ಚಲೋ ಮಲ್ಲೇಶ್ವರ ೧೯

ಚಲೋ ಮಲ್ಲೇಶ್ವರ ೧೯

ಹೆಲಿಕಾಫ್ಟರ್ ಆಕಾಶದಲ್ಲಿ ನಾಲ್ಕು ಸುತ್ತು ಹೊಡೆದು, ರಾಮಮೋಹನರ ಕಾರಿನ ಬಳಿ ಇಳಿಯಿತು. ಹೆಲಿಕಾಫ್ಟರ್ ಆಕಾಶದಲ್ಲಿರುವಾಗಲೇ ಚೇತನ್ ದುರ್ಬಿನ್‌ನಲ್ಲಿ ನೋಡಿ "ಅದು ನಮ್ಮ ಮಲ್ಯರು!!" ಅಂದನು.


ಮಂಜಣ್ಣ : "ಓಓಓ, ಸಿ.ಡಿ. ಮಲ್ಯನಾ? ಇಲ್ಲಿಗ್ಯಾಕೆ ಬಂದಾ!? ಸರ್ಕಲ್ ಮಾರಮ್ಮನ ದರ್ಶನಕ್ಕಿರಬಹುದೇ?"


ರಾಮಮೋಹನ : ಮೈದಾನದಲ್ಲಿ ಬೇಕಾದಷ್ಟು ಸ್ಥಳವಿರುವಾಗ ನನ್ನ ಕಾರಿನ ಬಳಿಯೇ ಯಾಕೆ ನಿಲ್ಲಿಸಿದ್ದು? ಎಲ್ಲಾದರೂ ತಾಗಿರುತ್ತಿದ್ದರೆ? ಈಗ ಮಲ್ಯ ಸಿ.ಡಿ. ವ್ಯಾಪಾರ ಬೇರೆ ಮಾಡುತ್ತಾರಾ?


ಮಂಜಣ್ಣ : ಇಲ್ರೀ.. ಸಿ.ಡಿ. ಅಂದರೆ ಚಡ್ಡಿದೋಸ್ತ್ ಅಂತಾ..


ಆ ಸಮಯದಲ್ಲಿ ಹೆಲಿಕಾಫ್ಟರ್‌ನಿಂದ ಮಲ್ಯ ಇಳಿದರು. ಮಂಜಣ್ಣ ತಮ್ಮ ಸಿ.ಡಿ. ಬಳಿ ಹೋಗಿ "ಹಲೋ ಸಿ.ಡಿ.,ಏನು ಇಲ್ಲಿ?" ಅಂದರು. "ಏನಿಲ್ಲಾ. ಅಂಡಾಂಡ ಭಂಡ ಸ್ವಾಮಿಯವರನ್ನು ಭೇಟಿಯಾಗಬೇಕಿತ್ತು. ಇಲ್ಲಿದ್ದಾರೆಂದು ನ್ಯೂಸ್ ಬಂತು. ಹಾಗೇ.."


ಮಂಜಣ್ಣ : "ಅಯ್ಯೋ..ಅವರಾ.. ಡೋಂಗಿ ಸ್ವಾಮಿ ಕಣೋ. ನನ್ನ ಫ್ರೆಂಡೇ, ಬೇಕಿದ್ದರೆ ಇಲ್ಲಿಗೇ ಕರೆಸುವೆ."


ಮಲ್ಯ : ಡೋಂಗೀನಾ!? ಇನ್ಯಾಕೆ ಕರೆಸುವೆ. ಏನಿಲ್ಲಾ..ಫಾರ್ಮುಲಾ ಒನ್ ರೇಸಲ್ಲಿ ನಮ್ಮ ಫೋರ್ಸ್ ಇಂಡಿಯಾ ಕಾರು ಗೆಲ್ಲುವಂತೆ, ಆ ವೆಟ್ಟೆಲ್, ಬಟನ್, ಅಲಾಂಸೊ ಸೋಲುವಂತೆ ಮಾಟ ಮಂತ್ರ ಏನಾದರೂ ಮಾಡಲಾದೀತಾ ಅಂತ.


ಮಂಜಣ್ಣ : ಮಾಟಮಂತ್ರ ಎಕ್ಸ್‌ಪರ್ಟ್ ಈಗ ನಮ್ಮ ಜತೆನೇ ಇದ್ದಾರೆ. ನಿಮಗೆ ಪರಿಚಯ ಮಾಡಿಸುವೆ.


ಮಂಜಣ್ಣ, ಮಲ್ಯರನ್ನು ಚಲೋಮಲ್ಲೇಶ್ವರ ಟೀಮಿನ ಬಳಿ ಕರಕೊಂಡು ಬಂದರು. ಎಲ್ಲರನ್ನೂ ಪರಿಚಯಿಸುತ್ತಾ ಬಂದು ಪಾರ್ಥರ ಬಳಿ ಬಂದು "ಇವರೇ ನೋಡಿ ಎಕ್ಸ್‌ಪರ್ಟ್, ತಿಂಗಳಿಗೊಂದು ದೆವ್ವವನ್ನು ಎಲ್ಲಿಂದಾದರೂ ತರುವರು."ಅಂದರು. ಮಂಜಣ್ಣನ ಕಡೆ ಗುರ್ರಾಯಿಸಿ ಪಾರ್ಥರು ಮಲ್ಯರನ್ನು ನಿಮ್ಮ ಸಮಸ್ಯೆಯೇನು ತಿಳಿಸಿ ಎಂದರು.


ಮಲ್ಯ : "ನೋಡಿ. ಟಿ.೨೦ ಕ್ರಿಕೆಟ್‌ನಲ್ಲಿ ನನ್ನ ಟೀಮು ಕೊನೇ ಪಕ್ಷ ೨-೩ನೇ ಸ್ಥಾನವಾದರೂ ಗೆಲ್ಲುತ್ತಿದೆ. ನಮ್ಮ ದೇಶ ಯಾವುದಕ್ಕೂ ಕಮ್ಮಿಯಲ್ಲ ಎಂದು ತೋರಿಸಲು ಫೋರ್ಸ್ ಇಂಡಿಯಾ ಟೀಮು ಮಾಡಿದೆ. ವಿದೇಶೀ ಡ್ರೈವರ್‌ಗಳನ್ನೇ ಇರಿಸಿದೆ. ಆದರೂ ಒಮ್ಮೆಯೂ ಗೆದ್ದಿಲ್ಲ. ಈಗ ನಮ್ಮ ದೇಶದಲ್ಲಿಯೇ ನಡೆಯುತ್ತಿದೆ. ಪ್ರೆಸ್ಟೀಜ್ ಪ್ರಶ್ನೆ. ಹೇಗಾದರೂ ಗೆಲ್ಲಲೇಬೇಕು.


ಕೂಡಲೇ ಚಿಕ್ಕು ಮಲ್ಯರ ಬಳಿಬಂದು ನಿಂತು, ತನ್ನ ದುರ್ಬೀನನ್ನು ತಿರುಗಿಸಿ ಮೈಕ್‌ನಂತೆ ಹಿಡಿದು- "ಭಾರತದಲ್ಲಿ ಡ್ರೈವರ್‌ಗಳಿಗೇನು ಕೊರತೆಯಾ? ರೋಡೇ ಇಲ್ಲದ ರೋಡಲ್ಲಿ ನೂರಾರು ಕಿ.ಮೀ. ವೇಗದಲ್ಲಿ ಹೋಗುವವರಿಗೆ, ಈ ಫಾರ್ಮುಲಾ ಒನ್ ರೇಸ್ ಯಾವ ಲೆಕ್ಕ?.....


 


ಎರಡು ನಿಮಿಷವಾದ ಕೂಡಲೇ ಚಿಕ್ಕುವಿನಿಂದ ಮೈಕ್ ಕಿತ್ತುಕೊಂಡ ಜಯ್ " ನಮ್ಮ ದೇಶದ ಪ್ರಶ್ನೆಯಾದುದರಿಂದ ನಾವು ಯಾವುದೇ ತ್ಯಾಗಕ್ಕೂ ಸಿದ್ಧವಿದ್ದೇವೆ. ಹಿಂದೆ ಭಗತ್ ಸಿಂಗ್......


......ಬಾರತ್ ಮಾತಾ ಕಿ ಜೈ............ಜೈ........"


ಪಾರ್ಥರು ಎದ್ದು ನಿಂತು "ಜಯ್ ಮತ್ತು ಚಿಕ್ಕು ತಮಗೆ ಒದಗಿಸಿದ ಸಮಯದಲ್ಲಿ ಚಿಕ್ಕದಾಗಿ ಚೊಕ್ಕದಾಗಿ ಮಾತನಾಡಿದರು. ಆದರೆ ಮಲ್ಯರ ಕನ್ನಡ ಬಹಳಷ್ಟು ಸುಧಾರಿಸಬೇಕು....."


ಕೂಡಲೇ ಎದ್ದ ಗೋಪಾಲರು ಪಾರ್ಥರ ಕೈಯಿಂದ ದುರ್ಬೀನನ್ನು ಕಸಿದು ಕಿಸೆಯಲ್ಲಿ ಇಟ್ಟುಕೊಂಡು, "ಮಲ್ಯರೆ, ಈಗ ನಮ್ಮೆಲ್ಲರ ಗುರಿ ಫಾರ್ಮುಲಾ ಒನ್ ಗೆಲ್ಲುವುದು. ಚಿಂತಿಸಬೇಡಿ.


ನೀವು ನಿಮ್ಮ ಬಳಿ ಇರುವ ಫೋರ್ಸ್ ಇಂಡಿಯಾ ಕಾರುಗಳಲ್ಲಿ ಒಂದನ್ನು ನಮಗೆ ಕೊಡಿ. ಉಳಿದಂತೆ ರೇಸು ಗೆಲ್ಲಿಸಿಕೊಡುವುದು ನಮಗೆ ಬಿಡಿ." ಅಂದರು.


"ಅದಕ್ಕೇನಂತೆ.. ನಾನು ಈಗಲೇ ಹೋಗಿ ಹೆಲಿಕಾಫ್ಟರಲ್ಲಿ ಕಳುಹಿಸುವೆ" ಎಂದ ಮಲ್ಯರು ಎಲ್ಲರಿಗೂ ಬೈ ಹೇಳಿ ಹೆಲಿಕಾಫ್ಟರ್ ಹತ್ತಿದರು.


"ಏನು ಗೋಪಾಲರೆ? ಫೋರ್ಸ್ ಇಂಡಿಯಾ ಕಾರೆಂದರೆ ನ್ಯಾನೋ ಕಾರು ಅಂತ ತಿಳಿದಿರಾ ಹೇಗೆ? ನಿಮಗೆ ಡ್ರೈವಿಂಗ್ ಬರುತ್ತಾ?" ಎಂದರು ಮಂಜಣ್ಣ.


"ನಾನೆಲ್ಲಿ ಕಾರು ಬಿಡುವೆ.." ಎಂದು ಹೇಳಿದ ಗೋಪಾಲರು, ಪಾರ್ಥರನ್ನು ಬಳಿ ಕರೆದು ಕಿವಿಯಲ್ಲಿ ಏನೋ ಹೇಳಿದರು. ಪಾರ್ಥರು ರಾಮಮೋಹನರ ಜತೆ ಸ್ಯಾಂಕೀ ಟ್ಯಾಂಕ್ ಪಾರ್ಕ್ ಕಡೆ ಯಾವುದೋ ದೆವ್ವದ ಕತೆ ಹೇಳಿಕೊಂಡು ಹೋದರು. ಆ ಸಮಯದಲ್ಲೇ ಫೋರ್ಸ್ ಇಂಡಿಯಾ ಕಾರನ್ನು ಹೆಲಿಕಾಫ್ಟರ್ ತಂದು ಇಳಿಸಿ ಹೋಯಿತು. ಉಳಿದವರನ್ನು ಹತ್ತಿರ ಕರೆದು ಗೋಪಾಲರು ಅವರ ಪ್ಲಾನ್ ಹೇಳಿದರು. ಎಲ್ಲರಿಗೂ ಒಪ್ಪಿಗೆಯಾಯಿತು. ಪ್ಲಾನ್ ಪ್ರಕಾರ ಸುತ್ತು ಹೊಡೆಯುವುದರಲ್ಲಿ ಪ್ರವೀಣನಾದ ಜಯ್ ಕಾರು ಡ್ರೈವ್ ಮಾಡುವುದು. ಖುಷಿಯಲ್ಲೇ ಒಪ್ಪಿದ ಜಯಂತ್ " ಒಂದು ಕಂಡೀಷನ್..ಏನಿಲ್ಲಾ, ನಾನೊಮ್ಮೆ ತಿರುಪತಿಗೆ ಹೋಗಿ ದೇವರನ್ನು ಬೇಡಿಕೊಂಡು ಬರುವೆ" ಅಂದ.


"ನೀನಲ್ಲಿ ೧೦೮ ಸುತ್ತು ಹೊಡೆದಾಗುವಾಗ ಇಲ್ಲಿ ಫಾರ್ಮುಲಾ ರೇಸ್ ಕಾರುಗಳು ರೇಸ್ ಮುಗಿಸಿ ದೇಶ ಬಿಟ್ಟು ಹೋಗಿಯಾಗಿರುತ್ತದೆ. ಇಲ್ಲೇ ೧೭ನೇ ಕ್ರಾಸ್‌ನಲ್ಲಿ ತಿರುಪತಿ ವೆಂಕಟ್ರಮಣ ದೇವಸ್ಥಾನವಿದೆ. ಅಲ್ಲಿ ಹೋಗಿ ಬರೀ ಒಂದು ಸುತ್ತು ಹಾಕಿ ದೇವರನ್ನು ಬೇಡಿಕೊಂಡು ಬೇಗ ಬಾ" ಅಂದ ಚಿಕ್ಕು.


ಜಯ್ ಹೊರಟ ಮೇಲೆ " ಈಗ ಕತ್ತಲಾಗಿದೆ. ನಾಳೆ ಬೆಳಗ್ಗೆ ಬಂದು ಕೆಲಸ ಮುಂದುವರೆಸುವಾ" ಎಂದ ಸತೀಶ್. " ಈಗ ಟೈಮಿಲ್ಲ. ಹಗಲು-ರಾತ್ರಿ ಎನ್ನದೇ ಕೆಲಸ ನಡೆಯಬೇಕು. ಯಾರೂ ಎಲ್ಲೂ ಹೋಗಲಿಕ್ಕಿಲ್ಲ." ಎಂದ ಗೋಪಾಲರು ಮಾರಮ್ಮನಿಗೆ ಅಲ್ಲಿಂದಲೇ ನಮಸ್ಕರಿಸಿ ರಾಮಮೋಹನರ ಕಾರಿನ ಕಡೆ ಹೊರಟರು. ಅವರು ಮತ್ತು ಸತೀಶ್ ಸೇರಿ ರಾಮಮೋಹನರ ಕಾರು ಕಳಚಿದರು. ಈ ಕಡೆ ಚಿಕ್ಕು ಮತ್ತು ಶ್ರೀಧರ್( ಇವರು ಯಾವಾಗ ಇಲ್ಲಿಗೆ ಬಂದ್ರು ಗೊತ್ತಿಲ್ಲ) ಸೇರಿ ಫೋರ್ಸ್ ಇಂಡಿಯಾ ಕಾರು ಬಿಚ್ಚಿಟ್ಟರು. ಕತ್ತಲಾಗಿದ್ದರೂ ಮಂಜಣ್ಣ ಒಂದರ ಹಿಂದೆ ಒಂದು ಸೇದುತ್ತಿದ್ದ ಸಿಗರೇಟು ಬೆಳಕಲ್ಲಿ ಕೆಲಸ ನಡೆಯುತ್ತಿತ್ತು. ಒಂದು ಗಂಟೆಯೊಳಗೆ ಕಾರು ಅದಲುಬದಲಾಗಿ ರೆಡಿಯಾಯಿತು. ಮಂಜಣ್ಣ ಸಾಬರಿಗೆ ಫೋನ್ ಮಾಡಿ ಮನೆಯಲ್ಲಿ ಫ್ರಿಡ್ಜಲ್ಲಿಟ್ಟಿರುವ ಆರ್ಸಿ ಬಾಟಲುಗಳನ್ನೆಲ್ಲಾ ತರಿಸಿದ್ದರು. ಫೋರ್ಸ್ ಇಂಡಿಯಾ ಕಾರಿಗೆ (ಅಂದರೆ ರಾಮಮೋಹನರ ಹಳೇ ಕಾರು) ತುಂಬಿಸಿ "ಟ್ರಯಲ್ ಓಡಿಸಿ ನೋಡೋಣವಾ" ಅಂದರು. ಸತೀಶ್ ಜಂಪ್ ಮಾಡಿ ಕಾರೊಳಗೆ ಕುಳಿತು ಹೋಗಿಯೇ ಬಿಟ್ಟರು. ಆ ಸಮಯಕ್ಕೆ ಪಾರ್ಥರು ಮತ್ತು ನಡುಗುತ್ತಿರುವ( ಚಳಿಗೋ,ದೆವ್ವದ ಕತೆಗೋ) ರಾಮಮೋಹನರು ಬಂದರು.ತಮ್ಮ ಕಾರು ಸೇಫ್ ಆಗಿರುವುದು ನೋಡಿ ರಾಮಮೋಹನರಿಗೆ ಸಮಾಧಾನವಾಯಿತು.ದೇವರ ಪ್ರಸಾದದೊಂದಿಗೆ ಜಯ್ ಬಂದನು. ಸತೀಶ್ ಸಹ ಇಪ್ಪತ್ತು ನಿಮಿಶದೊಳಗೆ ಬಂದನು. "ಏನಪ್ಪಾ, ಟ್ರಯಲ್ ನೋಡು ಅಂದರೆ, ತುಮಕೂರಿಗೆ ಹೋಗಿ ಬಂದ್ಯಾ?" ಅಂದರು ಮಂಜಣ್ಣ.


"ಇಲ್ಲಾ ಮಂಜಣ್ಣಾ, ಕಾರು ಎಷ್ಟು ಚೆನ್ನಾಗಿದೆ ಎಂದರೆ ತುಮಕೂರಿನಲ್ಲಿ ಮನೆಹತ್ತಿರ ನಿಲ್ಲಿಸಲು ಮನಸ್ಸಾಗದೇ, ಹಾಗೇ ಹಾಸನಕ್ಕೆ ಹೋಗಿ ಬಂದೆ!" ಅಂದ. ಕೇಳಿ ಎಚ್ಚರ ತಪ್ಪಿ ಬಿದ್ದ ಮಂಜಣ್ಣನವರನ್ನು ಆರ್ಸಿ ಸಿಂಪಡಿಸಿ ಎಬ್ಬಿಸಲಾಯಿತು.


ಕಾರು ರೆಡಿಯಾಗಿದೆ..


ಡ್ರೈವರ್ ಫುಲ್ ಜೋಶ್‌ ಅಲ್ಲಿದ್ದಾನೆ..


ಸಾರಿ ಗೆಳೆಯರೆ, ಇದೀಗ ಬಂದ ಸುದ್ದಿಯಂತೆ-


ಮಲ್ಯರು ಸಹಾರಾ ಜತೆ ಕೈಜೋಡಿಸಿ ಚಲೋ ಮಲ್ಲೇಶ್ವರ ಟೀಮಿಗೆ ಕೈಕೊಟ್ಟರು. ಗೆಲ್ಲುವ ಒಂದು ಅವಕಾಶ ಕಳಕೊಂಡರು. ಪುನಃ ರಾತ್ರಿಯಿಡೀ ಕುಳಿತು ಕಾರನ್ನು ಅದಲುಬದಲು ಮಾಡಲಾಯಿತು.


 

Rating
No votes yet

Comments