ಚಲೋ ಮಲ್ಲೇಶ್ವರ ಯಾತ್ರೆ ನೋಡಲು ಬೆಂಗಳೂರಿಗೆ ಬಂದಿದ್ದ ಗೌಡಪ್ಪನ ತಂಡ ಯಾತ್ರೆ ತಡವಾಗಿದ್ದರಿಂದ ಗೌಡಪ್ಪ ಅವನ ತಂಡವನ್ನು ಕುರಿತು ಲೇ ಬರ್ರಲಾ ಆ ವಯ್ಯ ಗನೇ"ಸಣ್ಣ" ಬರೋದು ಲೇಟ್ ಆಯ್ತದೆ. ಆಯುಧ ಪೂಜೆ ಬರ್ತಾ ಐತೆ ಊರಿಗೆ ಹೋಗೋಣ ಆಮೇಲೆ ಯಾತ್ರೆ ಶುರುವಾದ ಮ್ಯಾಕೆ ಬಂದ್ರೆ ಆತು ಎಂದು ಎಲ್ಲರನ್ನೂ ಹೊರಡಿಸಿಕೊಂಡು ಮಜೆಸ್ಟಿಕ್ ಬಂದ್ರು. ಅಲ್ಲಿ "ಹುಡುಗರು" ಚಿತ್ರದ ಪೋಸ್ಟರ್ ನೋಡಿದ ತಂತಿ ಪಕಡು ರೀ ಗೌಡ್ರೆ ಇನ್ನು ಟೇಮ್ ಐತಲ್ಲ ಅಷ್ಟರಲ್ಲಿ ಈ ಸಿನೆಮಾ ನೋಡಿ ಹೋಗೋಣ. ಬೊ ಸಂದಾಕೈತಂತೆ ಅಂದ. ಅವನ ಜೊತೆ ಸುಬ್ಬ, ಕಿಸ್ನ ನೂ ಹೌದ್ರಿ ಗೌಡ್ರೆ ಬನ್ನಿ ಸಿನೆಮಾ ನೋಡೇ ಹೋಗೋಣ ಎಂದು ಎಲ್ರೂ ಚಿತ್ರಮಂದಿರದೊಳಗೆ ಹೋದರು. ಸಿನೆಮಾ ಮುಗಿಸಿಕೊಂಡು ಆಚೆ ಬಂದ ಗೌಡಪ್ಪ ಪುನೀತ್ ಅಭಿನಯ ನೋಡಿ ಫುಲ್ ಕುಶ್ ಆಗಿಬಿಟ್ಟಿದ್ದ. ಲೇ ಬೊ ಸಂದಾಕೈತೆ ಕಣ್ರಲ ಸಿನೆಮಾ ಆ ವಯ್ಯ ಪುನೀತ್ ಸಕತ್ ಆಕ್ಟಿಂಗ್ ಮಾಡವ್ನೆ ಕಲಾ ಎಂದು ಪುನೀತ್ ರೀತಿಯಲ್ಲೇ ನಡೆಯುತ್ತಿದ್ದ. ಲೇ ನೋಡ್ರಲಾ ಇನ್ಮೇಲೆ ನಾವು ಅಂಗೆ ಇರಬೇಕು ಕಲಾ ಅಂದಿದ್ದಕ್ಕೆ ಕಿಸ್ನ ಏನು ಒಬ್ರು ಕಣ್ಣು, ಒಬ್ರು ಕಾಲು ಒಬ್ರು ಕಿವಿ ಕಳಕೊಂಡು ಅಂಗವಿಕಲರ ಹಾಗೆ ಇರಬೇಕ.. ಬೇಡಪ್ಪ ಅಂದ. ಲೇ ಅಂಗಲ್ಲ ಕಲಾ ಅವರು ಸ್ನೇಹಕ್ಕೆ ಎಷ್ಟು ಬೆಲೆ ಕೊಡ್ತಾರೆ ಅಂಗೆ ಇರಬೇಕು ಕಲಾ. ಆಯ್ತು ಮೊದ್ಲು ಊರಿಗೆ ಹೋಗೋಣ ಬನ್ನಿ ಎಂದು ಬಸ್ ಸ್ಟಾಂಡ್ ಗೆ ಬಂದರು. ಅಲ್ಲಿ ಯಾವುದೋ ಕಾಲೇಜ್ ಹುಡುಗಿ ಹೋಗುತ್ತಿದ್ದರೆ ಅವಳನ್ನು ನೋಡಿ ಪರವಾಗಿಲ್ಲ ಪಂಕಜ ಎಂದ ಗೌಡಪ್ಪ. ಆ ಹುಡುಗಿ ಗೌಡಪ್ಪನ ನೋಡಿ ಯಾಕಲೇ ಮುದುಕ ಬೇಕಾ ಒದೆ ಎಂದು ಹೋದಳು. ಎಲ್ಲರೂ ಗೌಡಪ್ಪನ ನೋಡಿ ಮುಸಿ ಮುಸಿ ನಗುತ್ತಿದ್ದರು. ಸೀನ ಇದ್ದವನು ಯಾಕ್ರೀ ಗೌಡ್ರೆ ಇದೆಲ್ಲ ಬೇಕಾ ನಿಮಗೆ ಅಂದಿದ್ದಕ್ಕೆ ಅಲ್ಲಲೇ ಆ ಹುಡುಗಿ ಬೈದಿದ್ದಕ್ಕೆ ಬೇಜಾರಿಲ್ಲ, ಮೂರು ಬಿಟ್ಟವರು ನಿಮಗೆ ಏನಕ್ಕೆ ಬೇಜಾರು ಅಂದ ಸುಬ್ಬ. ಮುದುಕ ಅಂದಳು ಅಂತ ಬೇಜಾರು ಅಂದ ಗೌಡಪ್ಪ. ಇನ್ನೇನು ನೀವು ಯುವಕರ ಅಂದ ಕಿಸ್ನ...ಸರಿ ಸರಿ ಹತ್ರಿ ಬಸ್ಸು ಎಂದ ಗೌಡಪ್ಪ.
ಗೌಡಪ್ಪನಿಗೆ ಊರಿಗೆ ಬರುವವರೆಗೂ ಹುಡುಗರು ಸಿನೆಮಾ ಹಾಡನ್ನೇ ಗುನುಗುನಿಸುತ್ತಿದ್ದ. ಮಾತೆತ್ತಿದರೆ ಶಂಭೋ ಶಿವ ಶಂಭೋ ಎನ್ನುತ್ತಿದ್ದ. ಕಂಡಕ್ಟರ್ ಬಂದು ರೀ ಇದು ದೇವಸ್ಥಾನ ಅಲ್ಲ ಭಜನೆ ಮಾಡಕ್ಕೆ ಸುಮ್ನೆ ಕುಕ್ಕರಿಸಿ ಎಂದು ಹೋದ. ಅಂತೂ ಊರಿಗೆ ಬಂದು ಇಳಿಯಿತು ಗೌಡಪ್ಪನ ತಂಡ. ಬಸ್ಸಿನಿಂದ ಇಳಿದ ತಕ್ಷಣ ಗೌಡಪ್ಪ ಎಲ್ರಿಗೂ ಲೇ ನೋಡ್ರಲಾ ನಂಗೆ ಒಂದು ಹೊಸ ಐದಿರಿಯ ಬಂದೈತೆ ಎಲ್ರೂ ಬೆಳಿಗ್ಗೆ ನಮ್ಮ ಮನೆ ತಾವ ಬಂದು ಬಿಡಿ ಎಂದು ಹೊರಟ. ಬೆಳಿಗ್ಗೆ ಎಲ್ರೂ ಗೌಡಪ್ಪನ ಮನೆ ತಾವ ಬಂದ್ರೆ ಗೌಡಪ್ಪ ಇಲ್ಲಿ ಬೇಡ ಬನ್ರಲಾ ಹೊಲದ ಹತ್ರ ಹೋಗುಮಾ ಅಂತ ಎಲ್ರುನೂ ಕರೆದುಕೊಂಡು ಹೊಲದ ಹತ್ರ ಬಂದ. ರೀ ಗೌಡ್ರೆ ಅದೇನ್ರಿ ಬೆಳಿಗ್ಗೆ ಬೆಳಿಗ್ಗೆ ಬರಾಕೆ ಹೇಳಿದ್ರಲ್ಲ ಅಂದ್ರೆ ಲೇ ಸೀತು ನೀನು ಪಕ್ಕದ ಹಳ್ಳಿ ಗೌಡಪ್ಪನ ಮಗಳನ್ನು ಲವ್ ಮಾಡಿದ್ದೆ ಅಲ್ವೆನ್ಲಾ ಈಗ ನಾವೆಲ್ಲಾ ಹೋಗಿ ಹುಡುಗರು ಸಿನೆಮಾ ಥರ ಅವಳನ್ನು ಎತ್ತಾಕಿಕೊಂಡು ಬರೋಣ ಬಂದು ನಿನಗೆ ಮಾಡುವೆ ಮಾಡಿಸುತ್ತೇನೆ ಎಂದ. ಸೀತು ಜೋರಾಗಿ ನಕ್ಕು ರೀ ಗೌಡ್ರೆ ಅದು ಸಿನೆಮಾ ಕಣ್ರೀ ಅದೂ ಅಲ್ದೆ ಆ ವಯ್ಯ ಭಲೇ ಡೇಂಜರ್ ಆಸಾಮಿ ಕಣ್ರೀ. ಹೋದ ಕಿತಾ ಸುಮ್ಮನೆ ಅವರ ಮನೆ ತಾವ ಹೋಗಿದ್ದಕ್ಕೆ ಜ್ವರ ಬಾರೋ ಹಾಗೆ ಹೊಡೆದಿದ್ದ. ಅದಕ್ಕೆ ಅವಳ ಸಹವಾಸಾನೆ ಬೇಡ ಅಂತ ಬಿಟ್ಟೆ ಕಣ್ರೀ ಅಂದ. ಅದಕ್ಕೆ ಗೌಡಪ್ಪ ಲೇ ನಿನಗ್ಯಾಕ್ಲ ನಾನಿಲ್ವೇನ್ಲಾ ನನ್ನ ನಿನ್ನ ಸ್ನೇಹಕ್ಕೆ ಅಷ್ಟು ಮಾಡಕ್ಕಿಲ್ವೇನ್ಲಾ ನೋಡ್ರಲಾ ನಾಳೆನೆ ನಾವೆಲ್ಲಾ ಹೋಗಿ ಆ ಹುಡುಗೀನ ಕಿಡ್ನಾಪ್ ಮಾಡಿಕೊಂಡು ಬರಬೇಕು ಕಲಾ ಅಂದ. ಕಿಸ್ನ ಇದ್ದವನು ರೀ ಗೌಡ್ರೆ ಕಿಡ್ನಾಪ್ ಮಾಡಕ್ಕೆ ಕಾರು ಬೇಕಲ್ರಿ ಅಂದಿದ್ದಕ್ಕೆ ಲೇ ನೀವು ಅದೆಲ್ಲ ಯೋಚನೆ ಮಾಡಬೇಡಿ ಆದ್ರೆ ಎಲ್ರೂ ಬರಬೇಕ್ಕದ್ರೆ ನಿಮ್ಮ ಹತ್ರ ಕಬ್ಬಿಣದ ಐಟಂ ಏನಾದ್ರೂ ಇದ್ರೆ ತರೋದು ಮರೀಬೇಡಿ ಎಂದ. ಯಾಕ್ರೀ ಡೀಸಲ್ ಗೆ ಕಾಸಿಲ್ಲ ಅಂತ ಅದನ್ನೆಲ್ಲ ಗುಜರಿಗೆ ಹಾಕಕ್ಕ..ಅಲ್ಲ ಕಣ್ರಲಾ ಅವರ ಕಡೆ ಅವರು ಏನಾದರೂ ಅಟಾಕ್ ಮಾಡಕ್ಕೆ ಬಂದ್ರೆ ಹೊರಾಡಕ್ಕೆ ಇಲ್ಲ ಅಂದ್ರೆ ಆ ಪುನೀತ್, ಕಿಟ್ಟಿ ಲೂಸು ಮಾದನ ಹಾಗೆ ನಾವು ಅಂಗವಿಕಲರು ಆಗಬೇಕಾಗತ್ತೆ ಅದಕ್ಕೆ ಎಂದ.
ಬೆಳಿಗ್ಗೆ ಎಲ್ಲರೂ ಕೈಯಲ್ಲಿ ಒಂದೊಂದು ಕತ್ತಿ, ಗುದ್ದಲಿ,ಪಿಕಾಸು, ಕುಡಗೋಲು, ಹಾರೆ ಹಿಡಿದುಕೊಂಡು ಕೆರೆತಾವ ಬಂದರು. ಗೌಡಪ್ಪ ಲಾಂಗ್ ಥರ ಒಂದು ಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದ. ಎಲ್ಲರ ಕೈಯಲ್ಲಿ ಇದ್ದ ವಸ್ತುಗಳನ್ನು ನೋಡಿ ಲೇ ಇದೆನ್ರಲಾ ಇದನ್ನೆಲ್ಲಾ ಯಾಕ್ರಲ ತಂದ್ರಿ ಅಂದ್ರೆ ರೀ ಗೌಡ್ರೆ ನೀವೇ ಅಲ್ವರಾ ಹೇಳಿದ್ದು ಒಬ್ಬೊಬ್ಬರು ಒಂದೊಂದು ಕಬ್ಬಿಣದ ಐಟಂ ತರಬೇಕು ಅಂತ ಅಂದು ಮಾತಾಡುತ್ತಿದ್ದರು ಅಷ್ಟರಲ್ಲಿ ಗುಂಪೊಂದು ಬಂದು ಇವರ ಮೇಲೆ ದಬ ದಬ ಅಂತ ಬಾರಿಸತೊಡಗಿದರು ಐದು ನಿಮಿಷ ಸತತವಾಗಿ ಬಾರಿಸಿದ ನಂತರ ಗೌಡಪ್ಪ ಜೋರಾಗಿ ಕಿರುಚಿಕೊಂಡು ಲೇ ಯಾರ್ಲಾ ನೀವು ಯಾಕ್ರಲ್ಲ ಒಳ್ಳೆ ದನಕ್ಕೆ ಹೊಡದಂಗೆ ಹೊಡಿತಿದೀರ ಅಂದಿದ್ದಕ್ಕೆ ಗುಂಪಿನಲ್ಲೊಬ್ಬ ಕಳ್ಳ ನನ್ ಮಕ್ಳ ದಿನಾ ರಾತ್ರಿ ನಮ್ಮ ಹಳ್ಳಿಗೆ ನೀವೇನಾ ಕಳ್ಳತನಕ್ಕೆ ಬರ್ತಿರೋದು ಅಂತ ಮತ್ತೆ ಹೊಡೆಯಲು ಕೈ ಎತ್ತಿದಾಗ ಲೇ ನಾವೆಲ್ಲಾ ಪಕ್ಕದ ಹಳ್ಳಿಯೋರು ಕನ್ಲಾ ನಾನು ಆ ಊರಿನ ಗೌಡಪ್ಪ ಅಂದ ಮೇಲೆ ಒಹ್ ಕ್ಷಮಿಸಿ ಗೌಡ್ರೆ ನೀವೆಲ್ಲ ಒಟ್ಟಿಗೆ ಗುಂಪಾಗಿ ಕೈಯಲ್ಲಿ ಆಯುಧಗಳನ್ನು ಹಿಡಿದು ನಿಂತಿದ್ದು ನೋಡಿ ಕಳ್ಳರ ಗುಂಪು ಇರಬೇಕು ಅಂದುಕೊಂಡಿವಿ. ಲೇ ಆಯುಧ ಪೂಜೆ ಬರ್ತಾ ಇದ್ಯಲ್ಲ ಅದಕ್ಕೆ ಇದನ್ನೆಲ್ಲಾ ಕಿಲೀನ್ ಮಾಡೋಣ ಅಂತ ಕೆರೆತಾವ ಬಂದ್ವಿ ಕನ್ಲಾ ಅಂದ ಮ್ಯಾಕೆ ಬಂದಿದ್ದ ಗುಂಪು ಹೊರಟು ಹೋಯಿತು. ಎಲ್ರೂ ಗೌಡಪ್ಪನಿಗೆ ಥೂ ಎಂದು ಉಗಿದರು. ಸರಿ ಆಗಿದ್ದು ಆತು ನಡ್ರಿ ಬೇಗ ಹೊರಡೋಣ ಅಂದ ಗೌಡಪ್ಪ. ರೀ ಗೌಡ್ರೆ ಕಾರ್ ತರ್ತೀನಿ ಅಂದ್ರಲ್ಲ ಎಲ್ರಿ ಅಂದಿದ್ದಕ್ಕೆ ಲೇ ಯಾವುದು ಕಾರ್ ಸಿಗಲಿಲ್ಲ ಕಲಾ ಅದಕ್ಕೆ ನಮ್ ಇಸ್ಮಾಯಿಲ್ ಗೆ ಬಸ್ ತರಕ್ಕೆ ಹೇಳಿವ್ನಿ ಇನ್ನೇನು ಬರಬೇಕು ಅನ್ನುವಷ್ಟರಲ್ಲಿ ರಸ್ತೆಯ ಧೂಳೆಲ್ಲವನ್ನು ಒಳ್ಳೆ ಸುಂಟರಗಾಳಿಯ ಹಾಗೆ ಎಬ್ಬಿಸಿಕೊಂಡು ಇಸ್ಮಾಯಿಲ್ ಬಸ್ ಬಂತು.
ಎಲ್ಲರೂ ಬಸ್ ಏರಿ ಪಕ್ಕದ ಹಳ್ಳಿಗೆ ಹೊರಟರು. ಗೌಡಪ್ಪ ಎಲ್ಲರಿಗೂ ಹೇಳುತ್ತಿದ್ದ ನೋಡ್ರಲಾ ಬಸ್ಸನ್ನು ಆ ಹಳ್ಳಿಯ ಆಚೆಯೇ ನಿಲ್ಲಿಸೋಣ ನಾನು ಆ ಹುಡುಗಿ ಮನೆ ಕಿತಾ ಒಯ್ತೀನಿ, ಸುಬ್ಬ ಮನೆ ಹಿಂದಗಡೆ ಇರ್ಲಿ, ಕಿಸ್ನ ದೇವಸ್ಥಾನದ ಹತ್ರ ಇರ್ಲಿ ತಂತಿ ಪಕಡು ಮರದ ಮೇಲೆ ಹತ್ತಿ ಮನೆ ಒಳಗಿಂದ ಯಾರಾದರೂ ಬಂದ ತಕ್ಷಣ ಶಿಳ್ಳೆ ಹೊಡೆಯಬೇಕು ಇಸ್ಮಾಯಿಲ್ ನನ್ನ ಜೊತೆ ಬರಲಿ ಎಂದಿದ್ದಕ್ಕೆ ಇಸ್ಮಾಯಿಲ್ ಕ್ಯಾ ಗೌಡ್ರೆ ನಾನು ನಿಮಗೆ ಜೊತೆ ಬಂದ್ರೆ ಬಸ್ಸು ಯಾರು ನಿಮಗೆ ಅಪ್ಪದು ಓಡಿಸ್ತಾರೆ ನಾನು ಬಸ್ ಹತ್ರಾನೆ ಇರ್ತೀನಿ ಅಂದ. ಸರಿ ಅಂದು ಎಲ್ಲರೂ ಹಳ್ಳಿಯ ಒಳಗೆ ಕಾಲಿಟ್ಟರು. ಗೌಡಪ್ಪನ ಬಿಟ್ಟು ಇನ್ಯಾರು ಗೌಡಪ್ಪ ಹೇಳಿದ ಹಾಗೆ ಮಾಡಲಿಲ್ಲ. ಎಲ್ಲರೂ ಸೀತುನ ಕೇಳಿದರು ಅಲ್ವೋ ಸೀತು ನೀನೇನೋ ಆ ಹುಡುಗಿನ ಲವ್ ಮಾಡ್ತಾ ಇದ್ಯಾ. ಆದರೆ ಆ ಹುಡುಗಿ ನಿನ್ನ ಲವ್ ಮಾಡ್ತಾ ಇದ್ಯಾ ಅಂತ ಕೇಳಿದ್ದಕ್ಕೆ ಜೋರಾಗಿ ನಕ್ಕು ಲೇ ಆ ಹುಡುಗಿಗೆ ನಾನು ಯಾರು ಅಂತಲೇ ಗೊತ್ತಿಲ್ಲ ಕಲಾ ಅನ್ನೊದ. ಎಲ್ಲರೂ ಲೇ ಮತ್ತೆ ಗೌಡಪ್ಪನ ಗತಿ ಏನ್ಲಾ ಅಂದ್ರೆ ಸುಮ್ಕಿರ್ಲಾ ಆ ಗೌಡಪ್ಪ ನಮಗೆ ಒಸಿ ಕಾಟ ಕೊಟ್ಟವನ ಅದಕ್ಕೆ ಸುಮ್ಕೆ ಇದ್ದೆ. ನಡ್ರಿ ನಮ್ಮ ಪಾಡಿಗೆ ನಾವು ಹಳ್ಳಿಗೆ ಹೋಗೋಣ ಎಂದು ವಾಪಸ್ ಬಂದು ಬಿಟ್ರು. ಹುಡುಗಿಯ ಮನೆ ಬಳಿ ಗೌಡಪ್ಪ ಬಗ್ಗಿ ಬಗ್ಗಿ ನೋಡ್ತಾ ಇದ್ದ. ಹಿಂದುಗಡೆಯಿಂದ ಬಲವಾದ ಕೈಯೊಂದು ಗೌಡಪ್ಪನ ಹೆಗಲ ಮೇಲೆ ಬಿದ್ದಾಗ ತಿರುಗಿ ನೋಡಿದ. ದೈತ್ಯಾಕಾರದ ದಪ್ಪ ಮೀಸೆಯ ಆಸಾಮಿ ಒಬ್ಬ ನಿಂತಿದ್ದಾನೆ. ತಕ್ಷಣ ಗೌಡಪ್ಪನಿಗೆ ಒಹ್ ಇವನೇ ಹುಡುಗಿಯ ಅಪ್ಪ ಇರಬೇಕು ಎನಿಸಿ ಗತ್ತಿನಿಂದ ಲೇ ಗೌಡ ಎಲ್ಲ್ಲಾ ನಿನ್ ಮಗಳು. ನಮ್ ಐಕ್ಲು ಒಬ್ಬ ಹುಡುಗ ಅವಳನ್ನು ಇಷ್ಟ ಪಟ್ಟವ್ನೆ ಕಳ್ಸಲಾ ನಿನ್ನ ಮಗಳನ್ನ ಅಂದಿದ್ದೆ ತಡ ಗೌಡಪ್ಪನಿಗೆ ಮುಖ ಮೂತಿ ನೋಡದೆ ಬಾರಿಸಿ ಬಿಟ್ಟ. ಅಂತೂ ಇಂತೂ ಅವನಿಂದ ತಪ್ಪಿಸಿಕೊಂಡು ಹಳ್ಳಿಗೆ ಬಂದ ಗೌಡಪ್ಪ ಸೀದಾ ಸುಬ್ಬನ ಚಾ ಅಂಗಡಿ ಬಳಿ ಬಂದ. ಕಿಸ್ನ ಅವನನ್ನು ನೋಡಿ ರೀ ಗೌಡ್ರೆ ಅವರಪ್ಪ ಬಂದ ಕೂಡಲೇ ನಾವೆಲ್ಲಾ ಓದಿ ಬಂದು ಬಿಟ್ಟೆವು ನೀವ್ಯಾಕೆ ಬರಲಿಲ್ಲ, ಇದೇನು ಒಂದು ಕಣ್ಣು ಮುಚ್ಚಿ ಹೋಗಿದೆ, ಒಂದು ಕಾಲು ಕುಂಟುತ್ತ ಇದ್ದೀರಾ ಎಂದ. ಲೇ ಅದೆನಲ್ಲ ಜೋರಾಗಿ ಹೇಳಲಾ ಅಂದ ಗೌಡಪ್ಪ ಒಹ್ ಸ್ಪೀಕರ್ ಕೂಡ ಔಟ್ ಆಗಿದೆ. ಸರಿ ಹೋಯ್ತು ಬಿಡಿ ಹುಡುಗರು ಸಿನಿಮಾದ ಅಂಗವಿಕಲರಂತೆ ನಿಮಗೊಬ್ಬರಿಗೆ ಮೂರು ಔಟ್ ಆಗಿದೆ ಎಂದ..
Comments
ಉ: ಗೌಡಪ್ಪನ "ಹುಡುಗರು"
ಉ: ಗೌಡಪ್ಪನ "ಹುಡುಗರು"
ಉ: ಗೌಡಪ್ಪನ "ಹುಡುಗರು"
In reply to ಉ: ಗೌಡಪ್ಪನ "ಹುಡುಗರು" by manju787
ಉ: ಗೌಡಪ್ಪನ "ಹುಡುಗರು"
ಉ: ಗೌಡಪ್ಪನ "ಹುಡುಗರು"
In reply to ಉ: ಗೌಡಪ್ಪನ "ಹುಡುಗರು" by partha1059
ಉ: ಗೌಡಪ್ಪನ "ಹುಡುಗರು"
ಉ: ಗೌಡಪ್ಪನ "ಹುಡುಗರು"
In reply to ಉ: ಗೌಡಪ್ಪನ "ಹುಡುಗರು" by kavinagaraj
ಉ: ಗೌಡಪ್ಪನ "ಹುಡುಗರು"
ಉ: ಗೌಡಪ್ಪನ "ಹುಡುಗರು"
In reply to ಉ: ಗೌಡಪ್ಪನ "ಹುಡುಗರು" by makara
ಉ: ಗೌಡಪ್ಪನ "ಹುಡುಗರು"