ಕೊಸರಿನ ಕಮಲ

ಕೊಸರಿನ ಕಮಲ

ಕೊಸರಿನಲ್ಲಿ ಹೊಳೆವ ಕಮಲ
ಕೊಸರಿಗಂಜಿ ಅಳುವುದೇ
ಕೊಸರಿನಿಂದ ಬರುವುದೆಂದು
ಯಾರು ಅದನು ಬಗೆವರು

ಕೆಂಪು, ಬಿಳುಪು, ಹಳದಿ
ಬಣ್ಣ ದರಿಸಿ ಸೆಳೆವ ಗುಲಾಬಿ
ಮುಳ್ಳು ಜೊತೆಗೆ ಇರುವುದೆಂದು
ಯಾರು ಅದನು ತೊರೆವರು

ಹಾಲು, ಮೊಸರು, ಬೆಣ್ಣೆ, ತುಪ್ಪ
ಎಲ್ಲ ಇದನು ಸವಿಯುವರು
ಹುಲ್ಲು ತಿಂದು ಹಾಯುವುದೆಂದು
ಭಯದಿ ಹಸುವನ್ಯಾರು ಜರಿವರು

ಒಂದು, ಎರಡು, ಮೂರು, ನಾಕು
ಮಗುವಿಗಿಷ್ಟು ಹೆಸರು ಸಾಕೆ
ಒಂದು, ಎರಡು ಮಾಡಿತೆಂದು
ಯಾರು ಅದಕೆ ಸಿಡಿವರು
****

( ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ ನನ್ನಿ. )

Rating
No votes yet

Comments