ಅನ್ನದಾತ

ಅನ್ನದಾತ

ಜರತಾರಿ ಸೀರೆ


ಉಟಗೊಂಡ ನೀರೆ


ಕರೆದಾಳ ಗೆಳತಿಯರ ಬಾ ಬಾರೆ ಬಾರೆ


 


ಹಾಕುತ ಹೆಜ್ಜೆ


ಕುಣಿಸೂತ  ಕಾಲ್ಗೆಜ್ಜೆ


ಒಣಕೀಲೆ ಕುಟ್ಟ್ಯಾರ ಹೊಲದಾನ ಸಜ್ಜೆ


 


ಬುತ್ತೀಯ ಕಟಗೊಂಡು


ತಲಿಮ್ಯಾಲೆ ಇಟಗೊಂಡು


ಹೊಲದ ಕಡೆ ಹೊರಟದ ನೀರೆಯರ ದಂಡು


 


ನೋವನು ತೊರೆದು


ಅನ್ನದಾತನ ಕರೆದು


ಬಡಿಸ್ಯಾರ ರೊಟ್ಟೀಯ ಮುರಿ ಮುರಿದು


 


ಸಜ್ಜೀಯ ರೊಟ್ಟಿ


ಮಾಡೈತಿ ಗಟ್ಟಿ


ಎಗ್ಗಿಲ್ದ ದುಡಿತಾವ ರೈತಾನ  ರಟ್ಟಿ


 


ಭೂ ತಾಯಿಯ ಮಡಿಲಲ್ಲಿ


ಹಸಿರಾದ ಬೆಳೆ ಚೆಲ್ಲಿ


ತಂದೈತಿ ಸಂತಸ ಎಲ್ಲೆಲ್ಲಿ


                       


                      ನಿಮ್ಮ ಸುಮಂಗಲಾ


 


 


 


 

Rating
No votes yet

Comments