ಸತ್ಯಂ ಶಿವಂ ಸುಂದರಂ
ಕವನ
ಸೌಂದರ್ಯವೆಂದರೆ .......
ನೀಲಿ ಬಾನು,
ಮಿನುಗು ತಾರೆ,
ಪೂರ್ಣ ಚಂದಿರ.
ಹರಿವ ನದಿ,
ಮೊರೆವ ಕಡಲು,
ದಟ್ಟ ಕಾನು, ಬೆಟ್ಟ ಸಾಲು.
ಹಾರುವ ಹಕ್ಕಿ,
ನಗುವ ಹೂವು,
ಸಾರ್ಥಕ ಬಾಳು.
ಮಕ್ಕಳ ನಗು,
ಯುವಜನರ ಉತ್ಸಾಹ,
ವೃದ್ಧರ ಅನುಭವ.
ಆಕೃತಿಯೊಳಗೆ ಸೌಂದರ್ಯವಿಟ್ಟ,
ಅದ ಗ್ರಹಿಸುವ ಇಂದ್ರಿಯ ಕೊಟ್ಟ,
ಆ ಅಸೀಮ ಕೃಪೆ.
ಸತ್ಯಂ ಶಿವಂ ಸುಂದರಂ,
ಸತ್ಯಂ ಶಿವಂ ಸುಂದರಂ.
Comments
ಉ: ಸತ್ಯಂ ಶಿವಂ ಸುಂದರಂ
In reply to ಉ: ಸತ್ಯಂ ಶಿವಂ ಸುಂದರಂ by shekar_bc
ಉ: ಸತ್ಯಂ ಶಿವಂ ಸುಂದರಂ
In reply to ಉ: ಸತ್ಯಂ ಶಿವಂ ಸುಂದರಂ by shekar_bc
ಉ: ಸತ್ಯಂ ಶಿವಂ ಸುಂದರಂ
In reply to ಉ: ಸತ್ಯಂ ಶಿವಂ ಸುಂದರಂ by manju787
ಉ: ಸತ್ಯಂ ಶಿವಂ ಸುಂದರಂ