ದೇವರ ಬಣ್ಣ ಏಕೆ ನೀಲಿ?

ದೇವರ ಬಣ್ಣ ಏಕೆ ನೀಲಿ?

ಒಮ್ಮೆ ಸ್ವಾಮಿ ವಿವೇಕಾನಂದರು ಮದ್ರಾಸ್ (ಈಗಿನ ಚೆನ್ನೈ) ನಗರದಲ್ಲಿ ಕೆಲವೊಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಒಂದು ಪ್ರಶ್ನೆ ಕೇಳಿದರಂತೆ. ವಿಷ್ಣು, ರಾಮ, ಕೃಷ್ಣ ಮೊದಲಾದ ದೇವರುಗಳ ಬಣ್ಣ ನೀಲಿಯಾಗಿ ಏಕೆ ಚಿತ್ರಿಸುತ್ತಾರೆಂದು? ಆಗ ಒಬ್ಬ ವಿದ್ಯಾರ್ಥಿ ಹೀಗೆ ಉತ್ತರಿಸಿದನಂತೆ, "ಆಕಾಶಕ್ಕೆ ಕೊನೆ ಎಂಬುದಿಲ್ಲ ಮತ್ತು ಸಮುದ್ರಕ್ಕೂ ಕೊನೆಯೆಂಬುದಿಲ್ಲ ಅವೆರಡೂ ಕೊನೆಯಿಲ್ಲದ್ದು ಅಂದರೆ ಅನಂತವಾದದ್ದು. ಅವೆರಡರ ಬಣ್ಣ ನೀಲಿ ಅಂದರೆ ಅನಂತವಾದದ್ದರ ಬಣ್ಣ ನೀಲಿ, ದೇವರೂ ಕೂಡ ಅನಂತವಾಗಿರೋದರಿಂದ ಅವನನ್ನು ನೀಲಿ ಬಣ್ಣದಲ್ಲಿ ಚಿತ್ರಿಸುತ್ತಾರೆ." ಈ ಉತ್ತರವನ್ನು ಕೇಳಿ ಸ್ವಾಮಿ ವಿವೇಕಾನಂದರು ತುಂಬಾ ಸಂತೋಷಗೊಂಡರಂತೆ. ಆ ಉತ್ತರವನ್ನು ಕೊಟ್ಟವರು ಬೇರಾರೂ ಅಲ್ಲ "ರಾಜಾಜಿ" ಎಂದು ಮುಂದೆ ಪ್ರಖ್ಯಾತರಾದ ಸ್ವತಂತ್ರ ಭಾರತದ ಮೊತ್ತಮೊದಲ ಹಾಗು ಕಡೆಯ ಗವರ್ನರ್ ಜನರಲ್ ಆದ ಚಕ್ರವರ್ತಿ ರಾಜಗೋಪಾಲಾಚಾರಿಗಳು.

(ರಾಮಕೃಷ್ಣ ಮಠದ ಸ್ವಾಮಿಗಳೊಬ್ಬರಿಂದ ಕೇಳಿದ್ದು)

Comments