ನಲ್ಲನ ತಲ್ಲಣ

ನಲ್ಲನ ತಲ್ಲಣ

ನನ್ನವನ ಮೊಗ ಅಂದಾ


ನನ್ನವನ ನಗು ಚೆಂದಾ


ಕುಡಿ ಮೀಸೇ ಅವನಾ ಮೊಗಕಂದಾ


ಕುಡಿ ಮೀಸೇ ಅವನಾ ಮೊಗಕಂದಾ ಕೇಳೀರೆ


ನನ್ನವನಾ ಮಾತಿಂದ ಮಹದಾನಂದಾ


 


ಕೈಯಾಗ ಬಿಂದೀಗೆ


ತಲಿಮ್ಯಾಲೆ ಸಿಂಬೀಗೆ


ಹೊರಟೇನ ನಾನ ನೀರೀಗೆ


 ಹೊರಟೇನ ನಾನ ನೀರೀಗೆ ಕೇಳೀರೆ


ಕುಣಿ ಕುಣಿದು ತೋಟದ ಬಾವೀಗೆ


 


ನೊಡೀದೆ ಸುತ್ತಾ


ಯಾರಿಲ್ಲದೊತ್ತಾ


ಎದೆಬಡಿತ ಯಾಕೋ ಹೆಚ್ಚಿತ್ತಾ


ಎದೆಬಡಿತ ಯಾಕೋ ಹೆಚ್ಚಿತ್ತಾ ಕೇಳೀರೆ


ನನ್ನವನಾ  ದರುಶನವಾಗಿತ್ತಾ


 


ಕಣ್ಣಾಗ ನೆಟ್ಟಾವ


ಎದೆಯಾಗ ಕುಂತಾವ


ಹತ್ತಿರ ಬಂದು ಪಿಸು ಪಿಸುಗುಟ್ಟಾವ 


ಹತ್ತಿರ ಬಂದು ಪಿಸು ಪಿಸುಗುಟ್ಟಾವ ಕೇಳೀರೆ


ತನ ಹೃದಯಾ ನನಗ ಕೊಟ್ಟಾವ


 


ಮನೀಗೆ ಬಂದಾನ


ಮನೆಯವರ ಕೇಳ್ಯಾನ


ತಾಳೀಯ ಕಟ್ಟತೀನಿ ಅಂದಾನ


 ತಾಳೀಯ ಕಟ್ಟತೀನಿ ಅಂದಾನ ಕೇಳೀರೆ


ಹುಡುಗೀಯ ಕರಕೊಂಡು ಹೋಗ್ಯಾನ


                


                                 ನಿಮ್ಮ ಸುಮಂಗಲಾ


 

Rating
No votes yet

Comments