ಮದುವೆ ಎಂಬ ರೇಸ್ ಕುದುರೆ ಏರಿದ ಮೇಲೆ

ಮದುವೆ ಎಂಬ ರೇಸ್ ಕುದುರೆ ಏರಿದ ಮೇಲೆ

ಮದುವೆ ಎಂಬ ರೇಸ್ ಕುದುರೆ ಏರಿದ ಮೇಲೆ


ರೇಸ್ ಕುದುರೆ ಅಂದ ತಕ್ಷಣ ನಿಮ್ಮ ಕಲ್ಪನೆಗೆ ಬರೋದು ಒಬ್ಬ ಸವಾರಿಕಾರ ಕಣ್ಣಿಗೆ ಕಣ್ಣು ಕವಚ ಮತ್ತು  ಲಗಾಮು ಹಾಕಿದ ಕುದುರೆ ಮೇಲೆ ಕುಳಿತು ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಅಲ್ಲವೆ?. ನಿಮ್ಮ ಊಹೆ ನಿಜ ಅದೇ ರೀತಿ ಈ ಮದುವೆ ಅನ್ನುವುದು ಕೂಡ. ಮನುಷ್ಯ ತನ್ನ ಜೀವನದಲ್ಲಿ ಒಂಟಿಯಾಗಿ ಜೀವನ ಪರ್ಯಂತ ಇರಲಾರ ಯಾಕಂದ್ರೆ ಅವನೊಬ್ಬ ಸಂಗ ಜೀವಿ. ಹೀಗಾಗಿ ಜೀವನದ ಪ್ರತಿಯೊಂದು ಘಟ್ಟದಲ್ಲಿ ಒಬ್ಬರನ್ನೊಬ್ಬರು ಅವಲಂಬಿಸಿರುತ್ತಾರೆ . ಉದಾಹರಣೆಗೆ ನಾವು ಸಣ್ಣವರಿರುವಾಗ ತಂದೆತಾಯಿ, ಸ್ವಲ್ಪ ದೊಡ್ಡವರಾದ ನಂತರ ಅಣ್ಣ ತಮ್ಮಂದಿರು / ಅಕ್ಕ ತಂಗಿಯರು, ಹದಿವಯಕ್ಕೆ ಕಾಲಿಟ್ಟಾಗಾ ಸ್ನೇಹಿತರು/ ಹಿತೆಯರು ನಮಗೆ ಸರ್ವಸ್ವವಾಗಿರುತ್ತಾರೆ, ಇನ್ನು ಪ್ರೌಢಾವಸ್ತೆಗೆ ಬಂದ ನಂತರ ಬಾಳ ಸಂಗಾತಿಯ ಹುಡುಕಾಟ. ನಂತರ ಮುಪ್ಪಿನ ಕಾಲದಲ್ಲಿ ಮಕ್ಕಳ ಆಸರೆ ಬಯಸುತ್ತೇವೆ . ಹೀಗೆ ಪ್ರತಿಯೊಂದು ಘಟ್ಟದಲ್ಲಿ ಪ್ರತಿಯೊಬ್ಬರ ಪಾತ್ರ ಪ್ರಮುಖವಾಗಿರುತ್ತದೆ . ಇಲ್ಲಿ ಮದುವೆಗೆ ರೇಸ್ ಕುದುರೆ ಅಂದುದಕ್ಕೆ ಒಂದು ಕಾರಣವಿದೆ, ರೇಸ್ ಕುದುರೆಗೆ  ಕಣ್ಣ ಕವಚವಿರುವವರೆಗೆ ತನ್ನ ಗುರಿಯನ್ನು ತಲುಪುವಲ್ಲಿ ನಿಷ್ಟೆಯಿಂದ ಕಾರ್ಯ ಮಾಡುತ್ತದೆ, ಅಕಸ್ಮಾತ್ ಕವಚವೇನಾದ್ರು ಕಳಚಿಬಿಟ್ರೆ ಅದನ್ನ ಹಿಡಿಯೋದು ತುಂಬಾ ಕಷ್ಟ.


ಹಿಂದೂ ಧರ್ಮದ ಪ್ರಕಾರ ಮದುವೆ ಅನ್ನುವುದು ಸಾಮಾಜಿಕ , ಸಂಸ್ಕೃತಿಕ  ಮತ್ತು ಜೀವನದ ಒಪ್ಪಂದವೆಂದು   ತಿಳಿಯಲಾಗುತ್ತದೆ.ಇದು ಕೇವಲ ಎರಡು ಮನುಸ್ಸುಗಳ ಸುಖಕ್ಕಾಗಿಯಲ್ಲದೆ ಎರಡು ಮನೆಗಳ ಮತ್ತು ನೂರಾರು ಬಂಧುಗಳ ಸಂಬಂಧಗಳನ್ನು ಬೆಸೆಯುವ ಬಂಧವಾಗಿದೆ. ಆದರೆ ಆಧುನಿಕ ದಿನಗಳಲ್ಲಿ ಮದುವೆ ಎಂಬ ಪವಿತ್ರವಾದ ಬಂದವು ಅಪವಿತ್ರವಾಗುತ್ತಿದೆ .  ಸಂಬಂಧಗಳು ಸಡಿಲುಗೊಂಡು ಬೇರು ಸಮೇತ ಕಳಚಿಕೊಂಡು ಬೀಳೂತ್ತಿವೆ . ಇತ್ತೀಚಿನ ಮದುವೆಗಳನ್ನ ನೋಡಿದಾಗ ಮನಸ್ಸು ಮದುವೆ ಕಡೆಗೆ ಮುಖ ತೋರಿಸಲು ಭಯಪಡುತ್ತದೆ, ಯಾಕೆಂದರೆ ಜನ ಇವತ್ತು ಪ್ರೀತಿ, ನಾಳೆ ಮದುವೆ, ನಾಡಿದ್ದು ಜಗಳಾ ಮತ್ತೆ ಅಚ್ಚಿ ನಾಡಿದ್ದು ವಿಚ್ಚೇದನಾ ಅನ್ನೊ ಪಾಲಿಸಿ ತನ್ನದಾಗಿಸಿಕೊೞು ತ್ತಿದೆ . ಹಿಂದೊಂದು ಕಾಲವಿತ್ತು ಈಗ ನಮ್ಮ ಅಜ್ಜ ಅಜ್ಜಿಯರ ಕಾಲವದು ಅವರ ವೈವಾಹಿಕ ಜೀವನವನ್ನ ನೋಡಿದಾಗ ಏನೋ ಒಂಥರಾ ಸಂತೋಷವಗುತ್ತದೆ. ಅವರಲ್ಲಿಯ ಆ ಹೊಂದಾಣಿಕೆ, ತಿಳುವಳಿಕೆ,ಆ  ತಾಳ್ಮೆ , ಆ ಒಂದು ಮರ್ಯಾದೆಯಿಂದ ಆಡುವ ಮಾತುಗಳು ಇವೆಲ್ಲ ಈಗ ನೋಡಲು ಸಿಗುವುದಿಲ್ಲ. ಈಗಿನ ಯುವಜನತೆ ಒಬ್ಬರ ಭಾವನೆಗಳನ್ನ ಒಬ್ಬರು ಅರಿಯುವಲ್ಲಿ, ತಾಳ್ಮೆಯಲ್ಲಿ , ಹೊಂದಾಣಿಕೆಯಲ್ಲಿ ಹೀಗೆ ಹಲವಾರು ರೀತಿಗಳಲ್ಲಿ ಸೋತುಹೋಗಿದ್ದಾರೆ. ಈಗೇನಿದ್ದರು ಕ್ಷಣಿಕ ಕಾಲದ ಸುಖಕ್ಕಾಗಿ, ಅಥವಾ ಎಲ್ಲರೂ ಮದುವೆ ಆಗತಿದ್ದಾರೆ ಅದಕ್ಕೆ ತಾವು ಆಗ್ಬೇಕು ಅಥವಾ ತಂದೆ ತಾಯಂದಿರ ಒತ್ತಾಯಕ್ಕಾಗಿ ಮದುವೆ ಆಗುತ್ತಿರುವುದು ತುಂಬಾ ನೋವು ಕೊಡುವ ಸಂಗತಿಯಾಗಿದೆ.ಮನಃಸ್ಪೂರ್ತಿಯಾಗಿ ಮದುವೆಯಾಗಿ ಜೀವನದುದ್ದಕ್ಕೂ ಬದುಕುವವರು ವಿರಳವಾಗಿ ಕಾಣ ಸಿಗುತ್ತಿದ್ದಾರೆ. ಈತ್ತೀಚೆಗೆ ಹೆಚ್ಚುತ್ತಿರುವ ಡೇಟಿಂಗ್, ಲೀವಿಂಗ್ ರಿಲೇಷನ್ಸ್ ಇವೆಲ್ಲಾ ಮದುವೆಯ ಸೊಗಡನ್ನ ಹಾಳು ಮಾಡುತ್ತಿವೆ. ಒಂದು ಕಡೆಯಿಂದ ನೋಡಿದಾಗ ಅವು ಸರಿ ಎನ್ನಿಸುತ್ತಿವೆ ಆದರೆ ಅದರಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ .  


ಹಾಗಾದರೆ ಇವೆಲ್ಲವುಕ್ಕು ಕಾರಣೀಭೂತವಾಗಿರುವ ಅಂಶಗಳಾದರೂ ಯಾವವು ಎಂಬುದಕ್ಕೆ ಉತ್ತರಾ


೧) ಆಧುನಿಕತೆ ೨) ನಗರೀಕರಣ ೩) ಪಾಲಕರ ಹೆಚ್ಚಿನ ವಿದ್ಯಾಭ್ಯಾಸ ೪) ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ೫) ಸಮೂಹ ಮಾಧ್ಯಮಗಳ ಪ್ರಭಾವ (ಅತ್ಯಂತ ಅನಾಹುತಕಾರಿ ಬೆಳವಣಿಗೆ) ೬) ಸಾಂಸ್ಕೃತಿಕ ಆಚರಣೆಯಲ್ಲಿನ ಬದಲಾವಣೆಗಳು ೭) ಸ್ವತಂತ್ರ ಸ್ವ ನಿರ್ಧಾರ ತೆಗೆದುಕೊೞುತ್ತಿರುವ ಯುವಜನಾಂಗ ೮) ಇಚ್ಚೆಗಳಲ್ಲಿನ ಬದಲಾವಣೆಗಳು ೯) ಆಧುನಿಕ ಯಂತ್ರೋಪಕರಣಗಳು ೧೦) ಪಾಲಕತ್ವತೆಯ ಬಗೆಗಳು ೧೧) ಬೆಳೆಯುತ್ತಿರುವ ವೈಜ್ಣಾನಿಕ ಜಗತ್ತು೧೨) ಸಲೀಸಾಗಿ ಕೈಗೆಟಕುತ್ತಿರು ಆಧುನಿಕ ತಂತ್ರಜ್ಣಾನಗಳು ೧೩) ಮಾನವೀಯ ಮೌಲ್ಯಗಳ ಕೊರತೆ ೧೪) ಅಫೇರ್ ಗಳು ೧೫)  ಪಾಲಕರ ಮನೋವೃತ್ತಿ ೧೬) ವಿಚ್ಚೇದಿತ ಪಾಲಕರು


ಪಟ್ಟಿ ಮಾಡುತ್ತ ಹೋದರೆ ಇನ್ನೂ ಅನೇಕ ಕಾರಣಗಳನ್ನ ಹೇಳಬಹುದು. ನಾನು ಎಮ್ ಎಸ್ಸಿ ಮಾಡ್ಬೇಕಾದ್ರೆ ನನ್ನ ರಿಸರ್ಚ್ ಟಾಪಿಕ್  "ಪರ್ಸೆಪ್ಷನ್ಸ್   ಆಫ್ ಪೋಸ್ಟ್ ಗ್ರ್ಯಾಡುಯೇಟ್ ಸ್ಟುಡೆಂಟ್ಸ್ ಅಬೌಟ್ ಮ್ಯಾರೇಜ್ ಅಂಡ್ ಮೇಟ್ ಸೆಲೆಕ್ಷನ್ " ಎಂಬುದಾಗಿತ್ತು .  ೧೫೦ ಪೋಸ್ಟ್   ಗ್ರ್ಯಾಡುಯೇಟ್ ಹುಡುಗಿಯರು ಮತ್ತು ೧೫೦ ಹುಡುಗರನ್ನ (೩೦೦ ಸ್ಯಾಂಪಲ್ಸ್ ) ಆಯ್ಕೆ ಮಾಡಿಕೊಂಡು ಮಾಡಿದ್ದೆ ಥಿಸಿಸ್ ವರ್ಕ್ ಇದು .ಅವರೆಲ್ಲರ ಪ್ರತಿಕ್ರಿಯೆಗಳನ್ನ ನೋಡಿದಾಗ ಆಧುನಿಕ ಜಗತ್ತು ಈಗೀನ ಯುವಜನಾಂಗದ ಮೇಲೆ ಮಾಡುತ್ತಿರುವ ಅಪಾಯಕಾರಿ ಸಂಗತಿಗಳು ಹೊರಬಂದವು. ಸಾಧ್ಯವಾದಷ್ಟನ್ನ ವಿವರಿಸಿದ್ದೇನೆ. ಸಮಯ ಸಿಕ್ಕಾಗ ಉಳಿದವುಗಳನ್ನ ಹಂಚಿಕೊೞುತ್ತೇನೆ.


ಆಧುನೀಕರಣದಿಂದಾ ಯುವ ಜನಾಂಗದ ಮೇಲೆ ಆಗುತ್ತಿರುವ ಕೆಲವು ಧನಾತ್ಮಕ ಮತ್ತು ೠಣಾತ್ಮಕ ಪರಿಣಾಮಗಳು ಹೀಗಿವೆ


ಧನಾತ್ಮಕ ಪರಿಣಾಮಗಳು


೧) ಮಹಿಳೆ ಮತ್ತು ಪುರುಷನಿಗೆ ಸಮಾನ ಹಕ್ಕು ೨) ಮಹಿಳೆಯರಿಗೆ ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಆದ್ಯತೆ ೩) ಮಹಿಳೆಯರಿಗೆ ನೌಕರಿಯಲ್ಲಿ ಸ್ಥಳಾವಕಾಶ ೪) ಮಹಿಳೆಯರ ಸ್ವ ನಿರ್ಧಾರ ೫) ಮಹಿಳೆ ತನ್ನ ತೊಂದರೆಗಳನ್ನ ತಾನೇ ಪರಿಹರಿಸಿಕೊೞುವ ಶಕ್ತಿ ಪಡೆದಿರುವುದು.


ಋನಾತ್ಮಕ ಪರಿಣಾಮಗಳು


೧) ಸಮೂಹ ಮಾಧ್ಯಮ ಯುವಜನತೆಯಲ್ಲಿ ಸಾಮಾಜಿಕ, ಮಾನವೀಯ, ಭಾವನಾತ್ಮಕ ಮತ್ತು ಸಾಂಸ್ಕೃತಿಕ ಬದಲಾವನೆಗಳನ್ನ ತರುತ್ತಿರುವುದು


೨) ಪಾಲಕರು ಕೊಡುವ ಸ್ವಾತಂತ್ರವನ್ನ  ಯುವಜನಾಂಗವು ದುರುಪಯೋಗ ಮಾಡಿಕೊೞುತ್ತಿರುವುದು


೩) ಅಫೇರ್ಸ್ ಅನ್ನುವ ಭೂತಗಳು ಯುವಜನಾಂಗವನ್ನು ತಪ್ಪು ಹಾದಿಗೆ ತೞುತ್ತಿರುವುದು. ೪) ಯುವಜನತೆಯಲ್ಲಿ ಹೆಚ್ಚುತ್ತಿರುವ ವಿವಾಹ ವಿಚ್ಚೇಧನಾ ಘಟನೆಗಳು


೫)  ಒಡೆದು ಹೋಗಿರುವ ಅವಿಭಕ್ತ ಕುಟುಂಬಗಳು ೬) ಹೆಚ್ಚುತ್ತಿರುವ ರಾತ್ರಿ ಪಾರ್ಟಿಗಳು ಹೀಗೆ ಹಲವಾರು.


ಹಾಗಾದರೆ ಮದುವೆ ಎಂಬ ಭಾಂದವ್ಯದಲ್ಲಿ ಅಪಸ್ವರಗಳು ಬರುವುದು ಯಾಕೆ


೧) ಮದುವೆ ಬಾಂಧವ್ಯದಲ್ಲಿ ಅತೃಪ್ತಿ , ಹೊಟ್ಟೇಕಿಚ್ಚು , ಮನನೋಯಿಸುವಿಕೆ ಹೀಗೆ ಇತ್ಯಾದಿ ಋಣಾತ್ಮಕ ಅಂಶಗಳನ್ನ ತರುವುದರಿಂದ


೨) ದಂಪತಿಗಳ ನಡುವೆ  ಸರಿಯಾದ ಸಮರ್ಪಕ  ಸಂಪರ್ಕವಿಲ್ಲದಿರುವುದು, ಒಬ್ಬರಿಗೊಬ್ಬರ  ನಡುವೆ ತಿಳುವಳಿಕೆ ಇರದಿರುವುದು ಮತ್ತು ಸಿಟ್ಟು ಅಸಮಾಧಾನಗಳಿಂದ ಕೂಡಿರುವ ಭಾವನೆಗಳು


೩)  ಒಬ್ಬರು ಇನ್ನೊಬ್ಬರ ಭಾವನೆಗಳಿಗೆ ಬೆಲೆ ಕೊಡದಿರುವುದು, ಒಬ್ಬರ ಬಗ್ಗೆ ಒಬ್ಬರಿಗೆ ತಾತ್ಸಾರ ಮನೋಭಾವನೆ ಮತ್ತು ಅತಿಯಾದ ಒಡೆಯನ ಅಥವಾ ದರ್ಬಾರು ಮಾಡುವಿಕೆ


೪) ಆತ್ಮ ಪ್ರಶಂಸೆಗೆ ಧಕ್ಕೆಯುಂಟು ಮಾಡುವುದು, ಇನ್ನೊಬ್ಬರ ಮೇಲೆ ಅಧೀನತೆ ತೋರುವುದು ಮತ್ತು ಸ್ವಾರ್ಥ ಮನೋಭಾವವಿರುವುದರಿಂದ


೫) ಲಿಂಗಗಳಲ್ಲಿ  ಪ್ರಾಕೃತಿಕ ಬದಲಾವಣೆಗಳ ಬಗ್ಗೆ ನಿಶ್ಕಾಳಜಿಯಿಂದಿರುವುದು


೬) ಒಬ್ಬರು ಇನ್ನೊಬ್ಬರ ವೈವಾಹಿಕ ದಾಂಪತ್ಯದ ತಳಹದಿಯಾದ ಪ್ರೀತಿಯ ಬಗ್ಗೆ ಕಾಳಜಿವಹಿಸದಿರುವುದು (ಇಬ್ಬರು ಇನ್ನೊಬ್ಬರ ಇಚ್ಚೆಗಳನ್ನು ಅರಿತುಕೊೞದೇ ಇರುವುದು)


೭) ಇಬ್ಬರ ನಡುವೆ ಹಟಸ್ವಭಾವ,  ಹೆಚ್ಚು ಅಭಿಮಾನ ,  ಗ್ರಹಿಸುವಿಕೆಯಲ್ಲಿ ಮತ್ತು  ಸಂಪರ್ಕದಲ್ಲಿ ವಿಭಿನ್ನತೆ ತೋರುವುದು, ಮತ್ತು ನಿರ್ಣಯದಲ್ಲಿ, ಆಯ್ಕೆಯಲ್ಲಿ  ಹೆಚ್ಚಿನ  ವಿಭಿನ್ನತೆಯಿರುವುದು.


೮) ಒಬ್ಬರು ಇನ್ನೊಬ್ಬರಿಂದ ತಮ್ಮದೇ ರೀತಿಯಲ್ಲಿ ನಡೆದುಕೊೞಬೇಕೆಂಬ ಭಾವನೆ ಹೊಂದಿರುವುದು ಮತ್ತು ತಾವು ಹೇಳಿದಹಾಗೆ ಕೇಳಬೇಕು ಎಂದುಕೊೞುವುದು ಇನ್ನೊಬ್ಬರಿಗೆ ನೋವನ್ನುಂಟು ಮಾಡುತ್ತದೆ.


೯) ಒಬ್ಬರು ಇನ್ನೊಬ್ಬರ ಮಾನಸಿಕ ಪರಿಸ್ಥಿತಿಗೆ ದಕ್ಕೆ ಉಂಟುಮಾಡುವುದು


೧೦) ಯಾವುದೇ ಕಷ್ಟಗಳು ಬಂದಾಗ ಕೂಡಿ ಬಗೆಹರಿಸುವ ಪ್ರವೃತ್ತಿ ಇಲ್ಲದಿರುವುದು


೧೧) ವೈವಾಹಿಕ ಜೀವನದಲ್ಲಿ ದಂಪತಿಗಳ ನಡುವೆ ಹಾಸ್ಯಭರಿತ ಪ್ರಕೄತಿ ಇಲ್ಲದಿರುವುದು, ಯಾವಾಗಲೂ ಗಂಟು ಮುಖ ಹಾಕಿಕೊಂಡಿರುವುದು


೧೨) ವಿಪರೀತ ವಾದ ಮಾಡಿ ಗೆಲುವು ತನ್ನದೆ ಆಗಬೇಕೆಂಬ ಭಾವನೆ ಬೆಳೆಸಿಕೊೞುವುದು ಮತ್ತು ಮನೆಯಲ್ಲಿ ತಾನು ಹೇಳಿದಂತೆ ಕೇಳಬೇಕು ಎಂಬ ಅಹಂ ಭಾವ 


೧೩) ದುಷ್ಚಟಗಳಿಗೆ ಬಲಿಯಾಗಿರುವುದು (ಯಾವುದೆ ಅಸಾಮಜಿಕವಾದ, ಮತ್ತು ಬಹಿಷ್ಕರಿಸಲ್ಪಡುವಂತ ಚಟಗಳು)


೧೪) ಅಪನಂಬಿಕೆಗಳು, ಭರವಸೆ ಇಲ್ಲದಿರುವುದು, ಸಂಶಯ ಪಿಶಾಚಿಯಾಗಿರುವುದು.


ಇನ್ನೂ ಅನೇಕ ಕಾರಣಗಳಿವೆ


ಹಾಗಾದರೆ ಅನ್ಯೂನ್ಯವಾದ ಮತ್ತು ಸಂತೋಷಭರಿತ ವೈವಾಹಿಕ ಜೀವನಕ್ಕೆ ಬೇಕಾಗುವ ಅಂಶಗಳೆಂದರೆ


೧) ನಂಬಿಕೆ ೨) ಕಾಳಜಿ, ಪ್ರೀತಿ ಎಂಬ ಅಮೂಲ್ಯ ರತ್ನಗಳಿಂದ ಒಬ್ಬರು ಇನ್ನೊಬ್ಬರ ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನ ರಕ್ಷಿಸಿಕೊಂಡು ಬರುವುದು


೩)  ಇಬ್ಬರ ನಡುವೆ ತಿಳುವಳಿಕೆ ೪)  ಎಂತ ಪರಿಸ್ಥಿತಿಯಲ್ಲೂ ಜೊತೆಗಿರುವ ಮನೋಭಾವ ಮತ್ತು ಹೊಂದಾಣಿಕೆ


೫) ಒಬ್ಬರಿಗೊಬ್ಬರು ಪರಿಪೂರ್ಣ ದೈಹಿಕ ಮತ್ತು ಮಾನಸಿಕ ಸುಖಗಳನ್ನ ನೀಡುವುದು


೬) ತಮಗೆ ವಹಿಸಿದ ಪಾತ್ರಗಳನ್ನ ಸಮಂಜಸವಾಗಿ ನಿಭಾಯಿಸುವುದು.( ತಂದೆಯಾಗಿ, ತಾಯಿಯಾಗಿ, ಗಂಡನಾಗಿ ಅಥವಾ ಹೆಂಡತಿಯಾಗಿ ಮಾಡುವ ಕರ್ತವ್ಯಗಳನ್ನ ಕರಾರುವಕ್ಕಾಗಿ ಮಾಡುವುದು)


೭) ಪರಸ್ಪರ ವ್ಯಕ್ತಿತ್ವ ಮತ್ತು ಆತ್ಮಸ್ಥೈರ್ಯದ ಬೆಳವಣಿಗೆಯಲ್ಲಿ ಸಮಭಾಗಿಯಾಗಿರುವುದು


೮) ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನ ಬೆಳೆಸಬೇಕು, ಅವರ ಉತ್ತಮ ಆರೋಗ್ಯಕ್ಕೆ ಶ್ರಮಿಸಬೇಕು. ಅವರಲ್ಲಿ ಉನ್ನತ ವಿದ್ಯಾಭ್ಯಾಸದ ಉಪಯೋಗಗಳು , ಭಾವನಾತ್ಮಕ ಮತ್ತು ಸಾಮಾಜಿಕ ನೈತಿಕತೆಗಳನ್ನ ಬೆಳೆಸಬೇಕು.


೯) ಯಾವುದೇ ತೊಂದರೆಗಳಲ್ಲಿ ಸಹಭಾಗಿತ್ವ ವಹಿಸೆ ಅವುಗಳ ನಿವಾರಣೆಗೆ ಮುಂದಾಗಬೇಕು, ಸ್ವತಂತ್ರ ವಿಚಾರಗಳಿಂದ ನಿರ್ಧಾರ ತೆಗೆದುಕೊೞುವ ಅವಕಾಶ ಕಲ್ಪಿಸಬೇಕು. ಇನ್ನೊಂದು ಪ್ರಮುಖ ಅಂಶವೆಂದರೆ ವೈವಾಹಿಕ ಜೀವನದಲ್ಲಿ ದಂಪತಿಗಳು ತಮ್ಮ ವೈಯಕ್ತಿಕ ವಿಷಯಗಳನ್ನ  ಗೌಪ್ಯವಾಗಿಡಬೇಕು, ದಂಪತಿಗಳ ಹೊರತಾಗಿ ಮೂರನೆ ವ್ಯಕ್ತಿಗೆ ಹೇಳಬಾರದು ಇದರಿಂದ ದಂಪತಿಗಳ ನಡುವೆ ಅಪನಂಬಿಕೆ ಬರುವುದನ್ನ ತಪ್ಪಿಸಿದಂತಾಗುತ್ತದೆ ಮತ್ತು ಇನ್ನೊಬ್ಬರು ತಮ್ಮ್ ಬಗ್ಗೆ ಹೊಟ್ಟೆಕಿಚ್ಚು ಬೆಳೆಸಿಕೊೞುವುದನ್ನ ತಡೆಗಟ್ಟಬಹುದು.


೧೦) ದಾಂಪತ್ಯದಲ್ಲಿ ಪ್ರಾಮಾಣಿಕತೆ, ಸಹಾನುಭೂತಿ , ಅನುಭೂತಿ  ಇನ್ನೂ ಅನೇಕ  ತುಂಬಾ ಪ್ರಮುಖವಾದದ್ದು . 


ನನಗೆ ತಿಳಿದಷ್ಟು ಹೇಳಿದ್ದೇನೆ, ನಮ್ಮ ಸಂಪದದಲ್ಲಿ ಎಷ್ಟೊಂದು ಹಿರಿಯರಿದ್ದಾರೆ ಎಲ್ಲರೂ ಇದನ್ನ ಓದಿ ತಮ್ಮ ತಮ್ಮ ಅನಿಸಿಕೆಗಳನ್ನ ತಿಳಿಸಿ ,ಎಲ್ಲ ಕಿರಿಯರಿಗು ಮತ್ತು ವೈವಾಹಿಕ ಬಾಂಧವ್ಯದಲ್ಲಿರುವವರಿಗೂ ಉತ್ತಮ ಮಾಹಿತಿ ನೀಡಿ,  ಇಂದಿನ ಯುವಜನಾಂಗಕ್ಕೆ ಮಹತ್ವವಾದ ಮೌಲ್ಯಗಳನ್ನ ನೀಡಬೇಕೆಂದು ಕೇಳಿಕೊೞುತ್ತ ತಮ್ಮ ಅಮೂಲ್ಯ ಮಾಹಿತಿಗಳನ್ನ ನೀರಿಕ್ಷಿಸುಯ  ಹಂಬಲದಲ್ಲಿರುವ 


 ತಮ್ಮ ಸುಮಂಗಲಾ 


 

Comments