ನೀನುಸಿರಾಡುವ ಪ್ರತಿ ಶ್ವಾಸದಲ್ಲೂ
ಕವನ
ಕಲ್ಲಾಗ ಬಯಸಿದೆ ನಾನು ಏಕೆಂದರೆ
ನಿನ್ನ ಝುಮುಕಿಯಲ್ಲಿ ಹರಳಾಗಿ ನಿನ್ನ
ಕಿವಿಯನ್ನು ಸಿಂಗರಿಸುವ ಆಸೆಯಿಂದ...
ಬೆಳ್ಳಿಯಾಗ ಬಯಸಿದೆ ನಾನು ಏಕೆಂದರೆ
ನಿನ್ನ ಸುಕೋಮಲ ಕಾಲುಗಳಿಗೆ
ಗೆಜ್ಜೆಯಾಗಿ ನಲಿದಾಡುವ ಆಸೆಯಿಂದ...
ರೇಷಿಮೆಯಾಗ ಬಯಸಿದೆ ನಾನು ಏಕೆಂದರೆ
ನೀನುಡುವ ಸೀರೆಯ ಅಂಚಾಗಿ
ನಿನ್ನಂದವ ಹೆಚ್ಚಿಸುವ ಆಸೆಯಿಂದ...
ಕಾಡಿಗೆಯಾಗ ಬಯಸಿದೆ ನಾನು ಏಕೆಂದರೆ
ನಿನ್ನ ಸುಂದರವಾದ ನಯನಗಳ
ಸೌಂದರ್ಯದಲಿ ನಾನೂ ಪಾಲಾಗಲು..
ಮದರಂಗಿಯಾಗ ಬಯಸಿದೆ ನಾನು ಏಕೆಂದರೆ
ನಿನ್ನ ಉಗುರುಗಳ ರಂಗಾಗಿಸುವ
ಕೆಂಪಾಗುವ ಆಸೆಯಿಂದ...
ಗಾಳಿಯಾಗ ಬಯಸಿದೆ ನಾನು ಏಕೆಂದರೆ
ನೀನುಸಿರಾಡುವ ಪ್ರತಿ ಶ್ವಾಸದಲ್ಲೂ
ನಾನಿರುವ ಆಸೆಯಿಂದ
ನಾನೆ ಆಗಿ ಉಳಿಯ ಬಯಸಿದೆ ನಾನು ಏಕೆ0ದರೆ
ನಿನ್ನ ಸದಾ ನೋಡುತ್ತ ನಿನ್ನ ಎದುರಲೆ
ಕುಳಿತಿರುವ ಆಸೆಯಿ0ದ
Comments
ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ
In reply to ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ by neela devi kn
ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ
In reply to ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ by sumangala badami
ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ
In reply to ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ by neela devi kn
ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ
ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ
In reply to ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ by Chikku123
ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ
ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ
In reply to ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ by raghumuliya
ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ
ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ
In reply to ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ by partha1059
ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ
ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ
In reply to ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ by makara
ಉ: ನೀನುಸಿರಾಡುವ ಪ್ರತಿ ಶ್ವಾಸದಲ್ಲೂ