ಮಧ್ಯಾಹ್ನದ ಕನವರಿಕೆ.

ಮಧ್ಯಾಹ್ನದ ಕನವರಿಕೆ.

 ಯಾಕೋ ಇಂದು ಅವಳ ನೆನಪು ಕಾಡುತಿದೆ. ( ಹಾಗಂತ ಯಾವತ್ತು ನೆನೆಯೋದಿಲ್ಲ ಅಂತಲ್ಲ). ಅವಳು ನನ್ನೆಲ್ಲ ಕಲ್ಪನೆಯ ಸಾಕಾರ. ಭೋರ್ಗರೆದು ಹರಿಯುವ ನದಿಗೆ ಜನ ರುದ್ರ ರಮಣೀಯ ಎಂದು ಕರೀಬಹುದು. ಆದರೆ ಇವಳು ಮಾತ್ರ ಸದ್ದಿಲ್ಲದೇ ಮೌನವಾಗಿ  ನನ್ನ ಎದೆ ನೆಲಕ್ಕೆ ಪೋಷಣೆ ನೀಡುವ ಅಂತರಗಂಗೆ. ಕನಸು ಕವಿತೆ ಸಾಧನೆ ಕ್ರಾಂತಿ ಎಂದೆಲ್ಲ ಜುಬ್ಬಾ ತೊಟ್ಟುಕೊಂಡು, ಹೆಸರಿನ ಹಿಂದೆ ಉಪಾಧಿಗಳನ್ನು ಗಳಿಸುವ ಹುನ್ನಾರದಲ್ಲಿ ಅತೀವ ಒತ್ತಡ ನಿರಾಸೆ ಹೊತ್ತು ಬದುಕುತ್ತಿರುವ ನಾನು ಅವಳೆಡೆಗೆ ಪೂರ್ತಿಯಾಗಿ ತೆರೆದುಕೊಳ್ಳಲು ಆಗಲೇ ಇಲ್ಲ. ದೂರ ಹೆಚ್ಚಿದಷ್ಟು ಜಾಸ್ತಿಯಗುವ ಪ್ರೀತಿ .... ನೋಡದೆ ಭೇಟಿಯಾಗದೆ ವಿಚಿತ್ರ ಸಂಕಟ ಅನುಭವಿಸುವಂತೆ ಮಾಡಿದೆ ಇಬ್ಬರಲ್ಲೂ. ಅವಳು ಅದೇ ದಿನದ ಮನೆ ವಾರ್ತೆಗಳ ನಡುವೆ ಅಕ್ಕನ ಮಗುವನ್ನು ನೋಡಿಕೊಳ್ಳುತ್ತಾ ಇರುತ್ತಾಳೆ. ಅಪರಿಚಿತರ ಮುಂದೆ ಗಂಟೆಗಟ್ಟಲೆ ಮಾತಾಡುವ ನಾನು ಏಕೋ ಏನೋ ಪ್ರೀತಿ ಪಾತ್ರರ ಎದುರು ಗುಮ್ಮನ ಗುಸುಕ. ಹೃದಯದ ಭಾವನೆಗಳನ್ನು ಹೇಳಿಕೊಳ್ಳೋಕೆ ಆಗೋದೇ ಇಲ್ಲ. ಎಲ್ಲಿ ಅವುಗಳಿಗೆ ಬೆಲೆ ಇಲ್ವೋ ಎಂಬ ಅನುಮಾನದ ಶನಿ ಹೆಗಲೇರಿದೆ. ಚಿಕ್ಕಂದಿನಿಂದಲೂ ಹಾಗೆ. ಬರಿ ಅಂದರೆ ನೂರು ಕವಿತೆಯ ಮುತ್ತಿನ ಸರ ಮಾಡಿ ಕೊಟ್ಟೇನು ಆದರೆ ಮಾತು ನಿಶಿದ್ದ. ಇದೆಲ್ಲ ಅವಳಿಗೆ ಯಾವತ್ತೂ ಹೇಳೋಕೆ ಆಗದೆ ಹೀಗೆ ಮಟ ಮಟ ಮಧ್ಯಾನದ ಹೊತ್ತು ಟೈಪಿಸುತ್ತಾ ಕುಳಿತಿದ್ದೇನೆ. ಹೆಸರಿಲ್ಲದ  ಗೆಳೆತಿಗೆ ಮೂಕ ಕವಿಯ ನಿವೇದನೆ. ಸುಮ್ಮನೆ ಓದಿಕೊಳ್ಳಿ. ನಿಮ್ಮವ....... ರವಿ.

Comments