ಬೆ0ಗಳೂರಿನಲ್ಲಿ ಕನ್ನಡ ಭಾಷೆ
ಬೆ೦ಗಳೂರಿನಲ್ಲಿ ಕನ್ನಡದ ದುಸ್ಥಿತಿಯ ಬಗ್ಯೆ ನಮ್ಮ ತಕರಾರು ಈವತ್ತಿನದಲ್ಲ. ಈಗ ಉದ್ಯಮೀಕರಣದಿ೦ದ ಉಂಟಾದ ಹೊರರಾಜ್ಯಗಳವರ ವಲಸೆಯಿ೦ದ ಬೆ೦ಗಳೂರಿನಲ್ಲಿ ಕನ್ನಡ ಕೇಳುವುದು ಮತ್ತಷ್ಟು ದುರ್ಲಭವಾಗುತ್ತಿದೆ.
ಇದಕ್ಕೆ ಹೊರಗಿನವರು ಎಷ್ಟು ಕಾರಣವೋ , ನಾವೂ ಅಷ್ಟೇ ಕಾರಣ.
ನಾನು ಬೆ೦ಗಳೂರಿನ ನಿವಾಸಿಯಲ್ಲ. ಆದರೂ ಬೆ೦ಗಳೂರಿಗೆ ಆಗಾಗ ಹೋದಾಗ ನನ್ನ ಅನುಭವ ಹೀಗಿದೆ. ನಾನು ಪ್ರಯತ್ನ ಪೂರ್ವಕವಾಗಿ ಆದಷ್ಟೂ ಕನ್ನಡದಲ್ಲಿಯೇ ವ್ಯವಹರಿಸುತ್ತೇನೆ.
೧. ಆಟೊ ಚಾಲಕ ನನ್ನೊಂದಿಗೆ ಕನ್ನಡದಲ್ಲಿಯೇ ಮಾತಾಡುತ್ತಿದ್ದವನು , ನಾನು ಮುಂಬಯಿಯಲ್ಲಿದ್ದೇನೆ ಎಂದು ಗೊತ್ತಾದ ಕೂಡಲೇ, ಹರಕು ಮುರುಕು ಹಿ೦ದಿಯಲ್ಲಿ ಮಾತು ಮುಂದುವರಿಸಿದ (ನಾನು ಕನ್ನಡದಲಿಯೇ ಮಾತಾಡುತ್ತಿದ್ದರೂ ಕೂಡಾ)
೨. ವಿಮಾನನಿಲ್ದಾಣದ ಅಂಗಡಿಯಲ್ಲಿ , ಕನ್ನಡದಲ್ಲಿ ಕೇಳಿದಾಗ , ಅಲ್ಲಿಯವ , ನನ್ನನ್ನು ಸ್ವಲ್ಪ ಹೆಚ್ಚು ದಿಟ್ಟಿಸಿ ನೋಡಿದರೂ ಸರಿಯಾಗಿ ಉತ್ತರ ಕೊಟ್ಟ (ಇಂಗ್ಲೀಷಿನಲ್ಲಿ)
೩. ಮಲ್ಲೇಶ್ವರದ ಮಾಲೊಂದರಲ್ಲಿ, ಕನ್ನಡದಲ್ಲಿಯೇ ವ್ಯವಹರಿಸಿದ್ದರಿಂದ , ನನಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದ್ದಲ್ಲದೇ, ಅಲ್ಲಿಯ ಕೆಲಸದವರು ನನಗೆ ರಿಯಾಯಿತಿ ಸ್ಕೀಮುಗಳ ಬಗ್ಯೆ ಕೂಡಾ ಮುತುವರ್ಜಿಯಿಂದ ಮಾಹಿತಿ ಕೊಟ್ಟರು.
ನೀವು ಬೆ೦ಗಳೂರಿನಲ್ಲಿ ಮಾಲ್ , ಮಲ್ಟಿಪ್ಲೆಕ್ಸ್ ,ವಿಮಾನನಿಲ್ದಾಣ ಇತ್ಯಾದಿ "ಇ೦ಗ್ಲೀಷ್ / ಪರಕೀಯ ವಾತಾವರಣದ" ಸನ್ನಿವೇಶಗಳಲ್ಲಿ ಅಲ್ಲಿಯವರೊಂದಿಗೆ ಕನ್ನಡ ಮಾತಾಡುತ್ತೀರಾ? ನಿಮ್ಮ ಅನುಭವವೇನು? ನೀವು ಮಾತಾಡದಿದ್ದರೆ ಅದಕ್ಕೆ ಕಾರಣ ಏನು?
ಕನ್ನಡದ ಹೀಯಾಳಿಕೆ / ತಾತ್ಸಾರ ಕಂಡುಬ೦ದಾಗ ನಿಮ್ಮ ಪ್ರತಿಕ್ರಿಯೆ ಏನಿತ್ತು?
ದಯವಿಟ್ಟು , ನಿಮ್ಮ ಅನುಭವಗಳನ್ನು ಹಂಚಿಕೊಳ್ಲಿ.
ದಯವಿಟ್ಟು ಕನ್ನಡಿಗರು ಏನು ಮಾಡಬೇಕು ಅನ್ನುವ ಜನರಲ್ ಕಾಮೆಂಟಿಗಿಂತ ನಾನೇನು ಮಾಡಿದ್ದೇನೆ / ಮಾಡುತ್ತಿದ್ದೇನೆ ಅನ್ನುವುದರ ಬಗ್ಯೆ ಬರೆಯಿರಿ.
ನಾವು ಬಯಸುವ ಬದಲಾವಣೆ ನಮ್ಮಿ೦ದಲೇ ಶುರುವಾಗಲಿ ಅನ್ನುವುದಷ್ಟೇ ಈ ಕೋರಿಕೆಯ ಆಶಯ.
ನಾರಾಯಣ
Comments
ಉ: ಬೆ0ಗಳೂರಿನಲ್ಲಿ ಕನ್ನಡ ಭಾಷೆ
In reply to ಉ: ಬೆ0ಗಳೂರಿನಲ್ಲಿ ಕನ್ನಡ ಭಾಷೆ by makara
ಉ: ಬೆ0ಗಳೂರಿನಲ್ಲಿ ಕನ್ನಡ ಭಾಷೆ
ಉ: ಬೆ0ಗಳೂರಿನಲ್ಲಿ ಕನ್ನಡ ಭಾಷೆ
In reply to ಉ: ಬೆ0ಗಳೂರಿನಲ್ಲಿ ಕನ್ನಡ ಭಾಷೆ by shashikannada
ಉ: ಬೆ0ಗಳೂರಿನಲ್ಲಿ ಕನ್ನಡ ಭಾಷೆ
ಉ: ಬೆ0ಗಳೂರಿನಲ್ಲಿ ಕನ್ನಡ ಭಾಷೆ
In reply to ಉ: ಬೆ0ಗಳೂರಿನಲ್ಲಿ ಕನ್ನಡ ಭಾಷೆ by basho aras
ಉ: ಬೆ0ಗಳೂರಿನಲ್ಲಿ ಕನ್ನಡ ಭಾಷೆ