದಾಗ

ಉಗ್ರರು ಗಹಗಹಿಸಿ ನಗುತ್ತಾರೆ ಪ್ರತಿ ಬಾರಿ ಸ್ಫೋಟಿಸಿದಾಗ

 

ಘೋಷಿಸುತ್ತಾರೆ ಕಟ್ಟೆಚ್ಚರ ಪ್ರತಿ ಬಾರಿ ಸ್ಫೋಟಿಸಿದಾಗ

ಮರೆಯುತ್ತಾರೆ ಕಟ್ಟೆಚ್ಚರ ಮತ್ತೊಮ್ಮೆ ಸ್ಫೋಟಿಸುವವರೆಗೂ

 

ನಾಯಕರು ನೀಡುತ್ತಾರೆ ಅದೇ ಹಳೆ ಹೇಳಿಕೆ ಸ್ಫೋಟಿಸಿದಾಗ

ಉಗ್ರರು ಒಪ್ಪಿಕೊಳ್ಳುತ್ತಾರೆ ತಮ್ಮದೇ ಕೈವಾಡವೆಂದು ಸ್ಫೋಟಿಸಿದಾಗ

 

ಸೆರೆಹಿಡಿದ ಉಗ್ರರ ಶಿಕ್ಷಿಸುವವರೆಗೂ ಸ್ಫೋಟಿಸುತ್ತಿರುತ್ತಾರೆ

ಇವರು ಶಿಕ್ಷಿಸುವುದಿಲ್ಲ ಅವರು ಬಿಡುವುದಿಲ್ಲ..ನಿಲ್ಲದು ಅಮಾಯಕರ ಸಾವು ನೋವು
Rating
No votes yet

Comments