'ಶಾಪಗ್ರಸ್ಥ ದೇವತೆ'

'ಶಾಪಗ್ರಸ್ಥ ದೇವತೆ'

ಕವನ

ಭಾರತೀಯ ಪರಂಪರೆಯ ನಾರಿ


ಒಬ್ಬ ಶಾಪಗ್ರಸ್ಥ ದೇವತೆ


ಶಾಪ ವಿಮೋಚನೆಗೆ ಆಕೆ ಕಾಯಬೇಕು


ರಾಮನ ಬರುವಿಕೆಗೆ ಅಹಲ್ಯೆ ಕಾದಂತೆ


ಆದರೆ ಅವಳ ಶಾಪ ವಿಮೋಚಕ


ಬರುವುದೇ ಇಲ್ಲ


ಅದು ಅವಳ ದುರಂತ


ಆದರೆ ಸಾವು ಬಂದು ಕಾದಿರುತ್ತದೆ


ಮನೆಯ ಮುಂಬಾಗಿಲ ಬಳಿ


ಆಕೆಯ ಶಾಪ ವಿಮೋಚನೆ ಎಂದರೆ


ಬರಿ ಸಾವು ಮಾತ್ರ

Comments