ವಿಧಿಯಾಟ

ವಿಧಿಯಾಟ

ಅಪ್ಪ ಆಫೀಸಿಗೆ ಹೊರಡುತ್ತಿದ್ದ, ಮಗನೂ ಏನೋ ಕೆಲಸಕ್ಕಾಗಿ ಅದೇ ಹಾದಿಯಲ್ಲಿ ಹೋಗಬೇಕಾದ್ದರಿಂದ ಅಪ್ಪನನ್ನೂ ಕರೆದುಕೊಂಡು ತನ್ನ ಯಮಹ ಬೈಕಿನಲ್ಲಿ ಹೊರಟ. ಒಂದು ಸಿಗ್ನಲ್ನಲ್ಲಿ ನಿಂತಾಗ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಗ್ಲಾಸನ್ನು ಇಳಿಸಿ 'ಮಾರ್ಕೆಟ್ ಮೆ ಯೆ ಕಿದರ್ ಆತಾ ಹೈ?' ಎಂದು ತನ್ನ ಕೈಲಿದ್ದ ಚೀಟಿಯನ್ನು ಕೊಟ್ಟ, ಅದಕ್ಕೆ ಅಪ್ಪ ತನ್ನ ಮಗನನ್ನು ತೋರಿಸುತ್ತ 'ಯೆ ವಹಿ ಜಾತಾ ಹೈ, ಇಸ್ಕೊ ಫಾಲೋ ಕರ್' ಎಂದು ಹೇಳಿದ. ಮಗ ತನ್ನಪ್ಪನನ್ನ ಅವನ ಆಫೀಸಿನ ಬಳಿ ಬಿಟ್ಟು ಮುಂದುವರಿದನು, ಕಾರು ಅವನನ್ನು ಹಿಂಬಾಲಿಸಿತು. ಮಾರ್ಕೆಟ್ ಹತ್ತಿರ ಹೋದಾಗ, ಕಾರನ್ನು ನಿಲ್ಲಿಸಿ ಅಡ್ರಸ್ ಕೇಳಿದವನಿಗೆ ಅಲ್ಲೇ ಒಂದೆರಡು ಕ್ರಾಸಿನ ಆಚೆ ಬರತ್ತೆ ಎಂದು ಹೇಳಿ ತಾನು ಬೈಕನ್ನು ಅಲ್ಲೇ ನಿಲ್ಲಿಸಿ ಹೆಜ್ಜೆ ಹಾಕಿದನು. ಸ್ವಲ್ಪ ಸಮಯದ ನಂತರ ,ಇತ್ತ ಅಪ್ಪ ತನ್ನ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ. ಟಿ.ವಿ ಆನ್ ಆಗಿತ್ತು. ಬ್ರೇಕಿಂಗ್ ನ್ಯೂಸ್ ಎಂದು ಹೇಳಿ 'ಮಾರ್ಕೆಟ್ನಲ್ಲಿ ಭೀಕರ ಸ್ಪೋಟ, ಸತ್ತವರ ಸಂಖ್ಯೆ...' ಎಂದಿತ್ತು. ವಿಷಯ ಕೇಳಿ ಎಲ್ಲರೂ ಟಿ.ವಿಯನ್ನೇ ನೋಡುತ್ತಿದರು. . . . . . . . . . . . . . . . . ತನ್ನ ಮಗನೂ ಅದರಲ್ಲಿ ಒಬ್ಬ ಎಂದು ಅಪ್ಪ ತಿಳಿಯುವ ಹೊತ್ತಿಗೆ, ಅಡ್ರಸ್ ಕೇಳಿದ ವ್ಯಕ್ತಿ ಅಮಾಯಕರನ್ನ ಬಲಿ ತೆಗೆದುಕೊಂಡು, ತಾನು ಬಂದ ಕೆಲಸ ಮುಗಿಸಿ ಅದೇ ಕಾರಿನಲ್ಲಿ ಬಹುದೂರ ಹೋಗಿದ್ದನು.
Rating
No votes yet

Comments