ಮೂಢ ಉವಾಚ - 130

ಮೂಢ ಉವಾಚ - 130

ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ

ಸರಿಸರಿದು ಸಾಗಿ ಬರಲಿಹುದು ಸಾವು 

ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ

ಜಾಣರಲಿ ಜಾಣರು ಬದುಕುವರು ಮೂಢ || ..259


ಸೋಮಾರಿ ಸಾಯುವನು ಸ್ವಾರ್ಥಿ ಸಾಯುವನು

ಹೇಡಿ ಸಾಯುವನು ವೀರನೂ ಸಾಯುವನು 

ದೇವ ನಿಯಮವಿದು ಎಲ್ಲರೂ ಸಾಯುವರು

ಬದುಕಿ ಸಾಯುವರ ನೆನೆಯೋ ಮೂಢ || ..260

********************

-ಕ.ವೆಂ.ನಾಗರಾಜ್.

 
Rating
No votes yet

Comments