ಮೂಢ ಉವಾಚ - 121

ಮೂಢ ಉವಾಚ - 121

ತಿಳಿಯಾಗಿರಲಿ ಮನ ದೋಷವಿರದಿರಲಿ

ಆನಂದ ತುಂಬಿರಲಿ ಮಂದಹಾಸವದಿರಲಿ

ರೋಷವದು ದೂರ ವಿವೇಕ ಬಳಿಯಿರಲಿ

ಮಾನಸ ತಪದ ಫಲವೊಲಿಯಲಿ ಮೂಢ || . . 241


 

ಬ್ರಾಹ್ಮಣನೆಂದರೆ ಬ್ರಹ್ಮನ ತಿಳಿದವ

ಶಮ ದಮ ತಪ ಶೌಚಗಳೊಡೆಯ |

ಶುದ್ಧಬುದ್ಧಿಯಲಿ ಜ್ಞಾನವನು ಪಡೆವ

ಭೇದವೆಣಿಸದವ ಬ್ರಾಹ್ಮಣನು ಮೂಢ || . .242

***********************

-ಕ.ವೆಂ.ನಾಗರಾಜ್.

 

 

Rating
No votes yet

Comments