ರಾಜಭೋಗ
ಕರ ಕಷ್ಟ ಪಿಷ್ಟ ಪಿಂಡೀಕರಣ ಮಂಡಿಕಾಮೋದ
ಮೋದಕ ಘನೀಕೃತ ಘೃತ ವಿಧ ವಿವಿಧಾನ್ನ ಕ್ಷೀರ
ಧಧಿ ರಸಾಯನ ಪಾನಕ ನಳ ಪಾಕಾದಿ ಪಾಯಸ
ಭಾರೀ ಭೂರಿ ಭೋಜನಾನಂತರ ಭುಕ್ತಾಯಾಸ
ಪರಿಹಾರ ಪ್ರಯುಕ್ತ ಕಳಿತ ಕದಳೀ ಫಲ ಭಕ್ಷಣ
ನಾನಾ ಪರಿಮಳಯುಕ್ತ ತಾಂಬೂಲ ಚರ್ವಣ
ಕರ್ಣ ಸುಖ ಸೇವಿತ ಮಧುರ ಗಂಧರ್ವ ಗಾನ
ವೀಣಾ ವಾದನ ರಜತ ಕರಂಡಿಕಾ ದಾರುಣೀ ಸೇವಿತ
ಹಿತ ಹಂಸತೂಲಿಕಾ ತಲ್ಪ ನಿಜ ಕನ್ಯಾವಳೀ ಚಾಮರ ಸೇವಿತಾ
ರ್ಧೋನ್ಮೀಲಿತ ನಯನ ನಾಟ್ಯ ಗಾಯನ ಮನೋಹರ
ಮಂದಹಾಸ ಭರಿತ ಚೇಟಿಕಾ ಗಣಾಗಣಿತ ದ್ರವ್ಯಭರಿತ
ನವರತ್ನಕನಕ ಭಂಡಾರ ನಿತ್ಯ ಮಂತ್ರಾಲೋಚನಾಸಕ್ತ
ಚತುರತಮ ಮಂತ್ರಿ ಗಣಯುಕ್ತ ಯುಕ್ತ ಸಲಹಾ ಸಮಾಲೋಚನಾ
ಕೋವಿದ ಕವಿ ಗಣ ಸಾಹಿತ್ಯ ಜ್ಞಾನ ವಿಜ್ಞಾನ ನ್ಯಾಯ ತರ್ಕ
ಮೀಮಾಂಸ ಸಕಲ ಕಲಾ ಶಾಸ್ತ್ರ ಪರಿಣತ ಪಂಡಿತ ಸಮಾಹಿತ
ದಶ ದಿಕ್ಭೇದನಾ ಸಮರ್ಥ ಚತುರ ಮತಿ ಗೂಢಾಚಾರ ಗಣ
ಅಜೇಯಾರಿಭಯಂಕರ ಭಯಂಕರ ಶಸ್ತ್ರಾಸ್ತ್ರ ಸುಸಜ್ಜಿತ
ಚತುರಂಗ ಸೇನಾಯುಕ್ತ ಸಪ್ತ ವರ್ತುಲಾಭೇದ್ಯ ವಿಷ ದಂಷ್ಟ್ರ
ಮತ್ಸ್ಯಮಕರೋರುಗ ಭಯಂಕರ ಜಲಚರಾವೃತ ಜಲ ಜಲಧಿ
ಪರಿವೃತ ಕೋಟೆ ಕೊತ್ತಲ ವಜ್ರಸದೃಶ ದುರ್ಗಮ ದುರ್ಗದೊಳ್ವಿರಾಜಮಾನನಾಗಿರ್ಪ ರಾಜಾ........
Comments
ಉ: ರಾಜಭೋಗ
In reply to ಉ: ರಾಜಭೋಗ by suryakala
ಉ: ರಾಜಭೋಗ
ಉ: ರಾಜಭೋಗ
In reply to ಉ: ರಾಜಭೋಗ by makara
ಉ: ರಾಜಭೋಗ
ಉ: ರಾಜಭೋಗ
In reply to ಉ: ರಾಜಭೋಗ by raghumuliya
ಉ: ರಾಜಭೋಗ
ಉ: ರಾಜಭೋಗ
In reply to ಉ: ರಾಜಭೋಗ by Sarvesh Kumar M V
ಉ: ರಾಜಭೋಗ