'ಬೀchi'ಯವರ ಜೋಕುಗಳು
ಇತ್ತೀಚೆಗೆ "ಸಂಪದಿಗ" ಮಿತ್ರರೊಬ್ಬರು ಕನ್ನಡದ ಕಾದಂಬರಿ ಪಿತಾಮಹರೆನಿಸಿದ ಅ.ನ.ಕೃ. ರವರ ಸಂಧ್ಯಾರಾಗದ ಬಗ್ಗೆ ಬರೆಯುತ್ತಾ 'ಬೀchi'ಯವರ ಬಗ್ಗೆ ಪ್ರಸ್ತಾಪಿಸಿದ್ದರು. ಅವರನ್ನು ಕರ್ನಾಟಕದ ಬರ್ನಾರ್ಡ ಷಾ ಎಂದು ಅವರು ಅಭಿವರ್ಣಿಸಿದ್ದರು. ಇಂಥಹ 'ಬೀchi'ಯವರು ನನ್ನ ತವರು ಜಿಲ್ಲೆಯಾದ ಬಳ್ಳಾರಿಗೆ ಸೇರಿದವರು ಹಾಗಾಗಿ ಹೆಮ್ಮೆಯಿಂದ ಅವರ ಬಗ್ಗೆ ನನಗೆ ತಿಳಿದ ಒಂದೆರಡು ಒಂದೆರಡು ಮಾತುಗಳನ್ನು ಇಲ್ಲಿ ಬರೆಯಬೇಕೆನಿಸುತ್ತದೆ. 'ಬೀchi'ಯವರ ಮೆನೆಮಾತು ತೆಲುಗಾಗಿದ್ದರೆ ಅವರ ಶ್ರೀಮತಿಯವರದು ಕನ್ನಡ. ಅವರಿಬ್ಬರೂ ಒಮ್ಮೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಶ್ರೀಮತಿಯವರು ಅ.ನ.ಕೃ. ರವರ ಸಂಧ್ಯಾರಾಗ ಕಾದಂಬರಿಯನ್ನು ಓದುವುದರಲ್ಲಿ ಮಗ್ನರಾಗಿದ್ದರಂತೆ. 'ಬೀchi'ಯವರೂ ಕೂಡ ಕುತೂಹಲಕ್ಕೆ ಅದರಲ್ಲಿ ಅಂಥಾದ್ದೇನಿದೆಯೆಂದು ಅದನ್ನೋದಲು ಕೈಗೆತ್ತಿಕೊಂಡರಂತೆ. ಆದರೆ ಪುಸ್ತಕವನ್ನು ಓದಲು ಷುರು ಮಾಡಿದವರು ಮುಗಿಯುವವರೆಗೆ ಅದನ್ನು ಕೆಳಗಿಡಲಿಲ್ಲವಂತೆ. ಅದನ್ನು ಓದಿ ಮುಗಿಸಿದ ಮೇಲೆ, ಕನ್ನಡದಲ್ಲಿ ಇಷ್ಟೊಂದು ಅದ್ಬುತವಾಗಿ ಬರೆಯಬಹುದೇ ಎಂದು ಆಶ್ಚರ್ಯಗೊಂಡು, ತಾವು ಕೂಡ ಕನ್ನಡದಲ್ಲೇ ಬರೆಯಲು ಆರಂಭಿಸಿ ಕನ್ನಡಕ್ಕೆ ಒಂದು ವಿಶಿಷ್ಠ ಶೈಲಿಯ ಬರವಣಿಗೆಯನ್ನು ಪರಿಚಯಿಸಿಕೊಟ್ಟರು ಮತ್ತು ಮುಂದೆ "ಹಾಸ್ಯ ಬ್ರಹ್ಮ"ರೆಂಬ ಖ್ಯಾತಿಗಳಿಸಿದರು. ಮಾತನಾಡುವಾಗ ಕನ್ನಡದೊಡನೆ ಇಂಗ್ಲೀಷ್ ಪದಗಳನ್ನು ಬಳಸುವ ಗೀಳು ಆಗಲೂ ಅಂದರೆ ೬೦-೭೦ರ ದಶಕದಲ್ಲಿಯೂ ಇತ್ತು. ಹಾಗಾಗಿ ವಿಡಂಬನಾತ್ಮಕವಾಗಿ ತಮ್ಮ ಹೆಸರನ್ನು ಅರ್ಧ ಕನ್ನಡ ಮತ್ತು ಅರ್ಧ ಇಂಗ್ಲೀಷ್ನಲ್ಲಿ ಬರೆದುಕೊಳ್ಳುತ್ತಾ ಅವರು 'ಬೀchi'ಯಾದರು. 'ಬೀಚಿ' ಎನ್ನುವುದು ಭೀಮಸೇನರಾವ್ ಎಂಬ ಅವರ ಹೆಸರಿನ ಸಂಕ್ಷಿಪ್ತ ರೂಪ. ಅವರ ಪೂರ್ಣ ಹೆಸರು ರಾಯಸಂ ಭೀಮಸೇನರಾವ್.
ಅವರು ಬರೆದ 'ಬೆಳ್ಳಿ ತಿಮ್ಮ ನೂರೆಂಟು ಹೇಳಿದ' ಮತ್ತು 'ಬ್ರಹ್ಮಚಾರಿಯ ಮಗ' ನನ್ನ ಮೆಚ್ಚಿನ ಕೃತಿಗಳು. ನನಗೆ ನೆನಪಿರುವ ಅವರ ಕೆಲವೊಂದು ಹಾಸ್ಯದ ತುಣುಕುಗಳನ್ನು "ಸಂಪದಿಗರೊಂದಿಗೆ ಹಂಚಿಕೊಳ್ಳುವ ಒಂದು ಪ್ರಯತ್ನವಾಗಿ ಬೀchi ಜೋಕುಗಳ ಮಾಲಿಕೆಯನ್ನು ಪ್ರಾರಂಭಿಸಬೇಕೆಂದು ಕೊಂಡಿದ್ದೇನೆ. ಅದರ ಮೊದಲ ಪ್ರಯತ್ನವಾಗಿ ಕೆಳಗಿನ ಒಂದು ಜೋಕು.
ಶಾಲೆಗೆ ಹೇಗೆ ಮುಟ್ಟಿದ ?
ಒಮ್ಮೆ ತಿಮ್ಮ ಶಾಲೆಗೆ ಬಹಳ ತಡವಾಗಿ ಹೋದ. ಗುರುಗಳು, "ಏಕೋ ತಿಮ್ಮ ಶಾಲೆಗೆ ಲೇಟು?". ತಿಮ್ಮ, "ಹೌದು ಗುರುಗಳೆ ಲೇಟಾಯ್ತು". ಆದೇ ಯಾಕೆ ಲೇಟಾಯ್ತು ಎಂಬುದು ಗುರುಗಳ ಮರು ಪ್ರಶ್ನೆ. ಏನಿಲ್ಲಾ ಗುರುಗಳೇ ನಿನ್ನೆ ನಮ್ಮ ಮನೆ ಹತ್ತಿರ ಭಾರಿ ಮಳೆಯಾಗಿ ರಸ್ತೆಯೆಲ್ಲೆಲ್ಲಾ ಕೆಸರೋ ಕೆಸರು. ಒಂದು ಹೆಜ್ಜೆ ಮುಂದೆ ಇಟ್ರೆ, ಜಾರಿ ಎರಡು ಹೆಜ್ಜೆ ಹಿಂದೆ ಹೋಗ್ತಿದ್ದೆ; ಹಾಗಾಗಿ ಶಾಲೆಗೆ ಬರೋದು ತಡವಾಯ್ತು. ಆದರೆ ಗುರುಗಳು ಬಿಡಬೇಕಲ್ಲ, "ಒಂದು ಹೆಜ್ಜೆ ಮುಂದೆ ಇಟ್ರೆ ಎರಡು ಹೆಜ್ಜೆ ಹಿಂದೆ ಹೋಗ್ತಿದ್ದೀಯಲ್ಲ, ಹಾಗಾದ್ರೆ ಶಾಲೆಗೆ ಹ್ಯಾಗ್ ಬಂದೆ?" ತಿಮ್ಮನ ಉತ್ತರ ಸಿದ್ದವಿತ್ತು, "ಅದಕ್ಕೇ ಗುರುಗಳೇ ಶಾಲೆ ಕಡೆಗೆ ಬೆನ್ನು ಮಾಡಿ ಮನೆ ಕಡೆ ಹೆಜ್ಜೆ ಹಾಕ್ತಿದ್ದೆ". ಆಲ್ಲಿಗೆ ತಿಂಮ್ಮನ ಗುರುಗಳು ಸುಸ್ತೋ, ಸುಸ್ತು!!!
ಬೀchi ಯವರ ಮತ್ತೊಂದು ಜೋಕನ್ನು ಕೊಡುತ್ತಿದ್ದೇನೆ (ಮಡಿವಂತರ ಕ್ಷಮೆ ಕೋರಿ!)
ಸಾಹಿತಿಗಳೊಬ್ಬರು, ತಮ್ಮ ವಿಶ್ವವಿದ್ಯಾಲಯದಲ್ಲಿ ನಡೆಯುವ ಸಿಂಡಿಕೇಟ್ ಸದಸ್ಯತ್ವಕ್ಕೆ ಹಾಗು ಅದೇ ಕಾಲಕ್ಕೆ ನಡೆಯುತ್ತಿದ್ದ ಶಿಕ್ಷಕರ ಸಂಘದ ಪದಾಧಿಕಾರಿಗಳ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಹಿನ್ನಲೆಯಲ್ಲಿ ಅವರು ಬೀchiಯವರಿಗೊಂದು ಪತ್ರ ಬರೆದು ನಾನು ಎರಡಕ್ಕೂ ನಿಂತಿದ್ದೇನೆ, ತಮ್ಮ ಬೆಂಬಲವನ್ನು ನನಗೆ ಕೊಡಿ ಎಂದು ಪತ್ರ ಮುಖೇನ ತಿಳಿಸಿದರು. ಇವರ ಬಗ್ಗೆ ಅಷ್ಟೊಂದು ಒಳ್ಳೆ ಅಭಿಪ್ರಾಯವಿರದಿದ್ದ ಬೀchiಯವರು ಹೀಗೆ ಉತ್ತರಿಸಿದರು. "ಒಂದಕ್ಕೆ ನಿಂತವರನ್ನು ನೋಡಿದ್ದೇನೆ, ಆದರೆ ಎರಡಕ್ಕೆ ನಿಂತವರನ್ನು ನೋಡಿಲ್ಲ!"
Comments
ಉ: 'ಬೀchi'ಯವರ ಜೋಕುಗಳು
In reply to ಉ: 'ಬೀchi'ಯವರ ಜೋಕುಗಳು by partha1059
ಉ: 'ಬೀchi'ಯವರ ಜೋಕುಗಳು
ಉ: 'ಬೀchi'ಯವರ ಜೋಕುಗಳು
In reply to ಉ: 'ಬೀchi'ಯವರ ಜೋಕುಗಳು by SRINIVAS.V
ಉ: 'ಬೀchi'ಯವರ ಜೋಕುಗಳು
ಉ: 'ಬೀchi'ಯವರ ಜೋಕುಗಳು
In reply to ಉ: 'ಬೀchi'ಯವರ ಜೋಕುಗಳು by manju787
ಉ: 'ಬೀchi'ಯವರ ಜೋಕುಗಳು
ಉ: 'ಬೀchi'ಯವರ ಜೋಕುಗಳು
In reply to ಉ: 'ಬೀchi'ಯವರ ಜೋಕುಗಳು by ಭಾಗ್ವತ
ಉ: 'ಬೀchi'ಯವರ ಜೋಕುಗಳು
ಉ: 'ಬೀchi'ಯವರ ಜೋಕುಗಳು
In reply to ಉ: 'ಬೀchi'ಯವರ ಜೋಕುಗಳು by sathishnasa
ಉ: 'ಬೀchi'ಯವರ ಜೋಕುಗಳು
ಉ: 'ಬೀchi'ಯವರ ಜೋಕುಗಳು
In reply to ಉ: 'ಬೀchi'ಯವರ ಜೋಕುಗಳು by neela devi kn
ಉ: 'ಬೀchi'ಯವರ ಜೋಕುಗಳು
ಉ: 'ಬೀchi'ಯವರ ಜೋಕುಗಳು
In reply to ಉ: 'ಬೀchi'ಯವರ ಜೋಕುಗಳು by gopaljsr
ಉ: 'ಬೀchi'ಯವರ ಜೋಕುಗಳು
ಉ: 'ಬೀchi'ಯವರ ಜೋಕುಗಳು
ಉ: 'ಬೀchi'ಯವರ ಜೋಕುಗಳು
In reply to ಉ: 'ಬೀchi'ಯವರ ಜೋಕುಗಳು by kavinagaraj
ಉ: 'ಬೀchi'ಯವರ ಜೋಕುಗಳು
ಉ: 'ಬೀchi'ಯವರ ಜೋಕುಗಳು
In reply to ಉ: 'ಬೀchi'ಯವರ ಜೋಕುಗಳು by suma kulkarni
ಉ: 'ಬೀchi'ಯವರ ಜೋಕುಗಳು