ನದಿ

ನದಿ

ಕವನ
ಚಿತ್ರ:ಹೇಮಾವತಿ ನದಿ ಜುಳುಜುಳ ಹರಿವ ಆ ನದಿಯ ಒಮ್ಮೆ ದಿಟ್ಟಿಸಿನೋಡು, ರವಿಯ ಕಿರಣದಿ ಮಿರಮಿರ ಮಿಂಚುವ ಆ ಸೊಬಗ ನೋಡು, ಒಮ್ಮೆ ಹಾಲ್ನೊರೆಯ ಚಿಮ್ಮುತ್ತಾ ಬಳುಕುವ ಕೋಮಲೆ. ಮತ್ತೊಮ್ಮೆ ಬೊರ್ಗರೆದು ಹರಿಯುವ ಹುಚ್ಚುಹೊಳೆ. ಮಳೆ ಬರಲು ನದಿ ತುಂಬ ಹನಿಗೊಂದು ವೃತ್ತ. ನೋಡಿ ಸವಿಯಲು ಮನವಿರಲಿ ಇತ್ತ. ಅಡಗಿವೆ ಒಡಲಲ್ಲಿ ನೂರಾರು ಅಚ್ಚರಿ, ಬಗೆಬಗೆಯ ಜಲಚರವ ನೋಡಿ ಮೈಮರೆಯುವಿರಿ. ಅದೋ ನೋಡಲ್ಲಿ ದಡದಿ ಗಾಳ ಹಿಡಿದು ಕುಳಿತ ದನಗಾಯಿ. ನದಿಯ ಸಾನಿಧ್ಯದಿ ಆದಂತೇ ತೋರುತ್ತಾನೆ ಮೇದಾವಿ. ನೀರಕ್ಕಿ ಜಲಕ್ರೀಡೆ ನೋಡಲು ಚಂದ, ನದಿಗೆ ಬಾಗಿದ ರೆಂಬೆಯ ಗೀಜಗನ ಗೂಡು ಮತ್ತಷ್ಟು ಅಂದ. ನದಿಯ ಸೊಬಗ ಸವಿಯಲು ಮತ್ತಷ್ಟು ಕಣ್ಣು ಬೇಕು.ನದಿಯ ಸೊಬಗ ಸವಿಯಲು ನಮ್ಮೂರಿಗೆ ಬರಬೇಕು

Comments