ಚಲೊ ಮಲ್ಲೇಶ್ವರ - 13
ಚಲೊ ಮಲ್ಲೇಶ್ವರ - ೧೨
ನನಗೆ ಮಲ್ಲೇಶ್ವರ ಮಲೇಶಿಯಾದ ರೀತಿ ಅನ್ನಿಸಿದಾಗಲು, ಮಲ್ಲೇಶ್ವರಕ್ಕೆ ಹೋಗುವ ಅಗತ್ಯವಂತು ಬಂದಿತ್ತು, ಹಾಗಾಗಿ ಹೊರಟೆ ಅಂದೆನಲ್ಲ, ಆ "ಬಾರಿಮುತ್ತು" ವಿನ ಪ್ರಸಂಗದ ನಂತರ, ಸಿ.ಇ.ಟಿ ಒಳಗೆ ಕುಳಿತಿದ್ದಾಗಲು ನನಗೆ ಚಲೊ ಮಲ್ಲೇಶ್ವರದ ಗೆಳೆಯರ ನೆನಪು ಬರುತ್ತಿತ್ತು,ಸರಿ ಅಲ್ಲಿಯ ಕೆಲಸವೆಲ್ಲ ಮುಗಿಸಿ ಹೊರಬಂದೆ, ಯಥಾಪ್ರಕಾರ ಮಗಳು ಅಪ್ಪ ಏನಾದರು ಚಾಟ್ಸ್ ಕೊಡಿಸಿ ಅಂದಳು, ನಾನು ಬುದ್ದಿ ಉಪಯೋಗಿಸಿ ಚಾಟ್ಸ್ ಜೊತೆ ಐಸ್ಕ್ರೀಮ್ ಕೊಡಿಸಿದೆ, ಅವಳಿಗೆ ಆಶ್ಚರ್ಯ, ಹಾಗು ಅನುಮಾನ, ಕಡೆಗೆ ಹೇಳಿದೆ,
"ನೋಡು ನನಗೆ ಮಲ್ಲೇಶ್ವರದಲ್ಲಿ ಸ್ವಲ್ಪ ಕೆಲಸವಿದೆ, ನೀನು ಬಸ್ ಹತ್ತಿ ಮನೆಗೆ ಹೊರಡು, ನಾನು ಸ್ವಲ್ಪ ನಿದಾನ ಮಾಡಿ ಬರ್ತೀನಿ" ಅಂತ.
ಅದಕ್ಕವಳು "ನೀನು ಮೊದಲೆ ಹೇಳಿದ್ದರೆ ನಾನು ಐಸ್ ಕ್ರೀಮ್ ತಿನ್ನುತ್ತಲೆ ಇರಲಿಲ್ಲ" ಅಂದವಳು ಕಡೆಗೆ ಒಪ್ಪಿದಳು, ತಾಯಿ ಮಗಳನ್ನು ೧೮ನೇ ಕ್ರಾಸಿನ ಬಸ್ ಸ್ಟಾಪಿನಲ್ಲಿ ಮನೆಯ ಬಸ್ ಹತ್ತಿಸಿ, ನಾನು ಈ ಯಡವಟ್ಟು ಗುಂಪನ್ನು ಅರಸಿ ಹೊರಟೆ.
ಎಲ್ಲಿ ಹುಡುಕುವುದು ಅನ್ನಿಸಿದಾಗ, ಹೊಳೆಯಿತು, ಇನ್ನೆಲ್ಲಿ ಇರುತ್ತಾರೆ, ದೇವಸ್ಥಾನಗಳನ್ನು ನೋಡುತ್ತ ಹೊರಟೆ, "ಹುರ್ರಾ,,, ಶೇರ್ಲಾಕ್ ಹೋಮ್", ದೇವಾಲಯದ ಹೊರಬಾಗದ ಮೆಟ್ಟಿಲ ಮೇಲೆ ಎಲ್ಲ ಕುಳಿತ್ತಿದ್ದರು, ರಾಮ್ ಮೋಹನ, ಜಯಂತ್, ಚಿಕ್ಕು,ಮಂಜು ಮತ್ತೊಬ್ಬರು ಯಾರು? ಓ ತಿಳಿಯಿತು, ಆತ್ರಾಡಿ ಸುರೇಶ್ ರವರು, ಮಲ್ಲೇಶ್ವರ ಚಲೊಗೆ "ಚಲೊ ..." ಅಂತ ಹಸಿರು ಬಾವುಟ ತೋರಿಸಿದವರು. ಒಳಿತೆ ಆಯಿತು ಅಂತ ನಾನು ಅಲ್ಲಿಗೆ ಹೋದೆ..
ನನ್ನನ್ನು ಕಂಡ ಮಂಜು "ಓ ಬನ್ನಿ.. ನೀವು ಮನೆಗೆ ಹೋಗಲಿಲ್ಲವ ಮತ್ತೆ ಬಂದಿರಿ ಅಂದರು" ,
ನಾನು "ನಿಮ್ಮನ್ನೆಲ್ಲ ಇಲ್ಲಿ ಮಲ್ಲೇಶ್ವರದ ನಡುರಸ್ತೆಲಿ ಬಿಟ್ಟು ನಾನೊಬ್ಬ ನೆಮ್ಮದಿಯಾಗಿ ಹೇಗೆ ಹೋಗಲಿ " ಅನ್ನುತ್ತ, ಸುರೇಶರವರನ್ನು "ಏನು ಸಾರ್ ನೀವು ಸೇರಿದ್ದೀರಿ" ಎಂದೆ,
ಅವರಾಕೊ ಗರಂ ಆಗಿದ್ದರು "ಮತ್ತೇನ್ರಿ ಮಾಡೋದು, ನಾನು ಚಲೊ ಅಂದರೆ ನೀವಿಲ್ಲಿ ಸುಮ್ಮನೆ ಓಡಾಡುತ್ತ, ಏನು ಮಾಡದೆ ತಿರುಗಿತ್ತಿದ್ದೀರಲ್ಲ" ಅಂದರು,
ನನ್ನ ಮತಿಗೆ ಹೊಳೆದ "ಡೌಟನ್ನು" ಅವರು ಪದವಾಗಿ ಹೊರಹಾಕಿದಾಗ ನನಗೆ ಖುಶಿಯಾದರು, ಏಕೊ ಇದು ಸುರೇಶರ ಮಾತಲ್ಲೆವೇನೊ ಅನ್ನಿಸಿತು, ನಾನು ಅದನ್ನೆ ಅಂದೆ "ಸುರೇಶರೆ ನೀವು ನಿಮ್ಮ ಎರಡು ಸಾಲಿನ ಪ್ರಾಸಬದ್ದವಾದ ರೀತಿಯಲ್ಲಿ ಹೇಳಿದರೆ ಮಾತ್ರ ನನಗೆ ಅರ್ಥವಾಗುತ್ತೆ" ಅಂತ ಕೆಣಕಿದೆ, ಅದಕ್ಕವರು ನಗುತ್ತ ಅಂದರು.
"ನಾನು ಕೊಟ್ಟೆ ನಿಮಗೆ ಚಲೊ ಅನ್ನುವ ಸೂಚನೆ
ನೀವಿಲ್ಲಿ ಅಲೆದಾಡುತ್ತಿದ್ದೀರಿ ಮಾಡದೆ ಯೋಚನೆ"
ನಾನು ಖುಶಿಯಾಗಿ, "ನನದೆ ಅದೆ ಅನ್ನಿಸಿತ್ತು, ಚಲೊ ಮಲ್ಲೇಶ್ವರದ ಗುರಿಯೇನು, ಅಂತ, ಇದೇನು ಸ್ವಾತಂತ್ರ ಚಳುವಳಿಯೆ, ಅಣ್ಣ ಹಾಜಾರೆಯವರ ಚಳುವಳಿಯೆ, ಇದರ ಗುರಿ ಏನಾಗಿರಬೇಕು, ನೀವೆ ಹೇಳಿ ಮಂಜು" ಅಂದೆ.
ಮಂಜುರವರು "ಪಾರ್ಥವರೆ ಒಂದು ಕೆಲಸ ಮಾಡೋಣ, ಚಲೊ ಮಲ್ಲೇಶ್ವರವನ್ನು , ಮಲ್ಲೇಶ್ವರದ ಅನ್ವೇಶಣೆ, ಅಂದರೆ ಡಿಸ್ಕವರಿ-ಮಲ್ಲೇಶ್ವರವನ್ನಾಗಿಸೋಣವೆ?" ಅಂದರು, ಅವರ ಕೈ ಆಗಲೆ ಕ್ಯಾಮರವನ್ನು ತಡವುತ್ತಿತ್ತು, ಜಯಂತರು ಹೊಸ ಕವನ ರಚಿಸಲು ಪೇಪರ್ ಪೆನ್ನು ಹುಡುಕುತ್ತಿದ್ದರೆ, ಚಿಕ್ಕು ದೇವಾಯದ ಮುಂದಿದ್ದ ಮರದ ಮೇಲೆ ನೋಡುತ್ತಿದ್ದರು. ನನಗೆ ಅನ್ನಿಸಿದ್ದನ್ನೆ ಎಲ್ಲರು ಹೇಳುತ್ತಿರುವುದು ನನಗೆ ಸಂತೋಷ ಕೊಟ್ಟಿತು,
ನಾನು "ಅದೆ ಸುರೇಶರೆ ಮಲ್ಲೇಶ್ವರ ಇಷ್ಟು ಇತಿಹಾಸ ಪ್ರಸಿದ್ದವಾದ ಬೆಂಗಳೂರಿನ ಬಾಗವಾದರು, ಹೊರಗಿನವರಿಗೆ ಅದರ ಪೂರ್ಣ ಪರಿಚಯವೆ ಇಲ್ಲ, ಮಲ್ಲೇಶ್ವರ ಅಂದರೆ ಸಂಪಿಗೆ ರಸ್ತೆಯಷ್ಟೆ ನಮಗೆಲ್ಲ ಪರಿಚಿತ, ಹಾಗಾಗಿ ಮಲ್ಲೇಶ್ವರವನ್ನು ಉದ್ದುದ್ದವಾಗಿ, ಸ್ವಸ್ತಿಕ್ ಟಾಕೀಸಿನಿಂದ (?) ಸರ್ಕಲ್ ಮಾರಮನ ದೇವಾಲಯದ ವರೆಗು, ಅಗಲವಾಗಿ ಹೇಗೆ ಹೇಳುವುದು ನನಗೆ ಗೊತ್ತಿಲ್ಲ, ಇಂತ ಮಲ್ಲೇಶ್ವರವನ್ನು ನಮಗೆಲ್ಲ ನೀವೇಕೆ ದರ್ಶನ ಮಾಡಿಸಬಾರದು" ಅಂದೆ.
ಅದಕ್ಕವರು "ಸಾದ್ಯವಾಗದು, ಅದಕ್ಕೆ ಒಂದು ತಾಂತ್ರಿಕ ತೊಡಕಿದೆ" ಎಂದರು, ನಾನು ಆಶ್ಚರ್ಯದಿಂದೆ ಏನದು ಅಂತ ಕೇಳಿದರೆ ಅವರು
"ಈ ಚಲೊ ಮಲ್ಲೇಶ್ವರಕ್ಕೆ ಗಣೇಶರನ್ನೆ ಕ್ಯಾಪ್ಟನ್ ಅಂತ ಆರಿಸಿಯಾಗಿದೆ, ಒಮ್ಮೆ ಅವರು ಕ್ಯಾಪ್ಟನ್ ಆದ ನಂತರ ಅವರ ನಾಯಕತ್ವವಿಲ್ಲದೆ ನಾವೇನು ನಿರ್ದರಿಸುವ ಹಾಗಿಲ್ಲ" ಎಂದರು,
ಸರಿ ಗಣೇಶರು ಸಿಕ್ಕರೆ ಈ ಪ್ರಸ್ತಾಪ ಇಡುವುದು, ಎಲ್ಲರಿಗೆ ಮಲ್ಲೇಶ್ವರ ದರ್ಶನ ಮಾಡಿಸುವ ನಾಯಕತ್ವ ನೀವು ವಹಿಸಿ ಅಂತ ಕೇಳುವುದು ಅನ್ನಿಸಿತು,
ಅರೆ ಹೌದಲ್ಲ್ವ ಅಂದಹಾಗೆ ಎಲ್ಲಿ ಈ ಗಣೇಶರು, ನಾನು ಅದನ್ನೆ ಕೇಳಿದೆ "ಸರಿ ಚಿಕ್ಕು ಗಣೇಶರೆಲ್ಲಿ" ಒಳಗೆ ಕುತೂಹಲ ಅವರನ್ನು ನೋಡಬಹುದಲ್ವ ಅಂತ, ಬಾರಿಮುತ್ತುವಿನ ಪ್ರಸಂಗದಲ್ಲಿ ಅವರನ್ನು ತೀರ ದೂರದಿಂದೆ ನೋಡಿದ್ದೆ , ಅವರನ್ನು ಗುರುತು ಹಿಡಿಯುವ ಹಾಗಿರಲಿಲ್ಲ, ಚಿಕ್ಕು ನನ್ನನ್ನು ಕೆಟ್ಟ ಲುಕ್ ಕೊಟ್ಟು ನೋಡಿದರು,
"ಎಲ್ಲ ನೀವು ಕಳಿಸಿದ, ಬಾರಿಮುತ್ತುವಿನ ಪ್ರಭಾವ ಪಾರ್ಥಾವ್ರೆ" ಅನ್ನೋದೆ, ನನಗೆ ಕಸಿವಿಸಿಯಾಯಿತು, ಇದೆಂತ ಅಪವಾದ, ಈ ಬಾರಿ ಗಣೇಶ ಹಬ್ಬದಂದು ಏನಾದರು, ಚಂದ್ರದರ್ಶನ ಮಾಡಿದೆನೆ ಎಂದು ನೆನಪಿಸಿಕೊಂಡೆ. ಗಣೇಶನ ಹಬ್ಬವೇನು, ಬೆಂಗಳೂರಿನಲ್ಲಿ ತಲೆಯಿತ್ತಿ ಚಂದ್ರನನ್ನು ನೋಡಿ ಎಷ್ಟೊ ವರ್ಷಗಳು ಕಳೆದಿವೆಯಲ್ಲ ಅನ್ನಿಸಿತು. ನಾನು ಸುಮ್ಮಸುಮ್ಮನೆ ವಿವರಣೆ ಕೊಡುದಾಯಿತೆ,
"ಚಿಕ್ಕು ಇದೆಲ್ಲ ಸುಮ್ಮನೆ ಹಬ್ಬಿಸಿರುವ ಸುದ್ದಿ,ನನಗೆ ಮಲ್ಲೇಶ್ವರವಾಗಲಿ ಬಾರಿಮುತ್ತುವಾಗಲಿ ಪರಿಚಯವಿಲ್ಲ, ಈ ದಿನವೆ ಎರಡನ್ನು ನೋಡುತ್ತಿರುವುದು, ನೀವು ಸುಮ್ಮನೆ ಗಣೇಶರ ಕಾಲೆಳೆಯುತ್ತಿದ್ದೀರಿ,ಇಲ್ಲಿ ಬಂದಿರುವುದು ನಾನು ಸಿ.ಇ.ಟಿಗಾಗಿ ಅಷ್ಟೆ, ನೀವು ಯಾವೊದೊ ಭ್ರಮೆಯಲ್ಲಿದ್ದೀರಿ, ಅದಿರಲಿ ನೀವು ಸದಾ ಪಕ್ಷಿಯ ಚಿತ್ರ ತೆಗಿತಿರಿ ಅಂತಿರ್ತಾರಲ್ಲ" ಅಂದೆ, ಅದಕ್ಕೆ ಚಿಕ್ಕು ಕೋಪದಿಂದ
"ಎಂತದು ಇಲ್ಲ ನಾನು ಯಾವ ಫೋಟೊವನ್ನು ತೆಗೆದಿಲ್ಲ ಅಸಲಿಗೆ ನನ್ನ ಹತ್ರ ಕ್ಯಾಮರಾನೆ ಇಲ್ಲ " ಅಂದರು, ನಾನು ಆಶ್ಚರ್ಯದಿಂದ "ಮತ್ತೆ ಅದೇನು ಕೈನಲ್ಲಿ ಅಂದೆ"
"ನೀವೆ ನೋಡಿ ಅದು ಬರಿ ಬೈನಾಕ್ಯೂಲರ್, ಅಷ್ಟೆ, ಅದನ್ನು ಎಲ್ಲ ಕ್ಯಾಮರ ಅಂತ ಭಾವಿಸಿದ್ದಾರೆ, ನಾನು ಏನು ಮಾಡಲಿ ಅಂತ" ಅಂತ ನನ್ನ ಕೈಗೆ ಕೊಟ್ಟರು, ಚಿಕ್ಕು ಹೇಳಿದ್ದು ನಿಜವಿತ್ತು, ಅದು ಕ್ಯಾಮರಾನೆ ಅಲ್ಲ, ಈಗ ಚಿಕ್ಕು ಗಣೇಶರ ಕಾಲೆಳೆಯುವದಕ್ಕೆ ಕಾರಣ ಸಿಕ್ಕಿತ್ತು.ಮತ್ತೆ ಈ ಜಯಂತ್ " ನಾನು ಅಲ್ರಿ ಜಯಂತ್ ನೀವ್ಯಾಕೆ ಪದೆ ಪದೆ ೧೦೮ ಸುತ್ತು ಹೋಗ್ರಿರಂತೆ, ಅಂದೆ"
"ಎಲ್ಲಿ ಪಾರ್ಥಸಾರಥಿಯವರೆ, ಅಷ್ಟೊಂದು ಸುತ್ತು ಪದೆ ಪದೆ ಆಗುತ್ತ ನನ್ನ ಕಾಲು ಸವೆದೋಗುತ್ತೆ ಅಷ್ಟೆ, ನನ್ನ ಪದೆ ಪದೆ ಮರಿಪೂಜಾರಿ ಅಂತಿದ್ರಲ್ಲ ಅದಕ್ಕೆ ಒಳಗೆ ಹೋಗಿ ಸುಮ್ಮನೆ ಇರ್ತಿದ್ದೆ ಅಷ್ಟೆ" ಅಂದರು,
ಓ ಜಯಂತರ ಸಮಾಚಾರ ಇದ್ದು, ಎಲ್ಲ ಸಮಸ್ಯೆಗಳ ಪರಿಹಾರ ಹೊಳೆದಿತ್ತು, ಆದರೆ ಈ ಗಣೇಶರು ಎಲ್ಲಿ ಅದೆ ತಿಳಿಯುತ್ತಿಲ್ವೆ,
ನಾನು "ಮಂಜು ಸಾರ್ ನೀವಾದ್ರು ಹೇಳಿ ಗಣೇಶರು ಎಲ್ಲಿ" ಎಂದೆ, ಅದಕ್ಕವರು
" ದೇವಾಲಯದ ಒಳ್ಗೆ ಹೋಗಿದ್ದಾರಂತೆ, ಹೋಗಿ ಮೂರು ಗಂಟೆಯ ಮೇಲಾಯ್ತು, ಬಾರಿಮುತ್ತುವಿನ ಹೆದರಿಕೆ ನಿವಾರಿಸಿದರೆ, ಗಣೇಶನಿಗೆ ಮೂರುಸುತ್ತು ಬರ್ತೀನಿ ಅಂತ ಹರಕ್ಕೆ ಕಟ್ಟಿದ್ರಂತೆ, ಅದನ್ನು ತೀರಿಸಲು ಹೋಗಿದ್ದಾರೆ" ಅಂದರು. ನನಗೆ ಆಶ್ಚರ್ಯ,
"ಮತ್ತೆ ಮೂರು ಸುತ್ತು ಅಂದರೆ ಇಷ್ಟೊತ್ತಿಗೆ ಹೊರಬೇಕಲ್ವೆ" ಅಂದೆ.ಅದಕ್ಕೆ ರಾಮಮೋಹನರು,
"ನೀವು ಗಣೇಶರನ್ನ ನೋಡಿದ್ದೀರ? ಅದಕ್ಕೆ ನಿಮಗೆ ಅರ್ಥವಾಗಿಲ್ಲ, ಅವರಿಗೆ ಒಳಗೆ ಮೂರು ಸುತ್ತು ಬರಲು, ಮೂರುಗಂಟೆಗಿಂತ ಹೆಚ್ಚು ಸಮಯವೆ ಬೇಕು, ಅದಕ್ಕೆ ಅವರು ೧೦೮ ಅಂದರೆ ಸಾಕು ಬೆಚ್ಚಿ ಬೆವತುಬಿಡುತ್ತಾರೆ ಅವರು ಮೂರುಸುತ್ತು ಮುಗಿಸಿ ಬರಲು ಕಾಯುತ್ತಿದ್ದೇವೆ ಇನ್ನೇನು ಈಗ ಬರಬಹುದು, ಅವರ ಜೊತೆ ಸತೀಶರು ಹೋಗಿದ್ದಾರೆ " ಅಂದರು.
ಅಷ್ಟರಲ್ಲಿ ಹಿಂದಿನಿಂದ "ಹಲೊ ಎವರಿಬಡಿ, ಚಲೊ ಮಲ್ಲೇಶ್ವರಗೆ ನಾನ್ ರೆಡಿ" ಅಂದರು ಯಾರೊ,
ತಿರುಗಿ ನೋಡಿದರೆ, ದೇವಾಲಯದ ಗೋಪುರದ ಕೆಳಗಿನ ಮಹಾದ್ವಾರದಿಂದ ಹೊರಬಂದು ನಗುತ್ತ ನಿಂತಿರುವ ಉನ್ನತ ದೇಹಿಯನ್ನು ಕಂಡು ಇವರೆ ಗಣೇಶರರಿಬಹುದು ಅಂತ ಸಂತೋಷವಾಯಿತು,
ಸುರೇಶರು " ಮತ್ತೆ ನೀವು ಬಂದ್ರಲ್ಲ ಗಣೇಶ, ನೋಡಿ ಪಾರ್ಥಾನು ಬಂದಿದ್ದಾರೆ ಅಂದರು" ನಾನು ಏಕೊ ಅನುಮಾನದಿಂದ ಮತ್ತೆ ಹಿಂದೆ ನೋಡಿದೆ, ಅರೆ ಹೌದಲ್ಲ , ಉನ್ನತ ದೇಹಿ, ದೈತ್ಯಾಕಾರಿ, ಗಣೇಶ ದೇವರನ್ನು ಮೀರಿಸುವ ಗುಡಾಣ ಹೊಟ್ಟೆ, ಮುಖದಲ್ಲಿ ತುಂಬಿನಿಂತ ನಗು, ಎಲ್ಲ ಸರಿ ಆದರೆ ಒಬ್ಬರಲ್ಲ ಇಬ್ಬರು !!! ಮಾತನಾಡಿದವರು ಯಾರು !!
ಹೆಚ್ಚು ಕಡಿಮೆ ಒಂದೆ ಆಕಾರ, ದೇಹ ,ಅರೆ ಇಬ್ಬರಲ್ಲಿ ಯಾರು ಗಣೇಶ ! ನಾನು ಮಾತು ಮರೆತು ನಿಂತೆ !
Comments
ಉ: ಚಲೊ ಮಲ್ಲೇಶ್ವರ - 13
In reply to ಉ: ಚಲೊ ಮಲ್ಲೇಶ್ವರ - 13 by manju787
ಉ: ಚಲೊ ಮಲ್ಲೇಶ್ವರ - 13
ಉ: ಚಲೊ ಮಲ್ಲೇಶ್ವರ - 13
In reply to ಉ: ಚಲೊ ಮಲ್ಲೇಶ್ವರ - 13 by ಗಣೇಶ
ಉ: ಚಲೊ ಮಲ್ಲೇಶ್ವರ - 13
ಉ: ಚಲೊ ಮಲ್ಲೇಶ್ವರ - 13
In reply to ಉ: ಚಲೊ ಮಲ್ಲೇಶ್ವರ - 13 by Jayanth Ramachar
ಉ: ಚಲೊ ಮಲ್ಲೇಶ್ವರ - 13
ಉ: ಚಲೊ ಮಲ್ಲೇಶ್ವರ - 13
In reply to ಉ: ಚಲೊ ಮಲ್ಲೇಶ್ವರ - 13 by Chikku123
ಉ: ಚಲೊ ಮಲ್ಲೇಶ್ವರ - 13
ಉ: ಚಲೊ ಮಲ್ಲೇಶ್ವರ - 13
In reply to ಉ: ಚಲೊ ಮಲ್ಲೇಶ್ವರ - 13 by sathishnasa
ಉ: ಚಲೊ ಮಲ್ಲೇಶ್ವರ - 13