ಭಗತ್ ಸಿಂಗ್ ಅಮರ್ ರಹೇ

ಭಗತ್ ಸಿಂಗ್ ಅಮರ್ ರಹೇ

ಕವನ

ನಡೆದಿತ್ತು ಭಾರತೀಯರ ಮಾರಣಹೋಮ ಜಲಿಯನವಾಲಾಬಾಗಿನಲ್ಲಿ


ಎಲ್ಲೆಲ್ಲೂ ರಕ್ತ, ರಕ್ತಸಿಕ್ತ ಮೃತದೇಹಗಳು, ಪುರುಷರು ಮಹಿಳೆಯರು


ವೃದ್ಧರು ಮಕ್ಕಳು ಯಾರನ್ನೂ ಲೆಕ್ಕಿಸದೆ ಹತ್ಯೆಗೈದಿದ್ದರು ಬ್ರಿಟಿಷರು


 


ಅಲ್ಲಿಗೆ ಬಂದ ಪುಟ್ಟ ಪೋರನೊಬ್ಬ ಹೆಣಗಳ ಮಧ್ಯೆ ನಿಂತು


ನೋಡುತ್ತಿದ್ದಾನೆ ಅಲ್ಲಿ ನಡೆದಿದ್ದ ಮಾರಣಹೋಮವ ಪುಟ್ಟ ಕಂಗಳಿಂದ


ಹೃದಯವಿದ್ರಾವಕವಾಗಿ ರೋದಿಸುತ್ತಿದ್ದಾನೆ ದುಖ ತಡೆಯಲಾಗದೆ


 


ಆ ಪುಟ್ಟ ವಯಸಿನಲ್ಲೇ ಬ್ರಿಟಿಷರ ವಿರುದ್ಧ ಹೋರಾಡಲು


ನಿರ್ಧರಿಸಿ ಶೀಶೆಯಲ್ಲಿ ತುಂಬಿಸುತ್ತಿದ್ದಾನೆ ಆ ಪವಿತ್ರ ನೆಲದ


ಮೇಲೆ ಚೆಲ್ಲಿದ್ದ ಭಾರತೀಯರ ರಕ್ತ ಮಿಶ್ರಿತ ಮಣ್ಣನು...


 


ತನ್ನ ಪುಟ್ಟ ವಯಸಿನಲ್ಲೇ ದೇಶಕ್ಕಾಗಿ ಹೋರಾಡಲು


ಸಿದ್ಧನಾದ ಆ ಪುಟ್ಟ ಕಂಗಳ ಆ ಪುಟ್ಟ ಪೋರನೇ


ಭಾರತಮಾತೆಯ ಹೆಮ್ಮೆಯ ಪುತ್ರ ಶಹೀದ್ ಭಗತ್ ಸಿಂಗ್...


 


ಬ್ರಿಟಿಷರ ಪಾಲಿನ ಸಿಂಹಸ್ವಪ್ನವಾಗಿದ್ದ ಆಜಾದರ ಪ್ರೀತಿಯ ಶಿಷ್ಯ


ಕ್ರಾಂತಿಕಾರಿ ಹೋರಾಟದಿ ಹೋರಾಡಿದ ಕೆಚ್ಚೆದೆಯ ಧೀರ


ಬ್ರಿಟಿಷರಿಗೆ ನಡುಕ ಹುಟ್ಟಿಸಿದ ಧೀಮಂತ ಹೋರಾಟಗಾರ ನಮ್ಮ ಭಗತ್


 


ಸೆರೆಮನೆಯಲ್ಲಿ ಉಪವಾಸವಿದ್ದರೂ ಧೃತಿಗೆಡದ ಸಾಹಸಿ


ವಂದೇಮಾತರಂ ಕೂಗಿನಿಂದ ಹೋರಾಟಗಾರರನ್ನು ಒಗ್ಗೂಡಿಸಿದ ಧೀರ


ದೇಶಕ್ಕಾಗಿ ಪ್ರಾಣ ಅರ್ಪಿಸಿದ ಮಹಾನ್ ಧೀರ..


 


ಸೆಪ್ಟೆಂಬರ್ ೨೮ ಭಾರತ ಚರಿತ್ರೆಯಲ್ಲಿ ಸುವರ್ಣ ದಿನ. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ತನ್ನ ೨೪ನೆ ವಯಸ್ಸಿನಲ್ಲೇ ಈ ದೇಶಕ್ಕೆ ಪ್ರಾಣ ಅರ್ಪಿಸಿದ ಮಹಾನ್ ವ್ಯಕ್ತಿ ಶ್ರೀ ಭಗತ್ ಸಿಂಗ್ ಅವರ ಜನ್ಮದಿನ. ಈ ಶುಭ ಸಂದರ್ಭದಲ್ಲಿ ಆ ಮಹಾನ್ ವ್ಯಕ್ತಿಗೆ ನಮನಗಳನ್ನು ಸಲ್ಲಿಸೋಣ

Comments