ಮಾಡರ್ನ ಲವ್
ಮಾಡರ್ನ ಲವ್
ಆಧುನಿಕ ಪ್ರೀತಿಯಡೆಗೆ ಕನ್ನಾಡಿಸಿದಾಗ ಪ್ರೇಮಿಗಳ ನಡುವಿನ ಸಂಭಾಷನೆಯ ಒಂದು ಜ್ಹಲಕ್ ನನ್ನ ಮನದಾಳದ ಮಾತುಗಳಲ್ಲಿ ಬ೦ದ ಬಗೆ ಹೀಗಿದ.
ಹುಡುಗಿ -
ಹುಡುಗಾ ಏ ಹುಡುಗಾ
ಹತ್ತು ನನ್ನ ಪ್ರೀತಿಯ ಹಡಗಾ
ತೊಡಿಸು ನನ್ನ ಕೈಗೆ ಬಂಗಾರದಾ ಕಡಗಾ
ಇಲ್ಲದಿದ್ದರೆ ನೀ ಕೇಳಬೇಕಾದೀತು ನನ್ನ ಕೋಪದಾ ಗುಡುಗಾ
ಹುಡುಗಾ -
ಗೆಳತಿ ಓ ಗೆಳತಿ
ನನ್ನ್ಯಾಕ ಹೀಂಗ ಕಾಡತಿ
ನನ್ನ ಮೇಲೇಕೆ ಗುಡುಗತಿ
ನಿಜ ಹೇಳುವೆ ನನ್ನ ಬಳಿ ಇಲ್ಲಾ ನಿನ್ನ ಕೈ ಬಳೆಯ ಅಳತಿ
ಹುಡುಗಿ -
ಇಲ್ಲಂತ ಹೇಳತಿ ನನ್ನ ಬಳೆಯ ಅಳತಿ
ಹತ್ತಿರ ಬಂದಾಗ ಮುಂಗೈಯ ಹಿಡಿಯತಿ
ಆಗ ತಿಳಿಯಲಿಲ್ಲವೆ ನನ್ನ ಬಳೆಯ ಅಳತಿ?
ನಿನ್ನ ಪ್ರೀತಿ ಬರೀ ಸುಳಿಳಿನ ಸಂತಿ
ಹುಡುಗ -
ನನ್ನ ಪ್ರೀತಿಗೆ ನೀನಂದೆ ಸುಳಿಳಿನ ಸಂತೆ
ನೀ ಬಯಸಿದ್ದು ನನ್ನ ಹತ್ತಿರ ಬರೀ ನೋಟಿನ ಕಂತೆ
ನಿಜ ಪ್ರೀತಿಗೆ ಈ ಜಗದಲ್ಲಿ ಬೆಲೆ ಇಲ್ಲವಂತೆ
ಇರಲಿ ಬಿಡು, ಇರಲಿ ಬಿಡು ನೀ ದೂರಾದರು ಅವಳಿರುವಳಂತೆ
Rating
Comments
ಉ: ಮಾಡರ್ನ ಲವ್
In reply to ಉ: ಮಾಡರ್ನ ಲವ್ by manju787
ಉ: ಮಾಡರ್ನ ಲವ್
ಉ: ಮಾಡರ್ನ ಲವ್
In reply to ಉ: ಮಾಡರ್ನ ಲವ್ by ambika
ಉ: ಮಾಡರ್ನ ಲವ್