ಇದು ರಮ್ಯ ಚೈತ್ರ ಕಾಲವೇ?

ಇದು ರಮ್ಯ ಚೈತ್ರ ಕಾಲವೇ?

ಇದು ರಮ್ಯ ಚೈತ್ರ ಕಾಲವೇ? ಮೇಲಿನ ಶೀರ್ಷಿಕೆ ನೋಡಿದರೇ ಇದೇನಪ್ಪ ಚಲನಚಿತ್ರದ ಬಗ್ಗೆ ಹೇಳುತ್ತಿರುವಂತಿದೆ ಅಂತ ಅನಿಸುತ್ತೆ. ಆದರೇ ಇತ್ತೀಚಿನ ಬೆಳವಣಿಗೆ ನೋಡುತ್ತಿದ್ದರೇ ಹಾಗೇ ಅನಿಸದೇ ಇರಲ್ಲ. ಕಾರಣ ನಟಿ ರಮ್ಯ ರಾಜಕಾರಣಕ್ಕೆ ಇಳಿಯುತ್ತಿರುವ ಈ ಸಂದರ್ಭದಲ್ಲಿ, ಅವರಿಂದ ಜನತೆ ಏನು ನಿರೀಕ್ಷೆ ಇಟ್ಟುಕೊಳ್ಳಬಹುದು ಅಂತ ಒಂದು ಸಾರಿ ಯೋಚನೆ ಮಾಡಬೇಕಾಗಿದೆ. ಯಾಕಂದರೇ ಪ್ರಸ್ತುತ ಹದಗೆಟ್ಟಿರುವ ರಾಜಕಾರಣಕ್ಕೆ ಇಳಿಯುತ್ತಿರುವ ನಟಿ ರಮ್ಯ ಯಾವ ರೀತಿಯ ಸವಾಲುಗಳನ್ನು ಎದುರಿಸಬಹುದು ಎಂದು ಅವರು ಕೂಲಂಕುಷವಾಗಿ ಯೋಚಿಸಿರುತ್ತಾರೆಯೇ? ನಿಜವಾಗಿಯೂ ಇಂದಿನ ದಿನಮಾನಸದಲ್ಲಿ ದುಡ್ಡು, ಹಗರಣಗಳೇ ತಾಂಡವವಾಡುತ್ತಿರುವಾಗ ಈ ನಟಿಯಿಂದ ಯಾವ ರೀತಿಯ ಬೆಳವಣಿಗೆಗಳನ್ನು ಕಾಣಬಹುದು? ಇದು ರಾಜಕಾರಣಕ್ಕೆ ಅನಿವಾರ್ಯವೋ ಅಥವಾ ನಟಿ ರಮ್ಯಾಗೆ ಅನಿವಾರ್ಯವೋ ಅಂತ ಗೊತ್ತಾಗುತ್ತಿಲ್ಲ. ಒಂದು ಉತ್ತಮ ಸ್ಥಾನದಲ್ಲಿ ಇದ್ದು ಚಲನಚಿತ್ರದಲ್ಲಿ ಒಳ್ಳೆಯ ಹೆಸರು ಮಾಡಿರುವ ನಟಿಗೆ ರಾಜಕಾರಣ ನಿಜವಾಗಿಯೂ ಅಗತ್ಯವಿತ್ತಾ? ಅಥವಾ ಅವರಿಗೆ ಬಲವಂತದ ಅನಿವಾರ್ಯತೆ ಸೃಷ್ಠಿಯಾಯಿತೋ ಎನ್ನುವ ಅನುಮಾನ ಬರದೇ ಇರದು. ಇರಲಿ, ರಾಜಕಾರಣಕ್ಕಂತು ಇಳಿದಾಯಿತು ಇನ್ನು ಮುಂದೆ ಅಭಿವೃದ್ಧಿಯ ಕಡೆಗೆ ಗಮನ ಹರಿಸುವುದು ತುಂಬಾ ಮುಖ್ಯ. ಏಕೆಂದರೆ ಒಂದಿನಿತು ಅಭಿವೃದ್ಧಿ ಕಾಣದ್ಂತಹ ಸಂದರ್ಭದಲ್ಲಿ ಈ ನಟಿ ಯಾವ್ ರೀತಿಯ ಕೆಲಸ ನಿರ್ವಹಿಸುತ್ತಾರೋ ನೋಡಬೇಕು. ಕಾರಣ ಇಷ್ಟೇ, ಏನಂದರೇ ಬರೀ ಎ.ಸಿ. ಕಾರಿನಲ್ಲಿ ಓಡಾಡಿ, ಮಿನರಲ್ ವಾಟರ್ ಕುಡಿಯುವ ಒಬ್ಬ ನಟಿಗೆ ಜನಗಳ ಕಷ್ಟಗಳು ಅರ್ಥ ಆಗೋದು ಅಷ್ಟೊಂದು ಸುಲಭವೇನಲ್ಲ. ಜನಗಳ ಬಳಿಗೆ ಹೋಗಿ ಅವರ ಕಷ್ಟಗಳನ್ನು ತಿಳಿದು ಬಗೆಹರಿಸುವುದು ಒಂದು ಸವಾಲು ಎನ್ನುವುದು ಕಹಿ ಸತ್ಯ. ಈ ಸತ್ಯವನ್ನು ಅರಗಿಸಿಕೊಳ್ಳುವುದು ಸಹ ಸ್ವಲ್ಪ ಕಷ್ಟವೇ ಸರಿ. ಆದಾಗ್ಯೂ ಈ ನಟಿಯ ಧೈರ್ಯವನ್ನು ಮೆಚ್ಚಲೇಬೇಕು. ಹಾಗೆಯೇ ಯುವಜನಾಂಗವನ್ನು ಪ್ರತಿನಿಧಿಸುತ್ತಿರುವ ಇವರು ದೇಶದ ಮುಂದಿನ ಪೀಳಿಗೆಯ ಸ್ವಚ್ಛ ರಾಜಕಾರಣವನ್ನು ಬೆಳೆಸಲು ನಾಂದಿಯಾಗುವಂತೆ ಕಾರ್ಯ ನಿರ್ವಹಿಸಿದರೆ ಇಡೀ ಯುವಜನಾಂಗವೇ ಎತ್ತೆಚ್ಚುಕೊಳ್ಳುವದರಲ್ಲಿ ಸಂಶಯವಿಲ್ಲ. ಆದ್ದರಿಂದ ನಟಿ ರಮ್ಯ ರಾಜಕಾರಣಕ್ಕೆ ಬರುತ್ತಿರುವುದು ಸ್ವಾಗತಾರ್ಹ, ಆದರೇ ಸ್ವಾರ್ಥ, ಬ್ರಷ್ಟಾಚಾರ, ಹಗರಣ, ದುಡ್ಡು, ಇಂತಹದರಿಂದ ದೂರ ಇದ್ದು ಜನರ ವಿಶ್ವಾಸ ಗಳಿಸಿ ಉತ್ತಮ ರಾಜಕಾರಣಿ ಆಗಲೆಂದು ಹಾರೈಸೋಣ.

Comments