ಸವಿ ಗಜಾನನ
ಕವನ
ಸವಿ ಗಜಾನನ
ಗಣಪ ನಿನಗೆ ನಾ | ಕೊಡುವೆ ನೀದಿನಾ
ಉಂಡೆ ಲಾಡು ಕಡುಬು ಕೀರು ಸವಿ ಗಜಾನನ ||ಪ||
ಆನೆಮುಖದಲಿ | ಚೆಲುವನೆನುತಲಿ ||
ನಿನ್ನ ನೋಡುವಾಸೆ ನಮಗೆ ಬಾರೋ ದಯದಲಿ ||೧||
ಉಬ್ಬಿದುದರಕೆ | ತುಂಬಿಕೊಳ್ಳದೇ ||
ಮರೆಯೊಳಿರುವ ಗಣಪ ನಿನ್ನ ಕೂಗಿ ಕರೆಯುವೆ ||೨||
ಇಲಿಯನೇರಿ ಬಾ | ಹಾವ ಸುತ್ತಿ ಬಾ ||
ನಾಕು ಕೈಯೊಳಭಯವನ್ನು ಎತ್ತಿ ತೋರು ಬಾ ||೩||
ಮುಖದ ಮೆಲುನಗೆ | ಜಗದ ಪರಿ ಬಗೆ |
ಕಾಣುವಾಗ ಪ್ರೀತಿಯೊಸರಿ ಮಿಂಚಿತು ಹೀಗೆ ||೪||
- ಸದಾನಂದ
Comments
ಉ: ಸವಿ ಗಜಾನನ
In reply to ಉ: ಸವಿ ಗಜಾನನ by Saranga
ಉ: ಸವಿ ಗಜಾನನ