ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ
ಲಿನಕ್ಸ್ ಬಹಳಷ್ಟು ಜನರಿಗೆ ಕಬ್ಬಿಣದ ಕಡಲೆ. ಆದ್ರೆ ಲಿನಕ್ಸ ಅನ್ನ ಉಪಯೋಗಿಸ್ಲಿಕ್ಕೆ ಒಮ್ಮೆ ಶುರು ಮಾಡಿ ನೋಡಿ. ಪ್ರಶ್ನೆಗಳಿವೆಯೆ? ಸಂಪದಕ್ಕೆ ಒಂದು ಚರ್ಚೆಯ ವಿಷಯವನ್ನ ಸೇರಿಸಿ. ನಿಮಗೆ ಅರ್ಥವಾಗುವ ಹಾಗೆ, ಲಿನಕ್ಸ್ ಉಪಯೋಗದ ಬಗ್ಗೆ ತಿಳಿಸುವ.
ಲಿನಕ್ಸಾಯಣ ನಿಮ್ಮಲ್ಲಿಗೆ ಲಿನಕ್ಸಿನ ಎಷ್ಟೋ ವಿಷಯಗಳನ್ನ ಕನ್ನಡದಲ್ಲಿ ತರುವ ಒಂದು ಪುಟ್ಟ ಪ್ರಯತ್ನ.
ಲಿನಕ್ಸ್ ಕಲಿಯೋದು ತುಂಬಾ ಸುಲಭ, ಆದ್ರೇ ಇಂಟರ್ನೆಟ್ ಸಂಪರ್ಕ ಮತ್ತು ಲಿನಕ್ಸ್ ತಿಳಿದವರ ಅಭಾವ ನಿಮ್ಮನ್ನ ಅದರಿಂದ ದೂರ ಇಡ್ತಾನೇ ಬರ್ತಿದೆ. ಲಿನಕ್ಸ ನಲ್ಲಿ ಜಾದೂ ಮಾಡ್ಬಹುದು. ನಿಮಗೆ ಯಾವ್ ತಂತ್ರಾಂಶ ಬೇಕಿದೆಯೋ ಕೇಳಿ ನೋಡಿ, ತಟ್ಟನೆ ನಿಮ್ಮೆದುರಿಗೆ ತಂದಿಡತ್ತೆ "ಪೈರಸಿ ಭೂತ" ದಿಂದ ಮುಕ್ತವಾದ ಉತ್ತರಗಳನ್ನ. ಲಿನಕ್ಸ್ ಕಿರಿ ಕಿರಿ ಅನ್ನಿಸ್ತಿದೆಯೆ? ೨೪ ತಾಸು ಲಿನಕ್ಸ್ ನೊಂದಿಗೆ ಕಳೆದು ನಂತರ ತಿಳಿಸಿ. ನಿಮಗೆ ಕಿರಿ ಕಿರಿ ಅನ್ನಿಸಿದ್ದು ನಿಮಗೆ ತಂತ್ರಾಂಶ ಪ್ರಪಂಚದ ದರ್ಶನ ಮಾಡ್ಸಿದ್ರೂ ಮಾಡಿಸ್ಬಹುದು.
-೧-
ಲಿನಕ್ಸನ ಫೈಲ್ ಸಿಸ್ಟಂ (filesystem) ನಲ್ಲಿ ನಿಮಗೆ c: (ಸಿ ಡ್ರೈವ್)ಸಿಗೋದಿಲ್ಲ. ಅದು ಶುರು ಆಗೋದು / ಅನ್ನೋ ಡೈರೆಕ್ಟರಿ (ಫೋಲ್ಡರ್) ನಿಂದ. ಇದರ ಕೆಳಗಡಗಿದೆ ನಿಮ್ಮ ಲಿನಕ್ಸ್ ಮತ್ತೆಲ್ಲ ಕಡತಗಳು (ಫೈಲ್ ಮತ್ತು ಫೋಲ್ಡರ್ ಗಳು). ಇದನ್ನ ಕಿತ್ತಾಕ್ಲಿಕ್ಕೆ ಪ್ರಯತ್ನಿಸಿದ್ರೋ ಜೋಕೆ ಮತ್ತೆ ಲಿನಕ್ಸ್ ಇನ್ಸ್ಟಾಲ್ ಮಾಡ್ಬೇಕಾದೀತು! ;)
ಲಿನಕ್ಸ್ ಕಲಿಯೋಕೆ ಅದರೊಂದಿಗೆ ಆಟ ಆಡ್ಲೇ ಬೇಕು. ಆದ್ರೆ ಸ್ವಲ್ಪ ಎಚ್ಚರಿಕೆವಹಿಸೋದು ಉತ್ತಮ.
"rm -rf /" ಉಪಯೋಗಿಸಿದ್ರೆ ಏನಾಗ್ಬಹುದು ಅನ್ನೂ ಕುತೂಹಲ ಇದ್ಯಾ? ನಿಮ್ಮ ಕಂಪ್ಯೂಟರಿನಲ್ಲಿ ಪ್ರಯೋಗ ನೆಡೆಸೋ ಮೊದ್ಲು ಈ ವಿಡಿಯೋ ನೋಡಿ.
--
ಇಂತಹ ಮತ್ತೆಷ್ಟೋ ತರ್ಲೆ ವಿಷಯಗಳನ್ನ ನಿಮ್ಮ ಮುಂದೆ ಇಟ್ಟು ನಿಮ್ಮಲ್ಲಿ ಲಿನಕ್ಸ್ ಬಗ್ಗೆ ಕುತೂಹಲ ಮೂಡಿಸೋ ಆಸೆ. ನಿಮಗೆ ಏನನ್ನಿಸ್ತದಂತ ಮರೀದೇ ತಿಳಿಸಿ.
Comments
ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ
In reply to ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ by ಸಂಗನಗೌಡ
ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ
ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ
In reply to ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ by anivaasi
ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ
ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ
ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ
In reply to ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ by baktavarbaba
ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ