ಹೈ ಹೀಲ್ಡ್ ಚೆಲುವೆ

ಹೈ ಹೀಲ್ಡ್ ಚೆಲುವೆ

ಕವನ

ಲಾಲುಬಾಗಿನಲ್ಲಿ ಮಾರ್ನಿಂಗು ನಾನು ಮ್ಮೆ

ಜಾಗಿಂಗು ಮಾಡುವಾಗ ಕಂಡೆ ಹೈ ಹೀಲ್ದು ಧರಿಸಿ

ಓಡಾಡುತ್ತಿದ್ದ ಒಂಟಿ ಸುಂದರಿಯನು ಕೆಂಪು ಬಟ್ಟೆಯಲಿ

 

ಜಾಗಿಂಗು ಮರೆತು ಫಾಲೋ ಮಾಡುತ ಹೊರಟೆ

ಹೈ ಹೀಲ್ದು ಸುಂದರಿಯ ಹಿಂದುಗಡೆ ಮೆಲ್ಲಗೆ ಮೆಲ್ಲಗೆ

ಎಷ್ಟು ದೂರ ನಡೆದರೂ ನಿಲ್ಲದೆ ನಡೆಯುತ್ತಿದ್ದಳು 

 

ಸಾಕಾಗಿ ಹಿಂಬಾಲಿಸಿ ಓವರ್ಟೇಕ್ ಮಾಡಿ ಅವಳ

ಮುಂದೆ ಹೋಗಿ ಒಮ್ಮೆ ಅವಳ ಫೇಸ್ ನೋಡಿ ಬೋಲ್ಡಾಗಿ

ಬಿದ್ದುಬಿಟ್ಟೆ ಲವ್ವಿನಲ್ಲಲ್ಲ ಪಕ್ಕದಲ್ಲಿದ್ದ ಹಳ್ಳದಲ್ಲಿ...

 

ಹ್ಯಾಂಡ್ ಕೊಟ್ಟು ಮೇಲೆತ್ತಲು ಬಂದಳು ಹೈ ಹೀಲ್ಡ್ ಚೆಲುವೆ

ಮುಂಗಾರು ಮಳೆ ಗಣೇಶನ ನೆನಪಾಗಿ ಕೊಟ್ಟ ಹ್ಯಾಂಡ್ ಅನ್ನು

ವಾಪಸ್ ತೆಗೆದುಕೊಂಡು ನಾನೇ ಮೇಲೆದ್ದು ಸ್ಮೈಲ್ ಕೊಟ್ಟೆ...

 

ಹ್ಯಾಂಡ್ ಕೊಡಲಿಲ್ಲವೆಂದು ಫುಲ್ ಕೋಪದಲ್ಲಿ ಹೊರಟು

ಹೋದಳು ಹೈ ಹೀಲ್ಡ್ ಚೆಲುವೆ, ಫೇಸ್ ನೋಡಿ ಹಳ್ಳಕ್ಕೆ ಬಿದ್ದೆ

ಹ್ಯಾಂಡ್ ಕೊಟ್ಟಿದ್ದರೆ ಇನ್ನೆಲ್ಲಿ ಬೀಳಬೇಕಿತ್ತೋ ಎಂದುಕೊಂಡು ಜಾಗಿಂಗ್ ಮುಗಿಸಿದೆ

Comments