ಗಾಂಧೀಜಿಯವರಿಗೆ ಪ್ರಿಯವಾದ ವೈಷ್ಣವ ಜನತೋ ಹಾಡು

ಗಾಂಧೀಜಿಯವರಿಗೆ ಪ್ರಿಯವಾದ ವೈಷ್ಣವ ಜನತೋ ಹಾಡು

 

ರಾಷ್ಟ್ರಪಿತ ಮಹಾತ್ಮ ಗಾಂಧಿಯ ಜನ್ಮ ದಿನವಾದ ಅಕ್ಟೋಬರ್ ೨ರಂದು, ಅವರಿಗೆ ಬಹಳ ಪ್ರಿಯವಾದ "ವೈಷ್ಣವ ಜನ ತೋ" ಹಾಡನ್ನು ಹೈದರಾಬಾದಿನ ರಾಮಕೃಷ್ಣ ಮಠದ ಹಿಂದಿನ ಅಧ್ಯಕ್ಷರಾಗಿದ್ದ ಮತ್ತು ಕನ್ನಡಿಗರೇ ಆದ ಸ್ವಾಮಿ ಪರಮಾರ್ಥಾನಂದರು ಹಾಡುವ ಪರಿಪಾಟವನ್ನಿಟ್ಟುಕೊಂಡಿದ್ದರು. ಇಲ್ಲಿನ ರಾಮಕೃಷ್ಣ ಮಠದ ಅಭಿವೃದ್ಧಿಗೆ ಅಪಾರ ಕೊಡುಗೆಯನ್ನಿತ್ತಿದ್ದ ಅವರು ನಾಲ್ಕೈದು ವರ್ಷಗಳ ಹಿಂದೆ ದೈವಾಧೀನರಾದರು. ಇವತ್ತು ಒಂದು ಕ್ಷಣ ಅವರು ಹಾಡುತ್ತಿದ್ದ ಹಾಡು ನೆನಪಾಯಿತು ಅದನ್ನೇ ಈ ಕೆಳಗೆ ಅದರ ಭಾವಾರ್ಥ ಸಹಿತ ನನಗೆ ತಿಳಿದ ಮಟ್ಟಿಗೆ ಕೊಟ್ಟಿದ್ದೇನೆ. ಈ ಹಾಡನ್ನು ಗುಜರಾತಿನ ದಾಸ ಪರಂಪರೆಯ ಕವಿ ನರಸಿ ಮೆಹತಾರವರು ರಚಿಸಿದ್ದು. ಈ ಕವಿತೆಗೆ ಭಾಷ್ಯ ಬರೆದಂತಿತ್ತು ಗಾಂಧೀಜಿಯವರ ಜೀವನ ಎನ್ನಬಹುದು.

ಚಿತ್ರ ಕೃಪೆ: mkgandhi.org


 

ವೈಷ್ಣವ ಜನ ತೋ ತೇನೇ ಕಹಿಯೇ
ಜೇ ಪೀಡ ಪರಾಯೀ ಜಾಣೇ ರೇ!
ಪರದುಃಖೇ ಉಪಕಾರ ಕರೇ ತೋಯೇ
ಮನ ಅಭಿಮಾನ ನ ಆಣೇ ರೇ!!

ಭಾವಾರ್ಥ= ವೈಷ್ಣವರೆನಿಸಿಕೊಳ್ಳುವವರು ಪರಪೀಡೆ ಮಾಡಬಾರದು ತಿಳಿ, ಪರರು ದುಃಖದಲ್ಲಿದ್ದಾಗ ನಿನ್ನಭಿಮಾನವನು ತೊರೆದು ಅವರಿಗೆ ಉಪಕಾರ ಮಾಡು.

ಸಕಳ ಲೋಕಮಾ ಸಹುನೇ ವಂದೇ
ನಿಂದಾ ನ ಕರೇ ಕೇನಿ ರೇ!
ವಾಚ ಕಾಛ ಮನ ನಿಶ್ಚಲ ರಾಖೇ
ಧನ ಧನ ಜನನೀ ತೇನೀ ರೇ!!

ಭಾವಾರ್ಥ= ಲೋಕವೆಲ್ಲಾ ನಿನ ನಿಂದಿಸಿದರೂ ಸಹನೆಯಿಂದಿರು, ಐಶ್ವರ್ಯದಿಂದ ತುಂಬಿ ತುಳುಕುತ್ತಿದ್ದರೂ ಕೂಡ ಕಾಯ, ವಾಚ ಮನಸಾ ನಿಶ್ಚಲನಾಗಿರು (ಶುದ್ಧನಾಗಿರು)

ಸಮದೃಷ್ಟಿ ನೇ ತೃಷ್ಣಾ ತ್ಯಾಗೀ
ಪರಸ್ತ್ರೀ ಜೇನೇ ಮಾತಾ ರೇ!
ಜಿಹ್ವಾ ಥಕೀ ಅಸತ್ಯ ನ ಬೋಲೇ
ಪರಧನ ನ ವಝಾಲೇ ಹಾಥ ರೇ!!

ಭಾವಾರ್ಥ= ಸಮದೃಷ್ಠಿ ಬೆಳೆಸಿಕೋ, ಆಸೆಯನ್ನು ಬಿಡು, ಪರಸ್ತ್ರೀಯನ್ನು ಮಾತೆಯೆಂದು ತಿಳಿ, ನಾಲಿಗೆಯಿಂದ ಸುಳ್ಳನ್ನಾಡ ಬೇಡ ಮತ್ತು ಪರಧನಕ್ಕೆ ಕೈಹಾಕ ಬೇಡ.

ಮೋಹ ಮಾಯಾ ವ್ಯಾಪೇ ನಹಿ ಜೇನೇ
ದೃಢ ವೈರಾಗ್ಯ ಜೇನಾ ಮನಮಾ ರೇ!
ರಾಮನಾಮಶು ತಾಲೀ ಲಾಗೀ
ಸಕಲ ತೀರಥ ತೇನಾ ತನಮಾ ರೇ!!

ಭಾವಾರ್ಥ= ಮೋಹ ಮಾಯೆಯ ತೊರೆದು ದೃಢ ವೈರಾಗ್ಯವ ತೆಳೆದು, ರಾಮನಾಮವ ಮೈಗೂಡಿಸಿಕೊಂಡರೆ ನಿನ್ನಲ್ಲಿಯೇ ಸಕಲ ತೀರ್ಥವು ಕಾಣೋ.

ವಣಲೋಭೀನೇ ಕಪಟರಹಿತ ಛೇ
ಕಾಮ ಕ್ರೋಧ ನಿವಾರ್ಯ ರೇ!
ಭಣೇ ನರಸೈಯೋ ತೇನು ದರಸನ ಕರತಾ
ಕುಲ ಏಕೋತೇರ ತಾರ್ಯಾ ರೇ!!

ಭಾವಾರ್ಥ =  ಲೋಭ, ಕಪಟತನವಿಲ್ಲದಿರುವಿಕೆ, ಕಾಮ, ಕ್ರೋಧ ನಿವಾರಣೆ ಇವನ್ನು ರೂಢಿಸಿಕೊಂಡರೆ ನರಸನ ದರುಶನವಾಗುವುದು, ಕುಲವ್ಯಾವುದಾದರೇನು.
 

Comments