ಕಟ್ಟಿಗೆ ಮಾರುವವನ ಗೋಳು?!
ಸಂಪದದ ಹಿರಿಯ-ಕಿರಿಯ ಮಿತ್ರರಾದ ರವೀ, ಸುಪ್ರೀತ್, ಶಶಿಕುಮಾರ್, ಕಾಂತು ಬಾಗಿಲವಾಡ ಮತ್ತು ಆರ್. ಕೆ. ದಿವಾಕರ್ ಮೊದಲಾದವರು ಬೆಲೆಯೇರಿಕೆಯ ಕಾರಣ ಮತ್ತು ಜನಸಾಮಾನ್ಯನಿಗಾಗುವ ಬವಣೆಯನ್ನು ಕುರಿತು ಇತ್ತೀಚೆಗೆ ಸಂಪದದಲ್ಲಿ ಬಹಳ ಚೆನ್ನಾಗಿ ನಿರೂಪಿಸಿದ್ದಾರೆ. ಸಾಮಾನ್ಯ ನಾಗರೀಕ ತನ್ನ ಪ್ರತಿಭಟನಾ ಶಕ್ತಿಯನ್ನೂ ಕಳೆದುಕೊಂಡಿದ್ದಾನೆ ಏಕೆಂದರೆ ಈ ಬೆಲೆಯೇರಿಕೆಯನ್ನುವುದು ಯಾವಗಲೋ ಒಂದು ದಿನ ಬಂದು ಹೋಗುವ ಸುನಾಮಿಯಲ್ಲ ಆದರೆ ನಿರಂತರ ಬಂದು ಅಪ್ಪಳಿಸುವ ಸಮುದ್ರದ ಅಲೆಯಂತಾಗಿರುವುದರಿಂದ. ಅದೇನೇ ಇರಲಿ ಜನ ಸಾಮಾನ್ಯ ಇನ್ನೂ ಹಾಸ್ಯ ಮತ್ತು ವಿಡಂಬನೆಗೆ ಸ್ಪಂದಿಸದಷ್ಟು ಜಡನಾಗಿಲ್ಲ ಎನ್ನುವುದೊಂದೇ ಸಮಾಧಾನ. ಈ ಹಿನ್ನಲೆಯಲ್ಲಿ ನನಗೆ ನೆನಪಾದದ್ದು ನಮ್ಮ ಜಮಾನಕ್ಕಾಗಲೇ ಮಾರ್ಡನ್ ಎನ್ನಿಸಿದ್ದ ಈ ಹಳೆಯ-ಹೊಸ ಕಥೆ. ಇದರಿಂದ ಸಂಪದಿಗರು ಕ್ಷಣಕಾಲ ಸಂತಸಗೊಳ್ಳಲೆಂದು ಅದನ್ನು ಇಲ್ಲಿ ಕೊಡುತ್ತಿದ್ದೇನೆ, ರಚಿಸಿದ ಮೂಲ ಲೇಖರನ್ನೊಮ್ಮೆ ಸ್ಮರಿಸಿ.
ಹಿಂದೊಮ್ಮೆ ಕಟ್ಟಿಗೆ ಮಾರುವವನು ಇದ್ದ. ಅವನೊಮ್ಮೆ ನದಿ ದಡದಮೇಲೆ ಕುಳಿತುಕೊಂಡು ಕಟ್ಟಿಗೆ ಕಡಿಯುತ್ತಿದ್ದ, ಆಗ ಆಕಸ್ಮಿಕವಾಗಿ ಅವನ ಕೊಡಲಿ ಜಾರಿ ನದಿಯಲ್ಲಿ ಬಿತ್ತು. ಅವನ ಸಂಕಟವನ್ನು ನೋಡಿ ಆ ನದಿ ದೇವತೆ ಪ್ರತ್ಯಕ್ಷವಾಗಿ, ಅವನಿಗೆ ಮೊದಲು ಬಂಗಾರದ ಕೊಡಲಿಯನ್ನು, ನ೦ತರ ಬೆಳ್ಳಿ ಕೊಡಲಿಯನ್ನು ತೋರಿಸುತ್ತಾಳೆ, ಆದರೆ ಅವೆರಡು ತನ್ನದಲ್ಲವೆ೦ದು ಹೇಳುತ್ತಾನೆ. ಆಗ ನದಿ ದೇವತೆ ಪುನಃ ನೀರಲ್ಲಿ ಮುಳುಗಿ ಅವನ ಕಬ್ಬಿಣದ ಕೊಡಲಿಯನ್ನು ತ೦ದು ಕೊಟ್ಟಾಗ ಅದೇ ತನ್ನ ನಿಜವಾದ ಕೊಡಲಿಯೆ೦ದು ಗುರುತಿಸುತ್ತಾನೆ. ಆಗ ಅವನ ಪ್ರಾಮಾಣಿಕತೆಗೆ ಮೆಚ್ಚಿ ಮೂರು ಕೊಡಲಿಗಳನ್ನು ಅವನಿಗೆ ಕೊಟ್ಟು ಕಳುಹಿಸಿ ಸುಖವಾಗಿ ಜೀವಿಸೆ೦ದು ಆಶೀರ್ವದಿಸುತ್ತಾಳೆ. ಇದು ಎಲ್ಲರಿಗೂ ಗೊತ್ತಿರುವ ಹಳೆಯ ಕಥೆ. ಅದೇ ಕಟ್ಟಿಗೆಯವನು ಈ ಸ್ವತಂತ್ರ ಭಾರತದಲ್ಲಿ ಮತ್ತೆ ಕಟ್ಟಿಗೆ ಒಡೆಯುವವನಾಗಿ ಹುಟ್ಟುತ್ತಾನೆ ಮತ್ತು ಅದೇ ನದಿ ದಡದಲ್ಲಿ ಕಟ್ಟಿಗೆ ಕಡಿಯುತ್ತಾ ಕುಳಿತಿರುತ್ತಾನೆ. ಆದರೆ, ಈ ಸಾರಿ ಅಲ್ಲಿಗೆ ಬಟ್ಟೆ ಒಗೆಯಲು ಬ೦ದ ಅವನ ಹೆ೦ಡತಿ ಜಾರಿ ನದಿಯಲ್ಲಿ ಬಿದ್ದುಹೋಗುತ್ತಾಳೆ. ಆಗ ಆ ಕಟ್ಟಿಗೆಯವನಿಗೆ ಪೂರ್ವಜನ್ಮದ ಸ್ಮರಣೆಯುಂಟಾಗಿ ಆ ನದಿ ದೇವತೆಯನ್ನು ಜ್ಞಾಪಿಸಿಕೊಳ್ಳುತ್ತಾನೆ. ಈ ಬಾರಿಯೂ ಅವನನ್ನು ಪರೀಕ್ಷಿಸಲೆಂದು ಆ ನದಿ ದೇವತೆ ಅವನ ಹೆಂಡತಿಯ ಬದಲಿಗೆ ಐಶ್ವರ್ಯಾ ರೈಯನ್ನು ನೀರಿನಿಂದ ಎತ್ತಿಕೊಂಡು ಬರುತ್ತಾನೆ. ಆಗ ಆ ಕಟ್ಟಿಗೆಯವನು ಅವಳೇ ತನ್ನ ಹೆ೦ಡತಿಯೆ೦ದು ಹೇಳಿ ಅವಳೊಂದಿಗೆ ಹೊರಡಲು ಅನುವಾಗುತ್ತಾನೆ. ಆಗ ಆ ನದಿ ದೇವತೆಗೆ ಇದೇನು ಕಾಲ ಮಹಿಮೆ; ಈ ಕಟ್ಟಿಗೆಯವನು ಹೀಗೇಕೆ ಬದಲಾಗಿದ್ದಾನೆಂದು ಆಶ್ಚರ್ಯಪಟ್ಟು, ಹೀಗೇಕೆ ಮಾಡಿದೆಯೆಂದು ಪ್ರಶ್ನಿಸುತ್ತಾನೆ. ಆಗ ಕಟ್ಟೆಗೆಯವನು ಹೇಳುತ್ತಾನೆ, ಸ್ವಾಮಿ ಇವಳು ನನ್ನ ಹೆಂಡತಿಯಲ್ಲವೆಂದು ಹೇಳಿದರೆ ನೀನು ಪುನಃ ನೀರಿನಲ್ಲಿ ಮುಳುಗಿ ಮತ್ತೊಬ್ಬ ಕರೀನಾ ಕಪೂರೋ ಇಲ್ಲಾ ಕತ್ರೀನಾ ಕೈಫಳನ್ನೋ ತರುತ್ತೀ, ನಾನು ಇವರಾರು ನನ್ನ ಹೆಂಡತಿಯಲ್ಲವೆಂದು ಹೇಳಿದ ಮೇಲೆ ಕಡೆಯಲ್ಲಿ ನನ್ನ ಸ್ವಂತ ಹೆಂಡತಿಯನ್ನು ಕರೆದುಕೊಂಡು ಬರುತ್ತೀ, ಆಗ ಇವಳೇ ನನ್ನ ಹೆಂಡತಿಯೆಂದು ಗುರುತಿಸಿದ ಮೇಲೆ ಮೂವರನ್ನೂ ನನ್ನ ಜೊತೆಯಲ್ಲಿ ಕಳುಹಿಸುತ್ತೀಯಾ. ಮೊದಲೇ ರೇಶನ್ ದುಬಾರಿಯಿರುವ ಈ ಕಾಲದಲ್ಲಿ ಅವರೆಲ್ಲರನ್ನೂ ನನಗೆ ಸಾಕಲಾಗುವುದಿಲ್ಲ. ಇನ್ನು ಅವರ ಮೇಕಪ್ಪು ಮೊದಲಾದ ಖರ್ಚುಗಳನ್ನು ನಾನೆಲ್ಲಿಂದ ಭರಿಸಲಿ. ಆದ್ದರಿಂದ ತಾವು ನನ್ನ ಮೇಲೆ ಕೃಪೆಮಾಡಿ ಇವಳನ್ನೇ ನನ್ನ ಹೆಂಡತಿಯಾಗಿ ಕಳುಹಿಸಿಕೊಡಿ. ಆ ಕಟ್ಟಿಗೆಯವನು ಹೇಳುವುದರಲ್ಲಿಯೂ ಲಾಜಿಕ್ ಇದೆ ಎಂಬುದನ್ನು ಅರಿತುಕೊಂಡು ಆ ನದಿ ದೇವತೆ ಐಶ್ವರ್ಯಾ ರೈಯನ್ನು ಅವನೊಂದಿಗೆ ಕಳುಹಿಸಿಕೊಟ್ಟ!!!
(ಇಲ್ಲಿ ಹೆಸರುಗಳನ್ನು ಈ ಕಾಲಕ್ಕೆ ಅನ್ವಯಿಸುವಂತೆ ಐಶ್ವರ್ಯಾ ರೈ ಹಾಗು ಕರೀನಾ ಕಪೂರ್/ ಕತ್ರೀನಾ ಕೈಫ್ ಎಂದು ಬದಲಾಯಿಸಲಾಗಿದೆ. ನಮ್ಮ ಜಮಾನದಲ್ಲಿ ಮೊದಲನೆಯವಳನ್ನು ಡಿಂಪಲ್ ಹಾಗು ಎರಡನೆಯವಳನ್ನು ರೇಖಾ ಎಂದು ಬೇಕಾದರೆ ಬದಲಾಯಿಸಿಕೊಳ್ಳಿ).
Comments
ಉ: ಕಟ್ಟಿಗೆ ಮಾರುವವನ ಗೋಳು?!
In reply to ಉ: ಕಟ್ಟಿಗೆ ಮಾರುವವನ ಗೋಳು?! by SRINIVAS.V
ಉ: ಕಟ್ಟಿಗೆ ಮಾರುವವನ ಗೋಳು?!
In reply to ಉ: ಕಟ್ಟಿಗೆ ಮಾರುವವನ ಗೋಳು?! by makara
ಉ: ಕಟ್ಟಿಗೆ ಮಾರುವವನ ಗೋಳು?!
In reply to ಉ: ಕಟ್ಟಿಗೆ ಮಾರುವವನ ಗೋಳು?! by sumangala badami
ಉ: ಕಟ್ಟಿಗೆ ಮಾರುವವನ ಗೋಳು?!
ಉ: ಕಟ್ಟಿಗೆ ಮಾರುವವನ ಗೋಳು?!
In reply to ಉ: ಕಟ್ಟಿಗೆ ಮಾರುವವನ ಗೋಳು?! by shashikannada
ಉ: ಕಟ್ಟಿಗೆ ಮಾರುವವನ ಗೋಳು?!
ಉ: ಕಟ್ಟಿಗೆ ಮಾರುವವನ ಗೋಳು?!
In reply to ಉ: ಕಟ್ಟಿಗೆ ಮಾರುವವನ ಗೋಳು?! by Chikku123
ಉ: ಕಟ್ಟಿಗೆ ಮಾರುವವನ ಗೋಳು?!
ಉ: ಕಟ್ಟಿಗೆ ಮಾರುವವನ ಗೋಳು?!
In reply to ಉ: ಕಟ್ಟಿಗೆ ಮಾರುವವನ ಗೋಳು?! by basho aras
ಉ: ಕಟ್ಟಿಗೆ ಮಾರುವವನ ಗೋಳು?!
ಉ: ಕಟ್ಟಿಗೆ ಮಾರುವವನ ಗೋಳು?!
In reply to ಉ: ಕಟ್ಟಿಗೆ ಮಾರುವವನ ಗೋಳು?! by partha1059
ಉ: ಕಟ್ಟಿಗೆ ಮಾರುವವನ ಗೋಳು?!
ಉ: ಕಟ್ಟಿಗೆ ಮಾರುವವನ ಗೋಳು?!
In reply to ಉ: ಕಟ್ಟಿಗೆ ಮಾರುವವನ ಗೋಳು?! by kavinagaraj
ಉ: ಕಟ್ಟಿಗೆ ಮಾರುವವನ ಗೋಳು?!
ಉ: ಕಟ್ಟಿಗೆ ಮಾರುವವನ ಗೋಳು?!
In reply to ಉ: ಕಟ್ಟಿಗೆ ಮಾರುವವನ ಗೋಳು?! by Iynanda Prabhukumar
ಉ: ಕಟ್ಟಿಗೆ ಮಾರುವವನ ಗೋಳು?!
ಉ: ಕಟ್ಟಿಗೆ ಮಾರುವವನ ಗೋಳು?!
In reply to ಉ: ಕಟ್ಟಿಗೆ ಮಾರುವವನ ಗೋಳು?! by gopaljsr
ಉ: ಕಟ್ಟಿಗೆ ಮಾರುವವನ ಗೋಳು?!