ಭಾರತ ಪ್ರವಾಸದ ಹಲವು ನೋಟಗಳು !
’ಪಂಚರಂಗಿ’ ಸಿನಿಮ ನೋಡಿದೆ ...
ಇತ್ತೀಚೆಗಿನ ನನ್ನ ಭಾರತ ಪ್ರವಾಸದ ಹಲವು ನೋಟಗಳನ್ನು ದಿಗಂತ್ ಹೇಳುವ ಡೈಲಾಗ್ಸ್ ರೀತಿ ಹೇಳಿದರೆ ಹೇಗೆ ಅನ್ನಿಸಿತು ... ಮೊದಲು ಸುದೀಪ್ ಶೈಲಿಯಲ್ಲಿ ’ಹಳ್ಳೀ ಯಾತ್ರೆ’ ಅಯ್ತು ಈಗ ದಿಗಂತ್ ಸರದಿ ಅಂತೀರ? ಇರಲಿ, ವಿಭಿನ್ನ ಪ್ರಯೋಗದ ಈ ಬರಹವನ್ನು ಓದಿ ನೋಡಿ, ನಿಮಗೆ ಏನನ್ನಿಸುತ್ತದೆಯೋ ಹೇಳಿ :-)
ಲೈಕುಗಳು, ಅನ್-ಲೈಕುಗಳು, ಪ್ರತಿಕ್ರಿಯೆಗಳು ಯಾವುದೇ ’ಗಳು’ ಗಳಿಗೂ ಸ್ವಾಗತಗಳು :-)
ಬೀಗ ಜಡಿದ ತುಂಬಿದ ಸೂಟ್-ಕೇಸುಗಳು, ಏರ್ಪೋರ್ಟ್’ಗೆ ಹೊತ್ತೊಯ್ದ ನಾಲ್ಕು ಚಕ್ರಗಳು, ಪಾಸ್ಪೋರ್ಟ್’ಗಳು, ಟಿಕೇಟುಗಳು, ಚೆಕ್-ಇನ್’ಗಳು, ಬೋರ್ಡಿಂಗ್ ಪಾಸುಗಳು, ತಿಂಡಿ-ತಿನಿಸುಗಳು, ಕಣ್ಣಿದ ಬಿದ್ದ ನೋಟಗಳು, ಫ಼್ಲೈಟ್ ತಪ್ಪಿಹೋದ ದುಗುಡ ಮುಖಗಳು, ತಡವಾಗಿ ಬಂದ ಆತುರದ ಹೆಜ್ಜೆಗಳು, ಎಲ್ಲೆಲ್ಲೂ ಬಣ್ಣ ಬಣ್ಣದ ಡಬ್ಬಗಳು, ಟ್ರಾಲಿಗಳು, ಸೆಕ್ಯೂರಿಟಿ ಚೆಕ್ಕುಗಳು, ಅನುಮಾನಗಳು, ಆತಂಕಗಳು, ಸೀಟುಗಳು, ಬೆಲ್ಟುಗಳು, ಫ಼್ಲೈಟ್’ನಲ್ಲಿ ನೋಡಿದ ಸಿನಿಮಾಗಳು, ಬಿಳೀ ತೊಗಲ ಚೆಲುವಿನ ಮೊಗಗಳು, ಸ್ಮೈಲುಗಳು, ಕಾಫಿ-ಟೀಗಳು, ಊಟಗಳು, ಟಾಯ್ಲೆಟ್ ಹೊರಗೆ ಕಾದು ನಿಂತ ಒತ್ತಡದ ಮುಖಗಳು, ಹೊರ ಬಂದವರ ಸಾಧನೆಗಳು, ವಾಸನೆಗಳು, ನಿದ್ದೆ ಮುಖಗಳು, ಸುಸ್ತಾದ ದೇಹಗಳು, ಸ್ವಾಗತಿಸಿದ ಬಂಧುಗಳು, ದಾರಿಯುದ್ದಕ್ಕೂ ಕಂಡ ಬದಲಾವಣೆಗಳು, ಮಾತುಗಳು, ವಿಷಯಗಳು, ಸಂತಸಗಳು, ಸಂತಾಪಗಳು.
ಮನೆಯ ಜನರುಗಳು, ಊಟಗಳು, ’ಯಾರು ಬಂದಿದ್ದು?’ ಎಂದು ನೋಡಿ ಹೋದ ಜಿರಳೆಗಳು, ತಮ್ಮ ಮೇಲೆ ಒರಗೆಂದು ಕೂಗಿ ಕರೆವ ಸೋಫಗಳು, ಕುರ್ಚಿಗಳು, ಹಾಸಿಗೆಗಳು, ಮಳೆಯಲ್ಲಿ ನೆಂದ ಒದ್ದೆ ಬಟ್ಟೆಗಳು, ಬಚ್ಚಲ ಮನೆಯಲ್ಲಿ ಸೋಪುಗಳು, ಪೇಸ್ಟುಗಳು, ಅಡುಗೆ ಮನೆಯಲ್ಲಿ ಪಾತ್ರೆಗಳು, ಅಡುಗೆಗಳು, ದೇವರ ಮನೆಯಲ್ಲಿ ಪಟಗಳು, ಹೂವುಗಳು, ಹಣ್ಣುಗಳು, ಬೆಳ್ಳಿ ದೀಪಗಳು, ಒಣಗಿದ ಪುಷ್ಪಗಳು, ಬೆಂಕಿ ಕಡ್ಡಿಗಳು, ಜರತಾರಿ ಪಂಚೆಗಳು, ಅಂಗೈ ವಸ್ತ್ರಗಳು, ತೋರಣಗಳು, ದೇವರ ಪಟಗಳು, ಸಾಲಿಗ್ರಾಮಗಳು.
ಗರಿ ಗರಿ ಬಟ್ಟೆಗಳು, ಪಟಾ-ಪಟಿ ಟವಲುಗಳು, ಸ್ನಾನಗಳು, ತಿಂಡಿಗಳು, ಸ್ನೇಹಿತರ ಆಗಮನಗಳು, ದೂರವಾಣಿ ಕರೆಗಳು, ಬೀದಿ ತರಕಾರಿಗಳು, ಕೆಲಸದವರ ಡಿಮ್ಯಾಂಡುಗಳು, ಎದುರು ಮನೆ ಆಂಟಿಗಳು, ನಿವೃತ್ತರಾದ ಅಂಕಲ್’ಗಳು, ಹಳೆಯ ದಿನಗಳಿಗೆ ನೇತು ಹಾಕಿಕೊಂಡ ತಾತಂದಿರ ಮಾತುಗಳು, ಟಿ.ವಿ ಚಾನೆಲ್’ಗಳು, ಪತ್ರಿಕೆಗಳು, ಇಳಿಯದ ಚಿನ್ನ-ಬೆಳ್ಳಿ ಬೆಲೆಗಳು, ಹಗರಣಗಳು, ದೂಷಣೆಗಳು, ಸೋಲುಗಳು, ಗೆಲುವುಗಳು, ಜೈಲುಗಳು, ಬೈಲುಗಳು, ಸ್ವಾಮಿಗಳು, ಕಾಮಿಗಳು, ಬಾಲು-ಬ್ಯಾಟುಗಳು, ಕೂತಲ್ಲೆ ತೂಕಡಿಸೋ ಕೆಲಸವಿಲ್ಲದ ನಮ್ಮೀ ದೇಹಗಳು.
ಶಾಪಿಂಗ್ ಹೊರಟ ನಾವುಗಳು, ಕಾರುಗಳು, ಎರಡು ಚಕ್ರದ ಗಾಡಿಗಳು, ಹಾರನ್’ಗಳು, ಮೆಟ್ರೋ ಕಂಬಗಳು, ಸಿಟಿ-ಟ್ಯಾಕ್ಸಿಗಳು, ಬಸ್ಸುಗಳು, ಧೂಳುಗಳು, ನಿಂತ ನೀರುಗಳು, ಅಡ್ಡ-ದಿಡ್ಡಿ ನುಗ್ಗೋ ಆಟೋಗಳು, ಬಟ್ಟೆ ಅಂಗಡಿ ಬೊಂಬೆಗಳು, ದಿಸೈನರ್ ಸೀರೆಗಳು, ಬಿಳೀ ಪಂಚೆಗಳು, ಜೀನ್ಸ್ ಪ್ಯಾಂಟುಗಳು, ಟೀ-ಶರ್ಟುಗಳು, ಶೂಗಳು, ಹೊರದೇಶೀ ಬಟ್ಟೆಗಳು, ಅಂಗಡಿಗಳಿಗೆ ನುಗ್ಗೋ ಹೆಂಗಸರುಗಳು, ಕ್ಯಾರೀ-ಬ್ಯಾಗುಗಳು, ಜೋಲು ಮೋರೆ ಗಂಡು ಮುಖಗಳು, ಬಿಳೀ ಟೋಪಿಗಳು, ಭಾರತ ಬಾವುಟಗಳು, ಧರಣಿಗಳು, ಕೂಗಾಟಗಳು, ಚರ್ಚೆಗಳು, ನಿರ್ಲಿಪ್ತತೆಯ ಮುಖಗಳು, ಆಶಾಭಾವನೆಗಳು.
ಬಂಧುಗಳು, ಬಳಗಗಳು, ವಾಕ್ಪಥಿಗಳು, ಚರ್ಚೆಗಳು, ಪರಿಚಿತ ಮುಖಗಳು, ಅಪರಿಚಿತ ವದನಗಳು, ಪರಿಚಯಗಳು, ಫೋಟೋಗಳು, ತಿಂಡಿಗಳು, ಕಾಫಿಗಳು, ಸಂಪದ ಬಳಗಗಳು, ಶಾಲೆಗಳು, ಮೇಷ್ಟ್ರುಗಳು, ಹೊಸ ಸ್ನೇಹಗಳು, ಇಡ್ಲಿ-ವಡೆಗಳು, ಕಾಫಿ-ಟೀ’ಗಳು, ವಿಶ್ವಾಸಗಳು, ಹಳೆಯ ಸ್ನೇಹಗಳು.
ಛತ್ರಗಳು, ಪಾರ್ಟಿ ಹಾಲ್’ಗಳು, ಮುಂಜಿಗಳು, ಮದುವೆಗಳು, ಉಡುಗೊರೆಗಳು, ಅಡುಗೆಯವರುಗಳು, ಬಾಳೆ ಎಲೆಗಳು, ಎಂಜಲು ಎಲೆಗಳು, ಅಡಿಕೆ-ಎಲೆಗಳು, ತರಕಾರಿಗಳು, ಪಲ್ಯಗಳು, ಜಿಲೇಬಿಗಳು, ಬರ್ಫಿಗಳು, ಬಾದೂಶಾಗಳು, ಸಾಂಬಾರ್ ಬಕೇಟುಗಳು, ಸೌಟುಗಳು, ಸ್ಮೈಲುಗಳು, ಕುಹಕಗಳು, ಮಾತುಗಳು, ಹಾಸ್ಯಗಳು, ನೆನಪುಗಳು, ಅಳುಗಳು, ನಗುಗಳು, ಹೆಣ್ಣಾಳುಗಳು, ಗಂಡಾಳುಗಳು, ಅತೃಪ್ತ ಹೃದಯಗಳು.
ಯಾತ್ರಾಸ್ಥಳಗಳು, ಹೂವುಗಳು, ಹಣ್ಣುಗಳು, ನೈವೇದ್ಯಗಳು, ಅರ್ಚನೆಗಳು, ಅರ್ಚಕರುಗಳು, ಮಂತ್ರಗಳು, ತಂತ್ರಗಳು, ಬಾಳೇಹಣ್ಣುಗಳು, ಕೋತಿಗಳು, ವ್ಯಾನುಗಳು, ಬೈಕುಗಳು, ಪೂಜೆಗಳು, ಫೋಟೋಗಳು, ಐಲುಗಳು, ಮೊಬೈಲುಗಳು, ರಿಂಗ್ ಟೋನುಗಳು, ಮೆಸೇಜುಗಳು, ಎಸ್.ಎಮ್.ಎಸ್’ಗಳು, ಫಕ್ಕನೆ ನಗು ತರಿಸೋ ಜೋಕುಗಳು, ಟೈಮ್ ಮಾಡಿಕೊಂಡು ನಗುವ ಜೋಕುಗಳು, ಅಳು ಬರಿಸೋ ಜೋಕುಗಳು.
ಜ್ಯೂಸ್ ಸೆಂಟರ್’ಗಳು, ಪಾನಿಪುರಿ ಮಡಿಕೆಗಳು, ಗಾಡಿಗಳು, ಪೂರಿ ಒಡೆವ ಬೆರಳುಗಳು, ಪಾನಿಯಲ್ಲಿ ಅದ್ದುವ ಕೈಗಳು, ನುಂಗುವ ಬಾಯಿಗಳು, ಒದ್ದೆ ಕಣ್ಣುಗಳು, ಮೂಗು ತಿಕ್ಕೋ ಕರವಸ್ತ್ರಗಳು, ಪೂರಿಗಳು, ಮೋರಿಗಳು, ಪಾರ್ಕಿಂಗ್ ಹುಡುಕೋ ಕಣ್ಣುಗಳು, ಬಾಟಲ್ ನೀರುಗಳು, ಬಟ್ಟೆ ಮೇಲೆ ಸೋರಿಕೆಗಳು, ಬೈಗಳು, ಎಸೆದ ಪ್ಲೇಟುಗಳು, ದೊನ್ನೆಗಳು, ಪೇಪರ್’ಗಳು, ಹಾಳುಗೆಟ್ಟ ರಸ್ತೆಗಳು, ಕೊಚ್ಚೆ ನೀರುಗಳು, ಗೇಟುಗಳು, ನೋ ಪಾರ್ಕಿಂಗ್ ಬೋರ್ಡುಗಳು, ಬೊಗಳುವ ನಾಯಿಗಳು, ಪರ್ಸ್ ಹೊಡೆಯುವ ಕೈಗಳು, ದುಡ್ಡು ಎಣಿಸೋ ಹಸ್ತಗಳು, ಇಲ್ಲದ ಚಿಲ್ಲರೆಗಳು, ಲಾಭಗಳು, ನಷ್ಟಗಳು, ನಾಳೆಯ ನಿರೀಕ್ಷೆಗಳು.
ಖಾನಾವಳಿಗಳು, ದೋಸೆಗಳು, ಇಡ್ಲಿಗಳು, ತೂತು ವಡೆಗಳು, ಮಾತುಗಳು, ಬೆರಳದ್ದಿದ ನೀರಿನ ಲೋಟಗಳು, ಬಿಲ್’ಗಳು, ತಟ್ಟೆಗಳು, ಕಪ್ಪಿಟ್ಟ ಬಟ್ಟೆಗಳು, ಟೇಬಲ್ ಒರೆಸುವ ಕೈಗಳು, ನೊಣಗಳು, ಫ್ಯಾನುಗಳು, ಷುಗರ್’ಲೆಸ್ ಕಾಫಿಗಳು, ಸುಟ್ಟ ನಾಲಿಗೆಗಳು, ಹೊಗೆ ಬಿಡುವ ಬಾಡಿಗಳು, ಹೊಗೆ ಕುಡಿವ ಗಾಡಿಗಳು.
ಸ್ನೇಹಿತರುಗಳು, ಮೂರು ಮಹಡಿ ಮನೆಗಳು, ಖಾಲೀ ಸೈಟುಗಳು, ಹೊಸತನ ವಾಸನೆಗಳು, ಗ್ರಾನೈಟುಗಳು, ಕೆತ್ತನೆಗಳು, ಕರುಗಳು, ಹರಟೆಗಳು, ನೆನಪುಗಳು, ಊಟಗಳು, ವಿಶ್ವಾಸಗಳು, ಕೊಡುಗೆಗಳು, ಬೀಳ್ಕೊಡುಗೆಗಳು.
ಮಂತ್ರಿ ಮಾಲುಗಳು, ಸ್ನೇಹಿತರುಗಳು, ಮಾತುಕತೆಗಳು, ಸೆಂಟ್ರಲ್ ಮಾಲುಗಳು, ಜನಜಂಗುಳಿಗಳು, ತಿಂಡಿ-ತಿನಿಸುಗಳು, ನೋಟಗಳು, ನೋಟುಗಳು, ಖರ್ಚುಗಳು, ಚೌಕಾಸಿಗಳು, ಪುಸ್ತಕಗಳು, ಕ್ಯಾಸೆಟ್’ಗಳು, ಸಿ.ಡಿಗಳು.
ಬಂಧುಗಳು, ಬಳಗಗಳು, ಹಬ್ಬಗಳು, ಗೌರಿ-ಗಣೇಶಗಳು, ಪೂಜೆಗಳು, ಕಡುಬುಗಳು, ಆಂಬೋಡೆಗಳು, ಪಾಯಸಗಳು, ಬಸ್ಕಿಗಳು, ಆರತಿಗಳು, ನಮಸ್ಕಾರಗಳು, ಶಾಮಿಯಾನಗಳು, ಆರ್ಕೇಸ್ಟ್ರಾಗಳು, ಹಾಡುಗಳು, ವ್ಯಾನುಗಳು, ಕುಣಿತಗಳು, ಕುಡಿತಗಳು, ಜಗಳಗಳು, ಹೊಡೆತಗಳು, ಬಡಿತಗಳು, ವಿಸರ್ಜನೆಗಳು, ಕಲುಷಿತ ನೀರುಗಳು.
ಶಾಪಿಂಗುಗಳು, ಪ್ಯಾಕಿಂಗುಗಳು, ವಿದಾಯಗಳು, ಡಬ್ಬಗಳು, ತೂಕಗಳು, ಚೆಕ್-ಇನ್’ಗಳು, ರುಚಿಯಿಲ್ಲದ ಊಟಗಳು, ಕೆಟ್ಟ ಸಿನಿಮಾಗಳು, ನಿದ್ದೆ ತಾರದ ಪಯಣಗಳು, ಕಾಯುವಿಕೆಗಳು, ತೊಂದರೆ ಇಲ್ಲದೆ ಕೈ ಸೇರಿದ ಡಬ್ಬಗಳು, ಹೊತ್ತೊಯ್ದ ನಾಲ್ಕು ಚಕ್ರಗಳು, ಮನೆ ಸೇರಿದ ನೆಮ್ಮದಿ ಮನಗಳು ...
ಎಲ್ಲವನ್ನೂ ಮೀರಿದವುಗಳು ... ನಿಮ್ಮಲ್ಲಿ ಹಲವರೊಂದಿಗೆ ಕಳೆದ ಸಂತಸದ ಕ್ಷಣಗಳು.
Comments
ಉ: ಭಾರತ ಪ್ರವಾಸದ ಹಲವು ನೋಟಗಳು !
In reply to ಉ: ಭಾರತ ಪ್ರವಾಸದ ಹಲವು ನೋಟಗಳು ! by kamath_kumble
ಉ: ಭಾರತ ಪ್ರವಾಸದ ಹಲವು ನೋಟಗಳು !
ಉ: ಭಾರತ ಪ್ರವಾಸದ ಹಲವು ನೋಟಗಳು !
In reply to ಉ: ಭಾರತ ಪ್ರವಾಸದ ಹಲವು ನೋಟಗಳು ! by sathishnasa
ಉ: ಭಾರತ ಪ್ರವಾಸದ ಹಲವು ನೋಟಗಳು !
ಉ: ಭಾರತ ಪ್ರವಾಸದ ಹಲವು ನೋಟಗಳು !
In reply to ಉ: ಭಾರತ ಪ್ರವಾಸದ ಹಲವು ನೋಟಗಳು ! by partha1059
ಉ: ಭಾರತ ಪ್ರವಾಸದ ಹಲವು ನೋಟಗಳು !
ಉ: ಭಾರತ ಪ್ರವಾಸದ ಹಲವು ನೋಟಗಳು !
In reply to ಉ: ಭಾರತ ಪ್ರವಾಸದ ಹಲವು ನೋಟಗಳು ! by kavinagaraj
ಉ: ಭಾರತ ಪ್ರವಾಸದ ಹಲವು ನೋಟಗಳು !
In reply to ಉ: ಭಾರತ ಪ್ರವಾಸದ ಹಲವು ನೋಟಗಳು ! by bhalle
ಉ: ಭಾರತ ಪ್ರವಾಸದ ಹಲವು ನೋಟಗಳು !
In reply to ಉ: ಭಾರತ ಪ್ರವಾಸದ ಹಲವು ನೋಟಗಳು ! by Jayanth Ramachar
ಉ: ಭಾರತ ಪ್ರವಾಸದ ಹಲವು ನೋಟಗಳು !
In reply to ಉ: ಭಾರತ ಪ್ರವಾಸದ ಹಲವು ನೋಟಗಳು ! by manju787
ಉ: ಭಾರತ ಪ್ರವಾಸದ ಹಲವು ನೋಟಗಳು !
In reply to ಉ: ಭಾರತ ಪ್ರವಾಸದ ಹಲವು ನೋಟಗಳು ! by bhalle
ಉ: ಭಾರತ ಪ್ರವಾಸದ ಹಲವು ನೋಟಗಳು !
In reply to ಉ: ಭಾರತ ಪ್ರವಾಸದ ಹಲವು ನೋಟಗಳು ! by manju787
ಉ: ಭಾರತ ಪ್ರವಾಸದ ಹಲವು ನೋಟಗಳು !
In reply to ಉ: ಭಾರತ ಪ್ರವಾಸದ ಹಲವು ನೋಟಗಳು ! by Jayanth Ramachar
ಉ: ಭಾರತ ಪ್ರವಾಸದ ಹಲವು ನೋಟಗಳು !
In reply to ಉ: ಭಾರತ ಪ್ರವಾಸದ ಹಲವು ನೋಟಗಳು ! by bhalle
ಉ: ಭಾರತ ಪ್ರವಾಸದ ಹಲವು ನೋಟಗಳು !
In reply to ಉ: ಭಾರತ ಪ್ರವಾಸದ ಹಲವು ನೋಟಗಳು ! by Prabhu Murthy
ಉ: ಭಾರತ ಪ್ರವಾಸದ ಹಲವು ನೋಟಗಳು !