ಪಂಚಭೂತಗಳ ಮಾಯೆ -(ಶ್ರೀ ನರಸಿಂಹ-7)

ಪಂಚಭೂತಗಳ ಮಾಯೆ -(ಶ್ರೀ ನರಸಿಂಹ-7)

ದೇಹವೆಂಬುದಿದು ಪಂಚಭೂತಗಳ ಮಿಲನ

ವಿವಿದ ದೇಹಗಳ   ಸೃಷ್ಠಿ  ದೇವನಿಚ್ಚಾದೀನ

ನೀರ ಮೇಲಣ ಗುಳ್ಳಯೆಂಬುದು ಒಡೆದಂತೆ

ದೇಹವಳಿಯಲದು ಪಂಚಭೂತಗಳಲಿ ಲೀನ

 

ಆಕಾಶವೆಂಬುದದು ಉದರದ ಸೂಚಕವು

ಜಲದ ಸೂಚಕವದುವೆ ನೆತ್ತರಿರುವಿಕೆಯು

ಮೂಳೆ,ಮಾಂಸ,ತೊಗಲು ಮಣ್ಣಿನ ಕಣವು

ವಾಯ್ವಗ್ನಿಯಿಂದಲೆ  ದೇಹ   ಸಂಚಲನವು

 

ಎಲ್ಲ ಜೀವಿಗಳ ದೇಹದಲೊಂದೆ ಇಹುದು ಚೈತನ್ಯ ಶಕುತಿ

ನಂಬಿ ಶರಣಾಗು ಶ್ರೀನರಸಿಂಹನಿಗೆ ನೀಡುವನು ಮುಕುತಿ 

Rating
No votes yet

Comments