ಗ0ಗಾವತರಣ ....
ದಶದಿಕ್ಕುಗಳೊಡಲಸೀಳುವ ಪರಿ ಧರಣಿಯನುರವಣಿಸುವ ಪರಿ
ಚಂಡವೇಗಿನಿ ಗಂಗ ಪ್ರಚಂಡ ಪ್ರಳಯರೂಪಿಣಿ ಗಂಗ
ಗಂಗಾವತರಣದಾರ್ಭಟದ ಗುಡಿಗಿಗೆ ನಡುಗಿದಾ ಮೇದಿನಿಯ
ವೇದನಾ ನಿವೇದನ ಧರಣಿಗಭಯ ಪ್ರದಾನ ಶಿವಸಾಂತ್ವನ
ಪ್ರಳಯ ರುದ್ರ ತಾಂಡವ ನರ್ತನ ಸುರಾಸುರ ಮುನಿ ಜನ ನಮನ
ಶಿವ ಜಟಾಜೂಟ ವಿಸ್ತ್ರುತ ವಿಶಾಲ ವಿಭ್ರಮಾದ್ಭುತ ಮಾಯಾ ಜಟಾ
ಜಾಲಾಕ್ಷಯ ಪಸರಿತ ತರಂಗದೊಳ್ ರಭಸದಿಂ ಧುಮಧುಮಿಸಿ
ಧುಮಗುಡುತ ಪ್ರಕ್ಷುಭ್ದ ಪ್ರಳಯ ವಿಪ್ಲವ ಪ್ರಚಂಡ
ಪ್ರಚಂಡ ಚಂಡವೇಗಿನಿ ಗಂಗ ಘನಗರ್ವಾಟೋಪದೊಳಪ್ಪಳಿಸಿದಳ್ ಶಿವ
ಶಿರಸಿಗೆರಗಿದಳ್ಕಡುದರ್ಪದಿಂದಾರ್ಭಟದೊಳೆತ್ತತ್ತತ್ತೊತ್ತರಿಸುವುಳತ್ತತ್ತ
ವಿಸ್ತರಿತ ಜಟಾಜಾಲ ರಂಗ ಸುರಂಗ ಗರ್ವಿತ ಗಂಗ ಬಲಾಪಕರ್ಷಕ ಜಟಾ ತರಂಗಾಂತರ ಜಾಲ
ಶಿವಶಿಖಾ ಮಾಯಾ ಜಾಲ ವಿಲಾಸದೊಳುರುಳುರುಳತಳುತೇಳುತತೆವಳುತಳುತ
ಕಂಗೆಟ್ಟು ಬಸವಳಿದಳಬಲೆ ನಿಶ್ಚಲೆಯಾಗಿ ನಿಟ್ಟುಸಿರ ಬಿಡುತ ಶೀತಾಂಶ ಸಂಭೂತೆ
ಶಿವ ಕುಟಿಲ ಕುಂತಳ ಮೃದು ಮಧುರ ಸ್ಪರ್ಶ ಸುಖಾನಂದ ತುಂದುಲಿತ
ಸರ್ವಾಂಗ ಸುಂದರಿ ಸುರ ಕನ್ನಿಕಾ ಗಂಗ ಶಿವ ಪ್ರೇಮಾಂಕುರ ಶಿವ ಕಟಾಕ್ಷಾಪೇಕ್ಷಿತೆ
ವಿನಮ್ರ ವಿನೀತ ಗಂಗಾ ಪ್ರೇಮದುಲಿಗೊಲಿದ ಮದನಾರಿ ಪುರಹರ
ಮಂದಹಾಸದಿಂದುಶೇಖರ ಗಂಗಾ ಅಧರಪ್ರಿಯ ಗಂಗಾಧರ ಹರಸಲೆಮ್ಮನನವರತ.
Comments
ಉ: ಗ0ಗಾವತರಣ ....
In reply to ಉ: ಗ0ಗಾವತರಣ .... by raghumuliya
ಉ: ಗ0ಗಾವತರಣ ....