ಕತ್ಲಲ್ಲಿ ಕರಡಿಗೆ ಶೈಲಿಯಲಿ ವಾಕ್ಪಥದ ಬಗ್ಗೆ ಒಂದು ಹಾಡು...

ಕತ್ಲಲ್ಲಿ ಕರಡಿಗೆ ಶೈಲಿಯಲಿ ವಾಕ್ಪಥದ ಬಗ್ಗೆ ಒಂದು ಹಾಡು...

ತಿಂಗ್ಳಲ್ಲಿ ಒಂದ್ಸಾರಿ ವಾಕ್ಪಥದ ಗೋಷ್ಠಿಯಲ್ಲಿ ಎಲ್ಲಾರೂ ಪಾಲ್ಗೊಳ್ಳಿರಿ
ಸ್ನೇಹಿತರ ಕರೆತನ್ನಿ, ಮನೆಯವರ ಕರೆತನ್ನಿ ಎಲ್ಲರೂ ಪಾಲ್ಗೊಳ್ಳಿರಿ
ವಾಕ್ಪಥದ ಗೋಷ್ಟಿಯಲಿ ಚೆಂದಾದ ಭಾಷಣವ
ಮಂಡಿಸುವ ಕಲೆಯನ್ನು ಕಲಿಯೋಣ ಬನ್ನಿರಿ..
... ತಿಂಗ್ಳಲ್ಲಿ ಒಂದ್ಸಾರಿ ಸೇರೋಣರೀ...
ಇನ್ನೊಂದು ತಿಂಗ್ಳಿಗೆ ಕಾಯೋಣರೀ...

ತಿಂಗ್ಳಲ್ಲಿ ಒಂದ್ಸಾರಿ ವಾಕ್ಪಥದ ಗೋಷ್ಠಿಯಲ್ಲಿ ಎಲ್ಲಾರೂ ಪಾಲ್ಗೊಳ್ಳಿರಿ
ಸ್ನೇಹಿತರ ಕರೆತನ್ನಿ, ಮನೆಯವರ ಕರೆತನ್ನಿ ಎಲ್ಲರೂ ಪಾಲ್ಗೊಳ್ಳಿರಿ

ವಾಕ್ಪಥದ ಗೋಷ್ಟಿಯಲಿ ಏನೇನಿದೆ..ಎಲ್ಲರಿಗೂ ತಿಳಿಸುವೆವು ನಾವಿಲ್ಲಿಯೇ
ಭಾಷಣದ ಕಲೆಯು ಎಲ್ಲರಲಿ ಉಂಟು...
ಹರಟೆಯ ಮಾಡ್ಬೋದು ಸಭೆ ಇಲ್ಲದೆ...ಭಾಷಣವು ಆಗಲ್ಲ ಭಯ ಇಲ್ಲದೆ...
ಆ ಭಯವ ತೊರೆದು ವೇದಿಕೆಗೆ ಬಂದು...
ಭಾಷಣವ ಮಾಡೋದು ಹೇಗೆಂದು ಸ್ವಾಮಿ..ನೀವಿಲ್ಲಿ ಕಲಿಬೋದು ಬೇಗನೆ ಸ್ವಾಮಿ..
ಕನ್ನಡಕೆ ಇದರಲ್ಲಿ ಪ್ರಾಮುಖ್ಯತೆ...ಸಮಯಕ್ಕು ಪ್ರಾಧಾನ್ಯ ಇದರಲ್ಲಿದೆ...

ತಿಂಗ್ಳಲ್ಲಿ ಒಂದ್ಸಾರಿ ವಾಕ್ಪಥದ ಗೋಷ್ಠಿಯಲ್ಲಿ ಎಲ್ಲಾರೂ ಪಾಲ್ಗೊಳ್ಳಿರಿ
ಸ್ನೇಹಿತರ ಕರೆತನ್ನಿ, ಮನೆಯವರ ಕರೆತನ್ನಿ ಎಲ್ಲರೂ ಪಾಲ್ಗೊಳ್ಳಿರಿ

ನಿಮ್ಮಲ್ಲಿನ ಕಲೆಯನ್ನು ಉಪಯೋಗಿಸಿ...ಭಾಷಣದ ವಿಷಯವ ಆರಿಸಿಕೊಳ್ಳಿ
ವ್ಯಾಕರಣ ಶುದ್ಧಿ ನಡೆಯುವುದು ಇಲ್ಲಿ...
ಹಲವಾರು ವಿಷಯಗಳು ಸಿಗುವುದಿಲ್ಲಿ...ಹಲವಾರು ಚರ್ಚೆಗಳು ನಡೆಯುವುದಿಲ್ಲಿ
ಸಮಯಕ್ಕೆ ಸರಿಯಾಗಿ ಬರ್ಬೇಕು ಕಣ್ರೀ...
ನಾಯಕನ ಗುಣಗಳ ಕಲಿಬೋದು ಇಲ್ಲಿ...ಭಾಷೆಯ ಮೇಲೆ ಹಿಡಿತವ ಕಲಿಬೋದು ಇಲ್ಲಿ...
ವಾಕ್ಪಥಕೆ ನೀವೊಮ್ಮೆ ಬಂದು ನೋಡಿ...ನಿಮ್ಮಲ್ಲಿನ ವಾಗ್ಮಿಯನು ಹೊರತನ್ನಿರಿ...

ತಿಂಗ್ಳಲ್ಲಿ ಒಂದ್ಸಾರಿ ವಾಕ್ಪಥದ ಗೋಷ್ಠಿಯಲ್ಲಿ ಎಲ್ಲಾರೂ ಪಾಲ್ಗೊಳ್ಳಿರಿ
ಬಾಕಿ ಸಮಾಚಾರ್ ಬ್ಲಾಗಲ್ಲಿ ಓದ್ಕೊಂಡು ಗೋಷ್ಟಿಯಲಿ ಪಾಲ್ಗೊಳ್ಳಿರಿ....

Rating
No votes yet

Comments