ಲೈಫು ಇಷ್ಟೇನೆ !!

ಲೈಫು ಇಷ್ಟೇನೆ !!

ಕವನ

ನಿನ್ನೆ ನಾಳೆಗಳ

ನಡುವಿರುವ

ಇಂದಿನ ಈ ಲೈಫು ಇಷ್ಟೇನೆ !!

 

ಚಿಕ್ಕವರಿದ್ದಾಗ

ದೊಡ್ದೊರಾಗೋ ದೊಡ್ಡ್ ದೊಡ್ಡ್

ಯೋಚ್ನೆ ಮಾಡ್ತಾ

ದೊಡ್ಡೋರಾದ್ಮೇಲೆ

ಮಕ್ಕಳಾಗೆ ಇರ್ಬೆಕೆಂಬ

ಚಿಕ್ಕ ಚಿಕ್ಕ ಯೋಚ್ನೆ ಮಾಡ್ತಾ

ಕಾಲ ದೂಡ್ತೇವೆ, ಈ ಲೈಫು ಇಷ್ಟೇನೆ !!

 

ಒಂದು ಸಿಕ್ರೆ

ಇನ್ನೊಂದು ಬೇಕು

ಅದೂ ಗಿಟ್ಟಿದ್ರೆ

ಮತ್ತೊಂದು ಬೇಕು ಅಂತಲೇ

ಮಂಗನ್ ಹಂಗೆ

ಮರದಿಂದ ಮರಕ್ಕಾರೋ ಥರಾ

ಆಸೆಗಳ ಸುತ್ತಾ

ಗಿರಕಿ ಹೊಡಿತಾ

ಕಾಲ ಕಳಿತಿವಿ, ಈ ಲೈಫು ಇಷ್ಟೇನೆ !!

 

ಸುಕನ್ಯ ಹೋದ್ರೆ

ಅನನ್ಯ ಇರ್ಲಿ

ಅವಳೂ ಬಿಟ್ರೆ

ಅವಳ್ ತಂಗಿಗೆ ಕಾಳ್ ಹಾಕ್ತಾ

" ಅವರ್ನ್ನ ಬಿಟ್ರ, ಇವರ್ನ್ನ ಬಿಟ್ರ , ಇವರಾರು ?" ಅನ್ನೋ ಥರಾ

ಪ್ರೀತಿ ಕಣ್ಣಾ ಮುಚ್ಚಾಲೆ ಆಡ್ತಾ

"ಲೈಫ್"ನ ಪ್ರೀತಿ ಮಾಡೋದೇ

ಮಧ್ಯದಲ್ಲೇ ಮರ್ತ್ಬಿಡ್ತಿವಿ, ಈ ಲೈಫು ಇಷ್ಟೇನೆ !!

 

ನಿನ್ನೆ ನಾಳೆಗಳ

ನಡುವಿರುವ

"ಇಂದಿನ"  ಈ ಲೈಫು ಇಷ್ಟೇನೆ

ಎಂದು ಹೀಗೆ

ಹಾಳೆಗಳ ಮೇಲೆ ಗೀಚೋ

ಕೆಲ್ಸಾನೂ ತುಂಬಾ ಕಷ್ಟಾನೇ !!

Comments