ಅಣ್ಣಿಗೇರಿ ಒಂದು ಭಯಾನಕ ಅನುಭವ

ಅಣ್ಣಿಗೇರಿ ಒಂದು ಭಯಾನಕ ಅನುಭವ

ಒಂದು ಒಂದೂವರೆ ವರುಷ ಹಿಂದಿರಬಹುದು. ಪತ್ರಿಕೆಗಳಲ್ಲಿ ಟಿವಿಗಳಲ್ಲಿ ಎಲ್ಲಿ ನೋಡಿದರೂ ಧಾರವಾಡದ ಬಳಿ ಇರುವ ಅಣ್ಣಿಗೇರಿಯಲ್ಲಿ ಕಾಲುವೆಯ ಬಳಿ ತಲೆಬುರುಡೆಗಳ ರಾಶಿ ಎಂಬ ಸುದ್ದಿ ಕೇಳಿ ನೋಡಿ ಆಶ್ಚರ್ಯ ಕುತೂಹಲ ಎಲ್ಲ ಒಟ್ಟಿಗೆ ಆಗಿತ್ತುಎಲ್ಲಿಂದ ಬಂತು ಇಷ್ಟೊಂದು ಬುರುಡೆಗಳುಯಾವ ಕಾಲದ ಬುರುಡೆಗಳು ಇವುಸ್ವಾತಂತ್ರ್ಯದಲ್ಲಿ ಹೋರಾಡಿದವರ ಬುರುಡೆಗಳಅಥವಾ ಯುದ್ಧದಲ್ಲಿ ಮೃತಪಟ್ಟವರ ಬುರುಡೆಗಳ ಹೀಗೆ ಹಲವಾರು ಯೋಚನೆಗಳು ತಲೆಯಲ್ಲಿ ಹೊಕ್ಕಿದ್ದವುನಾನು ಒಮ್ಮೆ ಏಕೆ ಹೋಗಿ ನೋಡಬಾರದು ಎಂಬ ಯೋಚನೆಯೂ ತಲೆಯಲ್ಲಿ ಬಂದು ಅಲ್ಲಿಗೆ ಹೋಗುತ್ತೇನೆಂದು ಮನೆಯಲ್ಲಿ ಕೇಳಿ ಬೈಸಿಕೊಂಡಿದ್ದು ಆಯಿತುಕಾಲ ಕಳೆದಂತೆ ಅದು ಮರೆತು ಹೋಯಿತುಅದರ ಬಗ್ಗೆ ಯೋಚನೆಯೂ ಬರಲಿಲ್ಲಹೀಗಿರಬೇಕಾದರೆ ಮೊನ್ನೆ ಸಂಪದದಲ್ಲಿ ಪಾರ್ಥಸಾರಥಿಯವರ ತಿಂಗಳಿಗೊಂದು ದೆವ್ವದ ಕಥೆಯಲ್ಲಿ ಬುರುಡೆ ನಾಟಿ ಅಣ್ಣಿಗೇರಿಯಲ್ಲಿ ಓದಿದ ಮೇಲೆ ಅಷ್ಟೇ ಮತ್ತೆ ಅಣ್ಣಿಗೇರಿಯ ನೆನಪಾದದ್ದು. ಮತ್ತೆ ನನ್ನೊಳಗೆ ಒಮ್ಮೆ ಅಣ್ಣಿಗೇರಿಗೆ ಹೋಗಿ ನೋಡಿಕೊಂಡು ಬರಬೇಕು ಬುರುಡೆಗಳ ಬಗ್ಗೆ ಮಾಹಿತಿ ಕಲೆಹಾಕಬೇಕೆಂಬ ಆಸೆ ಚಿಗುರೊಡೆಯಿತು. ಮತ್ತೆ ಮನೆಯಲ್ಲಿ ಹೇಳಿದರೆ ಬಿಡುವುದಿಲ್ಲ ಂದು ಗೊತ್ತಿತ್ತು ಅದಕ್ಕೆ  ಬಾರಿ ನೋ ಕೆಲಸದ ನೆಪ ಹೇಳಿ ಧಾರವಾಡಕ್ಕೆ ೋಗಿ ಬರುತ್ತೇನೆಂದು ಹೇಳಿ ಒಂದು ರಾತ್ರಿ ಹೊರಟೇಬಿಟ್ಟೆ.


ಮಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ಧಾರವಾಡದ ಬಸ್ ಗೆ ಕಾಯುತ್ತ ನಿಂತಿದ್ದಾಗ ತಲೆ ತುಂಬಾ ಬರಿ ಬುರುಡೆಗಳದೇ ಯೋಚನೆ ತುಂಬಿತ್ತು. ಅಷ್ಟರಲ್ಲಿ ಕಣ್ಣಿಗೆ ಕಡೂರು ಬಸ್ ಕಂಡು ಪಾರ್ಥಸಾರಥಿಯವರು ತಮ್ಮ ಕಥೆಯಲ್ಲಿ ಕಡೂರಿನ ಬಳಿ ಇರುವ ಅಣ್ಣಿಗೇರಿಯ ಬಗ್ಗೆ ಬರೆದದ್ದು ನೆನಪಿಸಿಕೊಂಡು ನಗು ಬಂದು ನಾನು ಹೋಗಬೇಕಾಗಿರುವುದು ಧಾರವಾಡಕ್ಕೆ ಎಂದುಕೊಂಡು ಅತ್ತ ಇತ್ತ ನೋಡುತ್ತಿರುವಾಗ ಬಸ್ ನಿಲ್ದಾಣದಲ್ಲಿ ಎಲ್ಲರೂ ದೇಹ ಮಾತ್ರ ಸರಿ ಇದ್ದು ಮೇಲೆ ಮಾತ್ರ ಬರೀ ಬುರುಡೆಗಳು ಕಂಡಂತೆ ಕಂಡು ಥೂ ಇದೇನಪ್ಪ ಎನ್ನುವಷ್ಟರಲ್ಲಿ ಬಸ್ ಬಂತು. ಬಸ್ಸಿನ ಬಳಿ ಹೋಗಿ ಕಂಡಕ್ಟರ್ ಹತ್ತಿರ ಧಾರವಾಡಕ್ಕೆ ಒಂದು ಟಿಕೆಟ್ ಕೊಡಿ ಎಂದಾಗ ಅತ್ತ ತಿರುಗಿದ್ದ ಕಂಡಕ್ಟರ್ ತನ್ನ ಕತ್ತನ್ನು ಮಾತ್ರ ತಿರುಗಿಸಿದ ಒಂದು ಕ್ಷಣ ಭಯವಾಯಿತು. ಅಲ್ಲೂ ಬರೀ ಬುರುಡೆ ಕಂಡಂತೆ ಕಂಡರೂ ಇದು ನನ್ನ ಭ್ರಮೆ ಎಂದುಕೊಂಡು ಟಿಕೆಟ್ ತೆಗೆದುಕೊಂಡು ಬಸ್ ಒಳಗೆ ಅಡಿ ಇಟ್ಟೆ. ಅಂದು ವಾರದ ದಿನವಾದ್ದರಿಂದ ಅಷ್ಟೇನೂ ಜನ ಇರಲಿಲ್ಲ. ಲಗೇಜ್ ಅನ್ನು ಮೇಲೆ ಇಡೋಣ ಎಂದು ನೋಡಿದರೆ ಅಲ್ಲಿ ಬರೀ ರಕ್ತ ಮೂಳೆಗಳೇ ಕಂಡಂತೆ ಭಾಸವಾಯಿತು. ಮತ್ತೆ ಭ್ರಮೆ ಎಂದುಕೊಂಡು ಲಗೇಜ್ ಇತ್ತು ಕುಳಿತುಕೊಂಡು ಮನದಲ್ಲಿ ಇಷ್ಟದೈವವನ್ನು ನೆನೆದು ಬಸ್ ಹೊರಡುವುದನ್ನು ಕಾಯುತ್ತ ಕುಳಿತೆ.


ಅಂತೂ ಬಸ್ ಹೊರಟಿತು. ಆಚೆ ಎಲ್ಲ ಗೌ...ಎನ್ನುವ ಕತ್ತಲು. ಇನ್ನೂ ನಿದ್ದೆ ಹತ್ತಿರಲಿಲ್ಲ. ಹಾಗೆ ಕಿಟಕಿಯ ಆಚೆ ನೋಡಿಕೊಂಡು ಕುಳಿತೆ. ದಾರಿಯಲ್ಲಿ ಕಾಣಬರುವ ತೆಂಗಿನ ಮರದಲ್ಲೆಲ್ಲ ಬರೀ ತಲೆ ಬುರುಡೆಗಳೇ ಬೆಳೆದಂತೆ, ಪಕ್ಕದಲ್ಲಿ ಯಾರೋ ಒಬ್ಬರು ಬುಟ್ಟಿಯ ತುಂಬಾ ತಲೆ ಬುರುಡೆಗಳನ್ನು ಇಟ್ಟುಕೊಂಡು ನಾಟಿ ಮಾಡುತ್ತಿರುವ ಹಾಗೆ ಏನೇನೋ ಅನಿಸುತ್ತಿತ್ತು. ಯಾಕಪ್ಪ ಪಾರ್ಥ ಅವರ ಕಥೆಯನ್ನು ಓದಿದೆ ಅನಿಸಿಬಿಟ್ಟಿತು. ಸುಮ್ಮನೆ ಮನೆಯಲ್ಲಿ ಇರಬಾರದೇ ನನಗೆ ಬೇಕಿತ್ತೆ ಇವಾಗ ಅಣ್ಣಿಗೇರಿಗೆ ಹೋಗುವುದು ಎನಿಸಿದರೂ ಹೊರಟಿದ್ದು ಆಗಿದೆ ಮತ್ಯಾಕೆ ಚಿಂತೆ ಎಂದುಕೊಂಡು ಕಣ್ಣು ಮುಚ್ಚಿ ಮಲಗಿದೆ.


ಅದ್ಯಾವಾಗ ನಿದ್ರೆ ಹತ್ತಿತೋ ಗೊತ್ತಿಲ್ಲ ಕಣ್ಣು ಬಿಟ್ಟಾಗ ಯಾವುದೋ ಸ್ಮಶಾನದಲ್ಲಿ ಇದ್ದಂತೆ ಅನಿಸಿತು. ಸರಿಯಾಗಿ ಕಣ್ಣು ಉಜ್ಜಿಕೊಂಡು ನೋಡಿದೆ ಸಧ್ಯ ಇನ್ನೂ ಬಸ್ಸಿನಲ್ಲೇ ಇದ್ದೆ. ಆಗಷ್ಟೇ ಬೆಳಕು ಹರಿಯುತ್ತಿತ್ತು. ಆಚೆ ನೋಡಿದೆ ಧಾರವಾಡ ಹದಿನೈದು ಕಿ.ಮೀ ಎಂಬ ಫಲಕ ಕಂಡಿತು. ಧಾರವಾಡಕ್ಕೆ ಹೋಗಿ ಅಲ್ಲಿಂದ ಅಣ್ಣಿಗೇರಿಗೆ ಬಸ್ಸಿನಲ್ಲಿ ಹೋಗುವುದೋ ಅಥವಾ ರೈಲಿನಲ್ಲಿ ಹೋಗುವುದೋ ಎಂದುಕೊಂಡವನಿಗೆ ಮರುಕ್ಷಣದಲ್ಲೇ ಪಾರ್ಥ ಅವರ ಕಥೆ ನೆನಪಿಗೆ ಬಂದು ರೈಲಿನ ಸಹವಾಸವೇ ಬೇಡ ಬಸ್ಸಿನಲ್ಲೇ ಹೋಗೋಣ ಎಂದುಕೊಂಡು ಲಗೇಜ್ ಇಳಿಸಿಕೊಂಡು ಸಿದ್ಧನಾದೆ. ಇನ್ನೇನು ಧಾರವಾಡ ಹತ್ತಿರ ಬರುತ್ತಿದ್ದಂತೆ ಮುಂದೆ ಹೋಗಿ ಚಾಲಕನ ಬಳಿ ಅಲ್ಲಿಂದ ಅಣ್ಣಿಗೇರಿಗೆ ಹೇಗೆ ಹೋಗುವುದು ಎಂದು ಕೇಳೋಣ ಎಂದುಕೊಂಡು ಮುಂದೆ ಬಂದೆ. ಅಲ್ಲಿ ನೋಡಿದರೆ ಚಾಲಕನೇ ಇಲ್ಲದೆ ಬಸ್ ಹೋಗುತ್ತಿದೆ. ಛೆ ಇದೇನಪ್ಪ ಹೀಗೇಕೆ ಆಗುತ್ತಿದೆ ಎಂದುಕೊಂಡು ಮತ್ತೆ ಸರಿಯಾಗಿ ನೋಡಿದೆ ಚಾಲಕ ಇದ್ದಾನೆ. ಅಬ್ಬ ಸಧ್ಯ ಎಂದುಕೊಂಡು ಸರ್ ಎಂದೇ. ಆತ ಇತ್ತ ತಿರುಗಿದ. ಆತ ಥೇಟ್ ಪಾರ್ಥ ಅವರ ಕಥೆಯಲ್ಲಿ ವರ್ಣಿಸಿದಂತೆ ಇದ್ದಾನೆ. ದಪ್ಪಗೆ ಕಪ್ಪಗೆ ತಲೆ ತುಂಬಾ ಗುಂಗುರು ಕೂದಲು ಮುಖದಲ್ಲೆಲ್ಲ ಏನೋ ಕಲೆಗಳು ಕಣ್ಣುಗಳು ಅಂತೂ ಕೆಂಪಗೆ ಹೊಳೆಯುತ್ತಿತ್ತು. ಕ್ಷಣ ಕಾಲ ಭಯವಾಗಿ ಧಾರವಾಡದಿಂದ ಅಣ್ಣಿಗೇರಿ ಗೆ ಹೇಗೆ ಹೋಗಬೇಕು ಎಂದು ಕೇಳಿದೆ. ಆತನ ಧ್ವನಿ ಸಹ ಕಥೆಯಲ್ಲಿ ಇದ್ದಂತೆ ಇತ್ತು. ನನಗೆ ಭಯವಾಗಿ ನಿಮ್ಮ ಧ್ವನಿ ಏಕೆ ಹಾಗಿದೆ ಎಂದು ಕೇಳಿಬಿಟ್ಟೆ. ಆತ ಒಂದು ಕ್ಷಣ ದುರುಗುಟ್ಟಿ ನೋಡಿ ನಕ್ಕು ಗಂಟಲು ಕಟ್ಟಿದೆ ಎಂದ. ನನಗೆ ಸಮಾಧಾನವಾಯಿತು. ನಂತರ ಆತ ಅಣ್ಣಿಗೇರಿ ಗೆ ಹೇಗೆ ಹೋಗಬೇಕು ಎಂದು ತಿಳಿಸಿದ. ಬಸ್ ಇಳಿದು ಅಣ್ಣಿಗೇರಿ ಗೆ ಹೋಗುವ ಬಸ್ ಸಲುವಾಗಿ ಕಾಯುತಾ ನಿಂತೇ.


ಬಸ್ ಬರುವಷ್ಟರಲ್ಲಿ ಅಲ್ಲೇ ಪಕ್ಕದಲ್ಲಿದ್ದ ಹೋಟೆಲ್ ಗೆ ಹೋಗಿ ಸಿಂಕ್ ನಲ್ಲಿ ಇದ್ದ ನಲ್ಲಿಯಲ್ಲಿ ಮುಖ ತೊಳೆದು ಎದುರಿಗಿದ್ದ ಕನ್ನಡಿಯಲ್ಲಿ ಮುಖ ನೋಡಿದೆ ತಕ್ಷಣ ಚೀರುವಂತಾಯಿತು. ನನ್ನ ಮುಖ ಇರುವ ಜಾಗದಲ್ಲಿ ಬುರುಡೆ ಮಾತ್ರ ಇದೆ. ಮತ್ತೆ ಭ್ರಮೆ ಎಂದು ತಿಳಿದು ಆಚೆ ಬಂದು ಕಾಫಿ ಕುಡಿದ ಮೇಲೆ ಸ್ವಲ್ಪ ಸಮಾಧಾನವಾಯಿತು. ಹೋಟೆಲ್ ನಿಂದ ಹೊರಗೆ ಬರುವಷ್ಟರಲ್ಲಿ ಅಣ್ಣಿಗೇರಿ ಬಸ್ ಬಂದಿತ್ತು. ಸೀದಾ ಹೋಗಿ ಅಣ್ಣಿಗೇರಿ ಎಂದು ಹೇಳಿ ಟಿಕೆಟ್ ಪಡೆದು ಕೂತೆ. ಬಸ್ ಹೊರಡಲು ಶುರುವಾಯಿತು. ಆಚೆಯಿಂದ ತಣ್ಣನೆ ಗಾಳಿ ಆಹ್ಲಾದಕರವಾಗಿತ್ತು. ಸುತ್ತಲೂ ಹಸಿರು ಗಿಡಗಳು ಪಕ್ಕದಲ್ಲೇ ತಲೆ ಬುರುಡೆಗಳು ಕಂಡಂತೆ ಭಾಸವಾಗುತ್ತಿತ್ತು. ಇದ್ಯಾಕೋ ಸರಿ ಹೋಗುತ್ತಿಲ್ಲ ಎಂದುಕೊಂಡು ಮತ್ತೆ ಕಣ್ಣುಮುಚ್ಚಿ ಕುಳಿತೆ. ಮತ್ತೆ ಕಂಡಕ್ಟರ್ ಬಂದು ಅಣ್ಣಿಗೇರಿ ಇಳೀರಿ ಎಂದಾಗಲೇ ಎಚ್ಚರವಾಯಿತು. ಕೆಳಗೆ ಇಳಿದು ನೋಡಿದರೆ ಇಡೀ ಊರೇ ಬುರುಡೆಗಳಿಂದ ತುಂಬಿದಂತೆ ಭಾಸವಾಗುತ್ತಿತ್ತು. ರಸ್ತೆಯ ಮೇಲೆ ನಡೆದಾದುವರದು ದೇಹ ಮಾತ್ರ ಸರಿ ಇದ್ದಂತೆ ಮೇಲೆ ಬರೀ ಬುರುಡೆ ಇದ್ದಂತೆ, ತಳ್ಳುವ ಗಾಡಿಗಳಲ್ಲಿ ಬುರುಡೆಗಳನ್ನು ಇಟ್ಟುಕೊಂಡು ಮಾರುತ್ತಿದ್ದಂತೆ, ಹುಡುಗರು ಕ್ರಿಕೆಟ್ ಆಡಲು ಬಾಲ್ ಬದಲು ಬುರುಡೆ ಉಪಯೋಗಿಸಿದಂತೆ, ಗಿಡಮರಗಳೆಲ್ಲವೂ ಬುರುಡೆಗಳಿಂದ ತುಂಬಿದಂತೆ ಅನಿಸುತ್ತಿತ್ತು. ಇಲ್ಲಿಗೆ ಬಂದು ತಪ್ಪು ಮಾಡಿದೆ ಅನಿಸಿ ಅಲ್ಲಿ ನಡೆದು ಹೋಗುತ್ತಿದ್ದವರನ್ನು ತಡೆದು ಸ್ವಾಮಿ ಇಲ್ಲಿ ಕಾಲುವೆ ಬಳಿ ಬುರುಡೆಗಳು ಸಿಕ್ಕಿತ್ತಲ್ಲ ಕಾಲುವೆ ಎಲ್ಲಿ ಇರುವುದು ಎಂದು ಕೇಳಿದ್ದಕ್ಕೆ ಆತ ನನ್ನನ್ನು ಮೇಲಿಂದ ಕೆಳಗಿನವರೆಗೂ ವಿಚಿತ್ರವಾಗಿ ನೋಡಿ ಕಡೆ ಹೋಗಿ ಎಂದು ದಾರಿ ತೋರಿಸಿದ.


ಅವನು ತೋರಿಸಿದ ಹಾದಿಯಲ್ಲಿ ನಡೆದು  ಬರುತ್ತಿರುವಾಗ ಪಕ್ಕದಲ್ಲಿ ಗದ್ದೆಗಳಲ್ಲಿ ಆಳುಗಳು ತೆಂಗಿನ ಮರದಿಂದ ಬುರುಡೆಗಳನ್ನು, ಇಳಿಸುತ್ತಿರುವಂತೆ ಪಕ್ಕದಲ್ಲಿ ನಾಟಿ ಮಾಡಲು ಬುರುಡೆಗಳನ್ನು ಬುಟ್ಟಿಯಲ್ಲಿ ಇಟ್ಟುಕೊಂಡಂತೆ ಭಾಸವಾಗಿ ಆಕಡೆ ಈಕಡೆ ನೋಡಲೆಬಾರದು ಎಂದುಕೊಂಡು ಸೀದಾ ಕಾಲುವೆ ಬಳಿ ಬಂದಾಗ ಅಲ್ಲಿ ಏನೂ ಇರಲಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಓಡಾಡುತ್ತಿರುವುದು ಕಂಡು ಅವರನ್ನು ಕರೆದು ಸ್ವಾಮಿ ಇಲ್ಲಿ ಬುರುಡೆಗಳು ಸಿಕ್ಕಿದವಲ್ಲ ಅದರ ಬಗ್ಗೆ ಮಾಹಿತಿ ಇದೆಯಾ ಎಂದು ಕೇಳಿದ್ದಕ್ಕೆ ಅಯ್ಯೋ ಅದೆಲ್ಲ ಯಾವಾಗಿನದೋ ಯಾರದೋ ಒಂದೂ ಗೊತ್ತಿಲ್ಲ ಸ್ವಾಮಿ. ಏನೋ ಇಲ್ಲಿ ಸಿಕ್ಕಿತು ಅದನ್ನು ಸಂಶೋಧನೆಗೆ ಕಳುಹಿಸಿದ್ದಾರೆ ಅಷ್ಟೇ. ಬೇರೇನೂ ಗೊತ್ತಿಲ್ಲ ಎಂದು ಹೇಳಿ ಹೊರಟು ಹೋದರು. ಯಾಕೋ ಜಾಸ್ತಿ ಹೊತ್ತು ಅಲ್ಲಿ ನಿಲ್ಲಲು ಆಗದೆ ಎಲ್ಲಿ ನೋಡಿದರೂ ಬುರುಡೆಗಳೇ ಕಾಣುತ್ತಿದ್ದು ಮೊದಲು ಬೆಂಗಳೂರಿಗೆ ಹೊರಟುಬಿಡೋಣ ಎಂದು ವಾಪಸ್ ಧಾರವಾಡಕ್ಕೆ ಬಂದು ಅಲ್ಲಿಂದ ಬಸ್ ಏರಿ ಬೆಂಗಳೂರಿಗೆ ಬಂದುಬಿಟ್ಟೆ. ಮನೆಯಲ್ಲಿ ಹೆಂಡತಿ ಇದೇನ್ರಿ ಮೂರು ದಿನ ಆಗತ್ತೆ ಬರೋದು ಎಂದು ಹೇಳಿ ಎರಡೇ ದಿನಕ್ಕೆ ಬಂದು ಬಿಟ್ಟಿರಿ ಎಂದು ಕೇಳಿದ್ದಕ್ಕೆ ಈಗ ನನ್ನ ಏನೂ ಕೇಳಬೇಡ ಮೊದಲು ನಾನು ಮಲಗಬೇಕು ಎಂದು ಹೇಳಿ ರೂಮಿಗೆ ಹೋಗಿ ಮಲಗಿಬಿಟ್ಟೆ. ತಲೆ ತುಂಬಾ ಬರೀ ಪಾರ್ಥ ಅವರ ಕಥೆ ಹಾಗೂ ಅಣ್ಣಿಗೇರಿ ಬುರುಡೆಗಳೇ ಕಾಣಿಸುತ್ತಿತ್ತು. ಹಾಗೋ ಹೀಗೋ ನಿದ್ರೆ ಹತ್ತಿತು.


ಮರುದಿನ ಬೆಳಿಗ್ಗೆ ಎಂದಿನಂತೆ ಆಫೀಸಿಗೆ ಹೋಗಿ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಾಗ ನನ್ನ ಹೆಂಡತಿ ನನ್ನ ಅಮ್ಮನ ಬಳಿ ಏನೋ ಗುಸುಗುಟ್ಟುತ್ತಿದ್ದಳು ಅತ್ತೆ, ಇವರು ರಾತ್ರಿಯೆಲ್ಲ ಅದೇನೋ ಪಾರ್ಥಸಾರಥಿ, ದೆವ್ವ, ಅಣ್ಣಿಗೇರಿ ಎಂದು ಏನೇನೋ ಕನವರಿಸುತ್ತಿದ್ದರು ಎಂದು ಹೇಳುತ್ತಿದ್ದಳು.....

Rating
No votes yet

Comments