ಚಲೊ ಮಲ್ಲೇಶ್ವರ - 16

ಚಲೊ ಮಲ್ಲೇಶ್ವರ - 16

ಇಲ್ಲಿಯವರೆಗು ...

ಮುಂದೆ ಓದಿ......

 

ಅಂಡಾಂಡಬಂಡನಂತೆ ನಟಿಸಿದ 'ಬೃಹುತ್ ಬ್ರಹಾಂಡ" ಕಾರ್ಯಕ್ರಮ ಯಶಸ್ವಿಯಾಯಿತು. ಸದ್ಯಯಾವುದೆ ಗಡಿಬಿಡಿಯಾಗಲಿಲ್ಲವೆಂದು. ಸ್ಟುಡಿಯೊ ಬಿಟ್ಟು ಹೊರಬಂದರು ಗಣೇಶರಿಗೆ ಒಂದೆ ಚಿಂತೆ, ಇಷ್ಟು ಲಾಬದಾಯಕವಾದ ಕೆಲಸವನ್ನು ಆ ಅಂಡಾಂಡಬಂಡ ನನಗೆ ವಹಿಸಿ ಹೋದ ಕಾರಣವೇನಿರಬಹುದು, ಇದರಲ್ಲೇನೊ ಮರ್ಮವಿದೆ ಎಂದು. ಹೊರಗೆ ಬಂದು ಗಣೇಶರು ಉಳಿದವರೆಲ್ಲ ಹೊರಬರಲಿ ಮತ್ತೆ ಮಲ್ಲೇಶ್ವರಕ್ಕೆ ಹೊರಡೋಣ ಎಂದು ಕಾಯುತ್ತಿರಲು, ಪಕ್ಕದಲ್ಲಿ ಒಂದು ಕಾರು ಬಂದು ನಿಂತಿತು, ಅದರಿಂದ ಬಿಳಿಯ ಬಟ್ಟೆಯಲ್ಲಿದ್ದ ರಾಜಕಾರಣಿಗಳ ಶಿಷ್ಯರು ಇಳಿದು ಇವರತ್ತ ನಡೆದುಬಂದರು
 "ಇದೇನು ಗುರುಗಳು ಆಗಲೆ ಸಮಯವಾಯಿತು, ನೀವು ೧೨ ಗಂಟೆಗಲ್ಲವೆ ನಮ್ಮ ಯಡ್ಡಿಯೂರಪ್ಪನವರಿಗೆ ಬೇಟಿಯ ಸಮಯ ಕೊಟ್ಟಿರುವುದು, ಅವರು ಕಾಯುತ್ತಿದ್ದಾರೆ ಈಗಲೆ ಬರಬೇಕಂತೆ" ಎಂದು ಜಬ್ಬರ್ದಸ್ತ್ ಮಾಡುತ್ತ ನಿಂತ.
 ಗಣೇಶರಿಗೆ ಗಾಬರಿ ನಾನೆಲ್ಲಿ ಇವರಿಗೆ ಬೇಟಿ ಸಮಯಕೊಟ್ಟಿದ್ದೆ, ಬಹುಷಃ ಅಂಡಾಂಡಬಂಡನದೆ ಕೆಲಸವಿರಬೇಕು ಎಂದು ಯೋಚಿಸುತ್ತಿರಲು,ಮತ್ತೊಂದು ಕಾರು ಬಂದು ನಿಂತಿತು. ಇವರಾರು ಎನ್ನುತ್ತ ಯೋಚಿಸುವಾಗ
"ರೀ ಸ್ವಾಮಿ ೧೨ ಕ್ಕೆ ಬರ್ತೀನಿ ಅಂತ ನಮ್ಮ ಕುಮಾರಣ್ಣಂಗೆ ಹೇಳಿ ಆಗಲೆ ೧೧.೩೦ ಆಯ್ತು ಇವರಾರೊ ಗೂಭೆಗಳ ಹತ್ತಿರ ಮಾತಾಡ್ತ ನಿಂತಿದ್ದೀರಲ್ಲ, ಹೊರಡ್ರಿ ಬೇಗ" ಅಂತ ಹತ್ತಿರ ಬಂದ.
"ನಮ್ಮನ್ನು ಗೂಬೆ ಅನ್ನು ನಾಯಿಗಳು ಇವರ್ಯಾರಿ ಸ್ವಾಮಿ, ಏನು ಆಟ ಆಡ್ತೀರ, ೧೨ಕ್ಕೆ ನಮ್ಮ ಯಡ್ಡಿಯೂರಪ್ಪನವರಿಗೆ ಹೇಳಿದ್ದೀರಿ, ಹೊರಡಿ ಇಲ್ಲ ಅಂದರೆ ನೋಡಿ ಸರಿ ಇರಲ್ಲ" ಅಂತ ಇವರಿಗೆ ರೋಪ್. ಗಣೇಶರಿಗೆ ಗಾಭರಿ, ಇದೆಂತದಾಯ್ತಪ್ಪ ಶಿವನೆ, ನನ್ನ ಪಾಡಿಗೆ ನಾನಿದ್ದೆ, ಈಗ ಅಂಡಾಂಡಬಂಡ ನನ್ನನ್ನು ಇಕ್ಕಟಿಗೆ ಸಿಕ್ಕಿಸಿ ಮಾಯವಾದನಲ್ಲಿ ಈಗ ನಾನು ಅವನಲ್ಲ ಎಂದರು ಕೇಳಲ್ಲ, ಈಗ ತಾನೆ ಭೃಹತ್ ಅಂಡಾಂಡ ಕಾರ್ಯಕ್ರಮ ನಡೆಸಿ ಈಚೆ ಬಂದಿರುವೆ ಇನ್ನು ಬಟ್ಟೆ ಸಹಬದಲಿಸಿಲ್ಲ. ಗೋಪಾಲ್ ಸುತ್ತಿರುವ ಸೀರೆಯಲ್ಲಿಯೆ ನಿಂತಿರುವೆ. ಏನು ಮಾಡುವುದು ಎಂದು ಚಿಂತಿಸುತ್ತಿರಲು. ಗೋಪಾಲ್ ಹಾಗು ಮಾಂತ್ರಿಕವೇಶದಲ್ಲಿದ್ದ ಜಯಂತ್ ಹೊರಬಂದರು. ಇವರ ಹತ್ತಿರ ಬಂದು "ಏನಾಯ್ತು ಗಣೇಶಣ್ಣಾ" ಎನ್ನುತ್ತಾ ನಿಂತರು. ಅಕ್ಕಪಕ್ಕ ಇದ್ದ ಯಡ್ಡಿ ಕುಮಾರರ ಶಿಷ್ಯರು, "ನೋಡ್ತೇನ್ಲಾ  ಇವನು ನಿಜಕ್ಕು ಗಣೇಶನ ಅವತಾರವೆ ಅದಕ್ಕೆ ನೋಡಿ ಅದೇ ರೀತಿ ಇದ್ದಾನೆ ನೋಡಲು" ಎಂದುಕೊಂಡರು ಪರಸ್ಪರ ಹಾಗಾಗಿ ಏನಾದರು ಸರಿ ಇವರನ್ನು ಬಿಟ್ಟುಹೋಗಬಾರದು ಕರೆದುಕೊಂಡು ಹೋಗುವುದೆ ಸರಿ ಎಂದು ತೀರ್ಮಾನ ಮಾಡಿದರು.

ಅದೆ ಸಮಯಕ್ಕೆ ಎದುರಿಗೆ ಒಂದು ಮೆಟಡಾರ್ ಬಂದು ನಿಂತಿತು, ಅದರಿಂದ, ಇವರು ನೋಡುತ್ತಿರುವಂತೆ, ಬಾರಿಮುತ್ತು ತನ್ನ ಶಿಷ್ಯರ ಜೊತೆ ಬಂದಿಳಿದಳು. ಗಣೇಶರು ಅವಳು ತನ್ನ ಕಡೆಗೆ ಬರುತ್ತಿರುವುದು ಕಂಡು ನಡುಗಲು ಪ್ರಾರಂಬಿಸಿದರು. ಇನ್ನೇನು ಗತಿ ಅವಳು ತನ್ನ ಏರಿಯಾದಲ್ಲಿ ಕಾಲಿಟ್ಟರೆ ಕಾಲು ಕತ್ತರಿಸುತ್ತೇನೆ ಅಂದಿದ್ದಳು ಅಂತ.
ಅವಳು ಕೈಮುಗಿಯುತ್ತ ಹತ್ತಿರ ಬಂದವಳೆ "ಗುರೂಜಿ ನಮಸ್ಕಾರ, ನೀವೇನಾ ಅಂಡಾಂಡಬಂಡರು, ನಾನು ತಿಳಿಯದೆ ತಪ್ಪು ಮಾಡಿಬಿಟ್ಟೆ, ನೀವೆ ಗಣೇಶಪ್ಪನ ಅಪರಾವತಾರ ಅಂತ ತಿಳೀದೆ ನಿಮ್ಮ ಮೇಲೆ ಜಬ್ಬರ್ದಸ್ತ್ ಮಾಡಿದೆ, ಪೋಲಿಸನ ಹತ್ತಿರವು ಓದೆ, ನನ್ನನ್ನು ಕ್ಷಮಿಸಿಬಿಡಿ, ಈಗ ಬನ್ನಿ ನಮ್ಮ ಮನೆಗೆ ಹೋಗೋಣ"  ಎಂದಳು

ಗಣೇಶರಿಗೆ ಮತ್ತೆ ಗಾಬರಿ "ನಿನ್ನ ಮನೇಗ? ಯಾಕೆ ನಾನು ಬರಲ್ಲ" ಅಂದರು. ಅವಳು,
"ನಿಮಗೇನು ತೊಂದರೆ ಮಾಡಲ್ಲ ಗುರುಗಳೆ , ನನಗೆ ಒಂದು ಹೆಣ್ಮಾಗ ಐತೆ, ಅದಕ್ಕೆ ಯಾಕೊ ಕಂಕಣ ಬಲಾನೆ ಕೂಡಿಬರ್ಲಿಲ್ರ, ನೀವು ನಿಮ್ಮ ಜಾತಕ ನೋಡಿ ಗ್ರ ಸ್ವಲ್ಪ್ತ ಅತ್ತಿತ್ತ ಮಾಡಿ ಅದಕ್ಕೊಂದು ಗಂಡು ಹುಡುಕಿಬಿಡಿ, ಬನ್ನಿ" ಅಂದಳು. ಗಣೇಶರು ಏನು ಹೇಳೂವುದು ಅನ್ನುತ ಯೋಚಿಸುತ್ತಿರಲು, ಮೊದಲು ಬಂದಿದ್ದ, ಯಡ್ಡಿ ಶಿಷ್ಯರು,
"ಗುರುಗಳೆ ಅದೆಲ್ಲ ಆಗಲ್ಲ, ಮೊದಲು ಬಂದು ನಮ್ಮ ಯಡ್ಡಿಯೂರಪ್ಪ ಆರುತಿಂಗಳಲ್ಲಿ ಮತ್ತೆ ಮುಖ್ಯಮಂತ್ರಿ ಆಗ್ತಾರ ಹೇಳ್ಬೇಕಂತೆ ಬನ್ನಿ ನಾನ್ವು ಬಿಡೋಲ್ಲ" ಎನ್ನುತ್ತ ಎಡಕೈ ಹಿಡಿದು ಜಗ್ಗಿದರು, ಆಗ ಕುಮಾರನ ಶಿಷ್ಯರು "ಅಲ್ಲ ಗುರುಗಳೆ ನಮ್ಗೆ ಮೊದಲು ನೀವು ಹೇಳಿರೋದು, ನೀವು ಬಂದು ಮತ್ತೆ ದೇವೆಗೌಡರು ಪ್ರದಾನಿ ಆಗ್ತಾರ ಹೇಳ್ಬೇಕಂತೆ, ಬನ್ನಿ ಇಲ್ಲ ಅಂದ್ರೆ ನಿಮಗೆ ಕಷ್ಟ ಕಾದಿದೆ ಅಷ್ಟೆ" ಎನ್ನುತ್ತ ಬಲಕೈ ಹಿಡಿದು ಎಳೆಯಲು ಪ್ರಾರಂಬಿಸಿದರು.

 ಆಗ ಬಾರಿಮುತ್ತು ಮತ್ತೆ ರೌದ್ರಾವತಾರ ತಾಳಿ, "ಏ ಬಿಡ್ರಲ್ಲ, ನಾನು ಯಾರಿಗು ಕೇರ್ ಮಾಡಲ್ಲ, ನಮ್ಮ ಅಯ್ನೋರ್ನ, ನಾನು ಕರ್ಕಂಡು ಹೋಗ್ದೆ ಬಿಡಲ್ಲ, ನೀವು ಬನ್ನಿ ಸ್ವಾಮಿ" ಎನ್ನುತ್ತ, ಗೋಪಾಲರು ಸೀರೆ ಉಡಿಸಿ ಕೆಳಗೆ ಜಾರದಿರಲಿ ಎಂದು ಸೊಂಟದ ಬಳಿ, ಸೀರೆಗೆ ಹಾಕಿದ್ದ ಗಂಟಿಗೆ ಕೈಹಾಕಿ "ಬನ್ನಿ ಸ್ವಾಮಿ" ಎಂದು ಎಳೆಯತೊಡಗಿದರು, ಇದನ್ನೆಲ್ಲ ಕಂಡ, ಮಾಂತ್ರಿಕವೇಶದಲ್ಲಿದ್ದ ಜಯಂತ್ ವೇಗವಾಗಿ ಓಡಿ ಕಣ್ಮರೆ ಯಾದರೆ, ಗೋಪಾಲ್ ದೂರ ಓಡಿ ನಿಂತು ನೋಡತೊಡಗಿದರು. ಗಣೇಶರು, ರೀ ಬಿಡ್ರಿ ಬಿಡ್ರಿ ಎಂದು ಕೂಗುತ್ತಿರಲು....
.

.

.

.
 

"ಗಣೇಶಣ್ಣ ಎದ್ದೇಳಿ, ಮಂಜಣ್ಣ ಬಂದಿದ್ದಾರೆ ಕರೆಯುತ್ತಿದ್ದಾರೆ" ಎಂದು ಕೂಗುವುದು ಕೇಳಿಸಿತು. ಗಣೇಶರಿಗೆ ಎಚ್ಚರವಾಗಿ ನೋಡುತ್ತಾರೆ, ಸರ್ಕಲ್ ಮಾರಮ್ಮನ ಗುಡಿಯ ಹತ್ತಿರ ಕಾಂಪೋಡ್ ಮೇಲೆ ಒರಗಿ ಕುಳಿತು, ಹಾಗೆ ಬಿಸಿಲಿಗೆ ಕಣ್ಣು ಎಳೆದು, ನಿದ್ದೆ ಹತ್ತಿಬಿಟ್ಟೆದೆ, ಕನಸಿನಲ್ಲಿ ಎಲ್ಲರು ತನ್ನನ್ನು ಕಾಡುತ್ತಿರುವುದು ಎಂದು ತಿಳಿದು ಸಮಾದಾನ ಪಟ್ಟು, ಆ ಕಡೆ ಈಕಡೆ ತನ್ನನ್ನು ಕೈಹಿಡಿದು ಎಳೆಯುತ್ತಿರುವ ಗೋಪಾಲ್ ಹಾಗು ಜಯಂತರನ್ನು ಕಂಡು
" ಏಕೆ ಜಯಂತ್ ಏನಾಯಿತು " ಅಂದರು ಆಗ ಜಯಂತ್
"ಏನಿಲ್ಲ ಗಣೇಶಣ್ಣ , ಮಂಜಣ್ಣ ಬಂದಿದ್ದಾರೆ, ಎಲ್ಲ ಕಾಯ್ತಿದ್ದಾರೆ, ನೀವು ಬರಬೇಕಂತೆ, ಅದೇನೊ "ಮಾರಿಹಬ್ಬ" ಮಾಡ್ತೀನಿ ಕರಿ ಅಂದರು, ನಮಗು ಕುತೂಹಲ ಅದೇನು ಮಾಡ್ತಾರೆ ನೋಡಬೇಕು ಅಂತ, ಬನ್ನಿ" ಅಂತ ಕರೆದರು..
 

Rating
No votes yet

Comments