ಇಂಧನ ದುಬಾರಿಯಾದರೆ ಮತ್ತೆ ಎತ್ತಿನ ಕಾರು

ಇಂಧನ ದುಬಾರಿಯಾದರೆ ಮತ್ತೆ ಎತ್ತಿನ ಕಾರು

 ಇಂಧನ ದರ ಗಗನಕ್ಕೇರುತ್ತಿದೆ. ಇಂತಹ ಸಂದರ್ಭದಲ್ಲಿ ಬದಲಿ ಇಂಧನಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಪೆಟ್ರೋಲ್ ದರ ದುಬಾರಿಯಾಗುತ್ತಿದೆ. ಹೀಗಾಗಿ ಎಲ್ಲರೂ ಡೀಸೆಲ್ ಕಾರು ಖರೀದಿಯತ್ತ ಗಮನ ಹರಿಸುತ್ತಿದ್ದಾರೆ. ಆದರೆ ಡೀಸೆಲ್ ಕಾರು ಸೂಕ್ತವೇ ಎಂಬುದರ ಕುರಿತು ಹೆಚ್ಚಿನವರು ಯೋಚಿಸುವುದಿಲ್ಲ.
ಬದಲಿ ಇಂಧನ ಅಂದಾಕ್ಷಣ ಗ್ಯಾಸ್, ಕರೆಂಟ್ ಎಲ್ಲರ ಗಮನ ಸೆಳೆಯುತ್ತದೆ. ಎಲೆಕ್ಟ್ರಿಕ್ ಕಾರುಗಳನ್ನು ಬಳಸಿ ಪರಿಸರ ಉರಿಸಿ ಅನ್ನೋ ಸ್ಲೋಗನ್ ಗಳು ಜನಪ್ರಿಯವಾಗುತ್ತಿವೆ. ಸದ್ಯ ದೇಶದ ರಸ್ತೆಯಲ್ಲಿ ರೇವಾ ಕಾರು ಜನಪ್ರಿಯವಾಗಿದೆ. ಪೊಲಾರಿಷ್ ಮುಂತಾದ ಕಂಪನಿಗಳು ರೇವಾಕ್ಕೆ ಸೆಡ್ಡು ಹೊಡೆಯಲು ಸಜ್ಜಾಗಿವೆ.
ಬೈಸಿಕಲ್ ಇಂದು ಅತ್ಯುತ್ತಮ ಸಾರಿಗೆ ವಾಹನ. ಇದು ಪರಿಸರ ಸ್ನೇಹಿ ಮತ್ತು ಆರೋಗ್ಯ ಸ್ನೇಹಿ. ಇದಕ್ಕೆ ಯಾವುದೇ ಇಂಧನ ಅಗತ್ಯವಿಲ್ಲ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿದೇಶಗಳಲ್ಲಿ ನಗ್ನ ಬೈಸಿಕಲ್ ಸವಾರಿಯೂ ನಡೆಯುತ್ತದೆ

ಹೀಗೆ ಇಂಧನ ದರಗಳು ದುಬಾರಿಯಾಗುತ್ತಿರುವ ಸಂದರ್ಭದಲ್ಲಿ ಹಲವು ಹೊಸ ಅನ್ವೇಷಣೆಗಳು ಗಮನ ಸೆಳೆಯುತ್ತವೆ. ಟಾಟಾ ಮೋಟರ್ಸ್ ಗಾಳಿ ಚಾಲೀತ ಪವನ ಕಾರೊಂದನ್ನು ಅಭಿವೃದ್ಧಿಪಡಿಸುತ್ತಿದೆ. ವೈನ್ ಮೂಲಕ ಚಲಿಸುವ ಕಾನ್ಸೆಪ್ಟ್ ಕಾರು ಕೂಡ ಇದೆ. 

ಒಟ್ಟಾರೆಯಾಗಿ ಇಂಧನ ದರದ ಕುರಿತು ಎಲ್ಲರೂ ಗಂಭೀರವಾಗಿ ಆಲೋಚಿಸುತ್ತಿದ್ದಾರೆ. ಖಂಡಿತಾ ನಮಗೀಗ ಪರ್ಯಾಯ ಶಕ್ತಿಯ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಮೇಲಿನ ಚಿತ್ರದಲ್ಲಿ ತೋರಿಸುವಂತೆ ವಾಹನವನ್ನು ಎತ್ತಿನ ಬಂಡಿ ಮಾಡಬೇಕಾದೀತು.

Comments