ಕಚೇರಿಗಳಲ್ಲಿನ ಆತ್ಮಜ್ಞಾನಿಗಳು! ನೈಷ್ಕರ್ಮ್ಯ ಸಿದ್ಧಿ ಪಡೆದವರು ! ! ಮೋಕ್ಷ ಪಡೆದವರು!!!( ನಗೆಬರಹ)

ಕಚೇರಿಗಳಲ್ಲಿನ ಆತ್ಮಜ್ಞಾನಿಗಳು! ನೈಷ್ಕರ್ಮ್ಯ ಸಿದ್ಧಿ ಪಡೆದವರು ! ! ಮೋಕ್ಷ ಪಡೆದವರು!!!( ನಗೆಬರಹ)

ಇತ್ತೀಚೆಗೆ ನೈಷ್ಕರ್ಮ್ಯಸಿದ್ಧಿ ಎಂಬಪುಸ್ತಕವು ಕಣ್ಣಿಗೆ  ಬಿದ್ದಿತು. ಮೋಕ್ಷಕ್ಕೆ  ಕರ್ಮಗಳೇ ಸಾಧನ ಎಂದು ಒಂದು ವಾದ ಇರುವಲ್ಲಿ ಈ ಪುಸ್ತಕದಲ್ಲಿ  ಮೋಕ್ಷಕ್ಕೆ ಕಾಯಾ , ವಾಚಾ , ಮತ್ತು ಮಾನಸಿಕವಾದ ಯಾವ ಕರ್ಮವೂ ಸಾಧನವಾಗಲಾರದು; ಜ್ಞಾನದಿಂದಲೇ ಮೋಕ್ಷ ಎಂದು ಹೇಳಿರುತ್ತಾರೆ. ಕರ್ಮ, ಉಪಾಸನೆ , ಜಪ-ತಪಗಳನ್ನು  ಖಂಡಿಸಿದರೂ ಅವುಗಳನ್ನು ಬಿಡಬೇಕೆಂದು ಹೇಳುವುದಿಲ್ಲ. ( ಬಿಡಬೇಕೆಂದು ಹೇಳಲು ಹಿಂಜರಿದಿರಬಹುದು!) ಅಂತ:ಶುದ್ಧಿ ಹೊಂದಿದ ಆತ್ಮಜ್ಞಾನಿಗೆ ಅವುಗಳ ಅಗತ್ಯ ಇರುವುದಿಲ್ಲವಂತೆ .

ನೈಷ್ಕರ್ಮ್ಯ ಎಂದರೆ ನಿಷ್ಕರ್ಮತ್ವ ಭಾವವು , ಕರ್ಮಗಳಿಲ್ಲದೆ ಇರುವಿಕೆಯು. ಯಾವ ಕ್ರಿಯೆಯೂ ಇಲ್ಲದೆ ನಿಷ್ಕ್ರಿಯನಾದ ಆತ್ಮಸ್ವರೂಪದಲ್ಲಿಯೇ ನೆಲೆ ನಿಲ್ಲುವ ಅವಸ್ಥೆಯೇ ನೈಷ್ಕರ್ಮ್ಯವು.  ಹೀಗೆ ಆತ್ಮಸ್ವರೂಪದಲ್ಲಿಯೇ ನೆಲೆ ನಿಂತ ಜ್ಞಾನನಿಷ್ಠನಿಗೆ ಮಾಡಬೇಕಾದ ಯಾವ ಕರ್ಮವೂ, ಪಡೆಯಬೇಕಾದ ಯಾವ ಫಲವೂ ಇರುವುದೇ ಇಲ್ಲ. ಇವನೇ ಕೃತಕೃತ್ಯನು ; ನೈಷ್ಕರ್ಮ್ಯನು ....   ಆತ್ಮಜ್ಞಾನಿಯು ಮಾತ್ರ  ನೈಷ್ಕರ್ಮ್ಯನು .  ನೈಷ್ಕರ್ಮ್ಯ  ಎಂಬ ಪದವು ಆತ್ಮಜ್ಞಾನಿಯನ್ನೇ ಸೂಚಿಸುತ್ತದೆ.
ಕರ್ಮಗಳೆಲ್ಲಾ ಯಾವನನ್ನು ಬಿಟ್ಟು ತೊಲಗಿರುವವೋ ಅವನೇ ನಿಷ್ಕರ್ಮನು . ಅವನ ಭಾವವೇ ನೈಷ್ಕರ್ಮ್ಯವು. ಆ ನೈಷ್ಕರ್ಮ್ಯರೂಪ ಸಿದ್ಧಿಯೇ ನೈಷ್ಕರ್ಮ್ಯಸಿದ್ಧಿಯು. ಕರ್ಮದಿಂದಾಗಲೀ ಉಪಾಸನೆಯಿಂದಾಗಲೀ  ತಪಸ್ಸಿನಿಂದಾಗಲೀ ಧ್ಯಾನದಿಂದಾಗಲೀ ಮೋಕ್ಷವಾಗುವುದಿಲ್ಲ . ನೈಷ್ಕರ್ಮ್ಯದಿಂದಲೇ ಮೋಕ್ಷವು . ಎಲ್ಲಾ ಕರ್ಮಗಳ ಬಂಧನದಿಂದ ದಾಟಿದವನ ಸ್ಥಿತಿಯೇ ನೈಷ್ಕರ್ಮ್ಯವು. ಇದೇ ಮೋಕ್ಷವು.


ಕೆಲವು ಕಚೇರಿಗಳಲ್ಲಿ  ಕೆಲಸ(!)ಗಾರರು ಈ ಆತ್ಮಜ್ಞಾನವನ್ನು ಹೊಂದಿ ನೈಷ್ಕರ್ಮ್ಯವನ್ನೂ ಮೋಕ್ಷವನ್ನೂ  ಸಾಧಿಸಿದ್ದಾರೆ !!    .

 
(   ನಂತರ ಸೇರಿಸಿದ್ದು ----- ಇದು ನಗೆಬರಹ ಇರುತ್ತದೆ   :(          )
 

Comments