ಮಂಗನ ಭಾಷೆಯ ಮಂಗಾಟ, ಯುವಕ ಯುವತಿಯರಿಗೆ ಪೇಚಾಟ
ಮಂಗನ ಭಾಷೆಯ ಮಂಗಾಟ, ಯುವಕ ಯುವತಿಯರಿಗೆ ಪೇಚಾಟ
ಇವರೆ ಇಲ್ಲಿ ಸ್ವಲ್ಪ ಕೇಳಿ,ಎಲ್ಲಾದ್ರು ಹೋಗ್ಬೇಕಾದ್ರೆ ಈ ಪರಿಸ್ಥಿತಿ ನಿಮಗು ಬಂದಿರಬೇಕು ಅಲ್ವಾ?ಅರೇ ಏನು ಹೇಳದೆ ಈ ಹುಡುಗಿ ಯಾವ ಪರಿಸ್ಥಿತಿ ಬಗ್ಗೆ ಕೆಳತಿದಾಳೆ ಅನಕೊಂತಿದಿರಾ?. ಇರಲಿ ಬಿಡಿ ನಂಗೊತ್ತು ಈ ವಿಷಯಾನೇನಾದ್ರು ಡೈರೆಕ್ಟಾಗಿ ಹೇಳಿದ್ರೆ ನಿಮಗು ಮಾನಸಿಕ್ ಆಗಿ ಬಿಡುತ್ರಿ ಅದಕೆ ಮೊದಲೆ ಹೇಳಲಿಲ್ಲಾ.ಈಗಾ ಕೇಳಿ, ನಮ್ಮ ಕನ್ನಡ ಭಾಷೆಯ ಮೆರುಗೆ ಬೇರೆ ಏನಂತಿರಿ. ನಾವೆಲ್ಲ ಚಿಕ್ಕವರಿದ್ದಾಗ ನನ್ನಮ್ಮ , ಅಪ್ಪ ಹಾಗೂ ಎಲ್ಲ ಮನೆಯ ಸದಸ್ಯರು ನಮಗಿಂತ ದೊಡ್ಡವರಿಗೆ ಅಥವಾ ಚಿಕ್ಕವರಿಗೆ ಅಣ್ಣಾ, ಅಕ್ಕಾ, ತಮ್ಮಾ, ತಂಗಿ ಹೀಗೆ ಹಲವಾರು ಪದಗಳನ್ನ ಬಳಸಲಿಕ್ಕೆ ಹೇಳ್ತಿದ್ರು. ಆದರೆ ಇತ್ತೀಚೆಗೆ ಕಾಲಾ ತುಂಬಾ ಬದಲಾಗಿದೆ ರಿ. ಎಲ್ಲೆಂದರಲ್ಲಿ ಮಂಗನ ಭಾಷೆಯ ಮೆರೆದಾಟ. ಅರ್ಥಾ ಆಗ್ಲಿಲ್ವಾ? ಅದೇ ರಿ ಇತ್ತಿಚೆಗೆ ಪ್ಫೇಮಸ್ ಆಗಿರೋ ಇಂಗ್ಲೀಷು ಭಾಷೆ.ಎಲ್ಲಿ ನೋಡ್ತೀರಿ ಅಲ್ಲೆಲ್ಲಾ ಎಲ್ಲರ ಬಾಯಲ್ಲೂ ಅದೇ ಕಚಾ ಪಿಚಾ ಅನ್ನೋ ಕಂಗ್ಲೀಷು. ಈಗಿನ್ ತಂದೆ ತಾಯಂದಿರಂತೂ ತಮ್ಮ ಮಕ್ಕಳು ಇಂಗ್ಲೀಷ್ ಶಾಲೆಗೆ ಹೋಗ್ಬೇಕು, ಚೆನ್ನಾಗಿ ಇಂಗ್ಲೀಷ್ ಮಾತಾಡ್ಬೇಕು ಅಂದ್ಕೋಳ್ತಾರಷ್ಟೇಯಲ್ದೇ ಮನೇಲಿ ಮಕ್ಕಳ ಜೊತೆ ಅವರ ಕಮ್ಯೂನಿಕೇಷನ್ ನೋಡ್ಬೇಕು ಆಹಾ!!!!. ಯಾರಾದ್ರು ದೊಡ್ಡವರನ್ನ ನೋಡಿದ್ರೆ ಅಂಕಲ್ ಗೆ ಹಾಯ್ ಮಾಡು, ಆಂಟಿಗೆ ಹಾಯ್ ಮಾಡು ಅಂತಾ ಹೇಳಿಕೊಡ್ತಾರೆ ರಿ. ಅಲ್ಲಾ ವಯಸ್ಸಾದವರಿಗೆ ಹೀಗಂದ್ರೆ ಸರಿನಪ್ಪಾ, ಆದ್ರೆ ಪಾಪ ಇನ್ನೂ ಮದುವೆಬಗ್ಗೆ ಕನಸ್ಸು ಕಾನ್ತಿರೋ ಯುವಕ ಯುವತಿಯರಿಗೆ ಅಂಕಲ್, ಆಂಟಿ ಅಂದ್ರೆ ಅವರ ಪೇಚಾಟ, ಮನಸ್ಸಿಗಾಗೋ ನೋವು ಅಷ್ಟಿಷ್ಟಲ್ಲಾರಿ, ಹೀಗಂದ್ರಲ್ಲಪ್ಪ ನಾನು ಅಂಕಲ್ ಥರಾ ಕಾಣಿಸ್ತಿದಿನಾ, ಅಥವಾ ಆಂಟಿ ಥರಾ ಕಾಣಿಸ್ತಿದಿನಾ ಅಂತಾ ಚಿಂತೆ ಹಚಗೊಂಡು, ಊಟಾ ಬಿಟ್ಟು ದಿನದ ಹೆಚ್ಚಿನ ಸಮಯವನ್ನ ಕನ್ನಡಿ ಮುಂದೆ ಕಳೆಯಲಾರಂಭಿಸುತ್ತಾರೆ. ಇತ್ತೀಚೆಗೆ ಬಾಯಿ ತೆರೆದು ಎಲ್ಲೆಂದರಲ್ಲಿ ಉದ್ಭವಿಸಿರುವ ಮೆನ್ಸ ಪಾರ್ಲರ್ ಮತ್ತು ಬ್ಯುಟಿ ಪಾರ್ಲರ್ ಗಳಿಗೆ ಲಗ್ಗೆ ಇಡೋಕೆ ಶುರು. ಹೀಗೆ ಆಯ್ತು ಒಂದಿನಾ, ನಾನು ಪ್ರಮಾಣಾ ಪತ್ರಗಳಿಗೆ ಅಟ್ಟೆಸ್ಟೇಷನ್ ಮಾಡಿಸ್ಲಿಕ್ಕೆ ಅಂತಾ ನಮ್ಮ ವಿಶ್ವವಿದ್ಯಾಲಯಕ್ಕೆ ಬಸ್ಸಲ್ಲಿ ಹೋಗ್ತಿದ್ದೆ, ಬಸ್ಸಲ್ಲಿ ಜನಾ ಕಿಕ್ಕಿರಿದು ತುಂಬಿದ್ರು. ಒಂದು ಸ್ಟಾಪ್ ಬಂತು, ಅದು ಶಾಲೆ ಬಿಡುವ ಸಮಯ ಇದ್ದಿದ್ರಿಂದಾ ಕೆಲ ಮಕ್ಕಳು ಮನೆಗೆ ಹೋಗೋ ವೇಳೆ. ಸರಿ ಕೆಳಗಡೆ ನಿಂತಿದ್ದ ಮಕ್ಕಳು ಬಸ್ಸಲ್ಲಿ ಅಷ್ಟು ಗದ್ದಲಾ ಇದ್ರು ಲೆಕ್ಕಿಸದೆ ಎಲ್ಲರನ್ನ ದೂಡತಾ ಮೇಲೆ ಹತ್ತಿದ್ರು . ನಾನು ಸುಮ್ನೆ ನಿಲ್ಲಲಾರದೆ ಅವರಲ್ಲಿ ಒಬ್ಬಳಿಗೆ ಹಿಂದೆ ಬಾ ಕೆಳಗೆ ಬಿದ್ದಿಯಾ ಅಂದೆ. ಆ ಹುಡುಗಿ ನನಗೆ ಏನನಬೇಕು ಗೋತ್ತಾ " ಆಂಟಿ ಹಿಂದೆ ಬರ್ಲಿಕ್ಕೆ ಜಾಗಾ ಇಲ್ಲಾ" ಅಂದ್ಬಿಡಬೇಕಾ? ಅಯ್ಯೋ ಹೋಯ್ತು ನನ್ನ ಮಾನಾ ಮರ್ಯಾದೆಯಲ್ಲ ಹೋಯ್ತು ಅನಕೊಂಡು ಅಸಮಾಧಾನಕರ ಮನಸ್ಸಿನಿಂದ ಕೆಲಸಾ ಮುಗಿಸಿ ರೂಮ್ ಗೆ ಬಂದು, ನನ್ನ ರೂಮ್ ಪಾರ್ಟ್ನರ್ ಹತ್ರ ಆದದ್ದನ್ನೆಲ್ಲ ಹೇಳಿದೆ, ಅವಳಿಗೂ ಪೀಡಿಸಿ ಕೇಳಿದೆ ನಾನು ಆಂಟಿ ತರಾ ಕಾಣ್ತಿದಿನಾ ಅಂತಾ? ಅಲ್ದೆ ಕನ್ನಡಿ ಹಿಡಿದು ಮುಖಾನೆ ನೋಡ್ಕೋತಾ ಕುಂತೆ.ಆಗಾ ನನ್ ಗೆಳತಿ ತನ್ನ ಜೊತೆಗಾದ ಮತ್ತು ಮತ್ತೊಬ್ಬಳು ಗೆಳತಿಯ ಗಂಡನ ಜೊತೆಗಾದ (ಅಂಕಲ್ ಸ್ವಲ್ಪ ಜಾಗಾ ಬಿಡಿ ಅಂದಿದ್ದಕ್ಕೆ ಮಾನ್ಸಿಕ್ ಆಗಿದ್ರು ) ಇದೇ ರೀತಿಯ ಅನುಭವಗಳನ್ನ ಹೇಳಿದ್ಲು ಆಗಾ ಮನಸ್ಸಿಗೆ ಸ್ವಲ್ಪ ಸಮಾಧಾನವಯ್ತು. ಅಬ್ಬಾ ನನ್ತರಾ ಅನುಭವಾ ಪಡೆದಾ ಮಹಾತ್ಮರು ನನ್ನಜೊತೆಗಿದಾರೆ, ನನಗಷ್ಟೇ ಈ ಥರಾ ಆಗಿಲ್ಲಾ ಅಂದಕೊಂಡು ಸಮಾಧಾನಾ ಪಟಗೊಂಡೆ.!!!! .ಇಷ್ಟೆಲ್ಲಾ ನಿಮಗೆ ಯಾಕೆ ಹೇಳಿದೆ ಅಂತಾ ಗೊತ್ತಾ? ಮುಂದೆ ಯಾವಾಗ್ಲಾದ್ರು ನಿಮಗೂ ಈ ಥರಾ ಅನುಭವಗಳಾದಾಗಾ ಮನಸ್ಸಿಗೆ ನೋವು ಮಾಡಕೊಳ್ದೆ ಇದೆಲ್ಲ ಈಗಿನ್ ಜನರೇಷನ್ ಪ್ರಭಾವಾ ಅನಕೊಂಡು, ಅಂದವರ್ ಎದುರಿಗೆ ಹಲ್ಲುಕಿರಿದು ಬಂದ್ಬಿಡಿ ಮತ್ತು ಮುಂದೆ ನಿಮ್ಮ ಮಕ್ಕಳಿಗೆ ಈ ಥರಹದ ಭಾಷೆಗಳನ್ನಾ ಕಲಿಸದೆ, ಅಪ್ಪಟವಾದ ನಮ್ಮೆಲ್ಲರ ಪ್ರೀತಿಯ ಕನ್ನಡದಲ್ಲಿ ಅಣ್ಣಾ, ಅಕ್ಕಾ, ತಮ್ಮಾ ಅಥವಾ ತಂಗಿ ಅನ್ನೋ ಪದಗಳನ್ನಾ ಕಲಿಸಿ, ಅಂದ್ರೇ ಎಷ್ಟೋ ಯುವಕ ಯುವತಿಯರು ನೊಂದ್ಕೊನ್ನೋದಾದ್ರು ತಪ್ಪುತ್ತೆ .!!!!!!! ಏನಂತಿರಿ ;-)
Comments
ಉ: ಮಂಗನ ಭಾಷೆಯ ಮಂಗಾಟ, ಯುವಕ ಯುವತಿಯರಿಗೆ ಪೇಚಾಟ
In reply to ಉ: ಮಂಗನ ಭಾಷೆಯ ಮಂಗಾಟ, ಯುವಕ ಯುವತಿಯರಿಗೆ ಪೇಚಾಟ by makara
ಉ: ಮಂಗನ ಭಾಷೆಯ ಮಂಗಾಟ, ಯುವಕ ಯುವತಿಯರಿಗೆ ಪೇಚಾಟ
In reply to ಉ: ಮಂಗನ ಭಾಷೆಯ ಮಂಗಾಟ, ಯುವಕ ಯುವತಿಯರಿಗೆ ಪೇಚಾಟ by sumangala badami
ಉ: ಮಂಗನ ಭಾಷೆಯ ಮಂಗಾಟ, ಯುವಕ ಯುವತಿಯರಿಗೆ ಪೇಚಾಟ
In reply to ಉ: ಮಂಗನ ಭಾಷೆಯ ಮಂಗಾಟ, ಯುವಕ ಯುವತಿಯರಿಗೆ ಪೇಚಾಟ by makara
ಉ: ಮಂಗನ ಭಾಷೆಯ ಮಂಗಾಟ, ಯುವಕ ಯುವತಿಯರಿಗೆ ಪೇಚಾಟ