ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
೨೨ ಸೆಪ್ಟೆಂಬರ್, ೨೦೧೧ ನನ್ನ ಸ್ನೇಹಿತನಿಂದ ಒಂದು ವಾಣಿಜ್ಯ-ಸಮಾಲೋಚನೆಗಾಗಿ ಕರೆಬಂದಾಗ, ಅದು ೨೪ರ ಸೆಪ್ಟೆಂಬರ‍್ಗೆ ನಿಗದಿಯಾಯಿತು. ೨೫ನೇ ಭಾನುವಾರ ಚುಂಚನಗಿರಿಯಲ್ಲಿ ನಡೆಯಲಿರೋ ಕಾರ್ಯಕ್ರಮಕ್ಕೆ ಇನ್ನೊಬ್ಬ ಸ್ನೇಹಿತನಿಂದ ಬಂದ ಕರೆಗೆ ತುಂಬು ಆಸಕ್ತಿಯಿಂದಲೇ ಒಪ್ಪಿಗೆ ಇತ್ತಾಗಿತ್ತು. ೨೪ರ ಬೆಳಿಗ್ಗೆ ನಾ ಬೆಂಗಳೂರಿಗೆ ಬಂದಿಳಿದು, ಮಧ್ಯಾಹ್ನದ ಸಮಾಲೋಚನೆಯ ತಯ್ಯಾರಿಯಲ್ಲಿದ್ದಾಗ, ತಲೆ ಇನ್ನೇನೋ ಯೋಚಿಸಲಾರಂಭಿಸಿತ್ತು. ಮನಸ್ಸು ಹೊಯ್ದಾಡುತ್ತಾ, ಗೊಣಗುತಿತ್ತು.. ಸದ್ಯದಲ್ಲೆಲ್ಲೋ, ವಾಕ್ಪಥ ಕಾರ್ಯಕ್ರಮ ಇದೆ, ಎಂಬುದಾಗಿ. ಮನಸ್ಸಿನೊತ್ತಡ ತಡೆಯಲಾರದೇ, ಫೇಸ್‌ಬುಕ್‌ನ "ಇವೆಂಟ್ಸ್" ತೆರೆದು ನೋಡಿದಾಗ, ಆಶ್ಚರ್ಯ, ಆಘಾತ, ಸಂತೋಷ, ಎಲ್ಲಾ ಒಟ್ಟೊಟ್ಟಿಗೆ..! ನನ್ನ ಮನಸ್ಸಿನ ಹೊಳಹಿನಂತೆ ನಂತರದ ದಿನವೇ (೨೫/೦೯/೨೦೧೧) ವಾಕ್ಪಥದ "ಏಳನೇ ಹೆಜ್ಜೆ". ಈ ವಿಚಾರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಯಾವಾಗಲೂ ಕಾಯುತ್ತಿದ್ದ ಈ ವಿಶೇಷ ಕಾರ್ಯಕ್ರಮ ಅಚಾನಕ್ಕಾಗಿ ನನ್ನ ಮುಂದೆ ತೆರೆದುಕೊಂಡಿದ್ದು, ನಿಜಕ್ಕೂ ನನಗೆ ಸಂತೋಷದೊಂದಿಗೆ ಅಚ್ಚರಿಗೊಳಿಸಿತ್ತು. ಆದರೆ ನನ್ನ ಸ್ನೇಹಿತನಿಗೆ ಚುಂಚನಗಿರಿಯ ಕಾರ್ಯಕ್ರಮಕ್ಕೆ ಬರುವೆ ಅಂದದ್ದು, ವಾಕ್ಪಥದಲ್ಲಿ ಭಾಗವಹಿಸಲು ಅಡ್ಡಿಮಾಡುತ್ತಲ್ಲಾ ಎಂಬ ಆಘಾತಕ್ಕೆ ಕಾರಣವಾಯಿತು.
ಆದರೆ, ವಾಕ್ಪಥಕ್ಕೆ ಹೆಚ್ಚಿನ ಮಹತ್ವ ನನ್ನೆಡೆ ಇದ್ದದಾದ್ದರಿಂದ, ಈ ಅವಕಾಶ ಬಿಡಬಾರದು, ಇದು ಎಷ್ಟೋ ತಿಂಗಳ ಕಾಯುವಿಕೆಯ ಫಲ, ಮತ್ತೆ ಸಿಗುವ ಅವಕಾಶ ಅನಿಶ್ಚಿತ ಎಂದೆಲ್ಲಾ ಅನಿಸಿದಾಗ, ಅದು ನನ್ನನ್ನ ನನ್ನ ಸ್ನೇಹಿತನಿಗೆ ಮತ್ತೆ ಫೋನಾಯಿಸಿ, ನನ್ನ ಪೂರ್ವನಿರ್ಧಾರಿತ ಕಾರ್ಯಕ್ರಮವನ್ನ ಬದಲಾಯಿಸುವಂತೆ ಒತ್ತಾಯಿಸಲಾರಂಭಿಸಿತ್ತು. ನನ್ನ ಸ್ನೇಹಿತನಿಗೆ ಫೋನಾಯಿಸಿ, ವಾಕ್ಪಥ ಅಂದರೆ ಏನು, ಅದರ ಉದ್ದೇಶ ಏನು ಅಂತ ವಿವರಿಸಿ, ಹಿಂದೆ ನಿರ್ಧರಿಸಿದಂತೆ ಅವನು ಕರೆ ನೀಡಿದ್ದ ಕಾರ್ಯಕ್ರಮಕ್ಕೆ ಬರದೇ ಇರುತಿರುವುದಕ್ಕಾಗಿ ಕ್ಷಮೆ ಕೇಳಲು ಹೊರಟಾಗ ಅವನಿಂದ ಬಂದ ಪ್ರತಿಕ್ರಿಯೆ, ಪೂರ್ಣ ಕಾರ್ಯಕ್ರಮವನ್ನ ಹೇಗಾದರೂ ಸಾಧ್ಯವಾದ ರೀತಿಯಲ್ಲಿ ದಾಖಲಿಸಿಕೊಂಡು(ರೆಕಾರ್ಡ್) ಬರಬೇಕೆಂಬುದಾಗಿತ್ತು. ಒಪ್ಪಿಗೆ ನೀಡಿದ ನಾನು ಅದಕ್ಕೆ ಬೇಕಾದ ಸಿದ್ಧತೆಯೊಂದಿಗೆ ನನ್ನ ಇನ್ನೊಬ್ಬ ಸ್ನೇಹಿತನನ್ನೂ ನನ್ನ ಅನುಕೂಲತೆಗಾಗಿ, ಒತ್ತಾಯಪೂರ್ವಕವಾಗಿ ಕರೆದೊಯ್ದೆ, ಅವನ ಲ್ಯಾಪ್‌ಟಾಪ್‌ನೊಂದಿಗೆ. ಸಮಯಕ್ಕೆ ಸರಿಯಾಗಿ ತಲುಪಿ ನನ್ನ ಸಿದ್ಧತೆಗಳೊಂದಿಗೆ, ಅವರ ಸಿದ್ಧತೆಗಳನ್ನ ಸೇರಿಕೊಂಡಾಗ, ವಾಕ್ಪಥ ತನ್ನ ಏಳನೇ ಹೆಜ್ಜೆಗೆ ಕಾಲಿಟ್ಟಿತ್ತು.
ಲೇಖನ ಬರದೇ ಎಷ್ಟೋ ದಿನಗಳಾಗಿದ್ದ ನನ್ನನ್ನು, ಸುಮ್ಮನೆ ಅಥವಾ ಇತರೇ ಕಾರಣಗಳನ್ನ ಕೊಟ್ಟು ಬರೆಯೋದನ್ನ ಮುಂದೂಡುತಿದ್ದ ನನ್ನನ್ನು ಬರೆಯಲೇಬೇಕೆಂದು ಒತ್ತಾಯಿಸಿದ ಈ ವಾಕ್ಪಥದಲ್ಲಿ ಅಂತಹ ವಿಶೇಷವೇನಿದೆ ಅನ್ನೋದನ್ನ ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕಿದೆ. ವಾಕ್ಪಥ ಏನು ಎಂತು ಎಂಬ ಒಂದು ಸೂಕ್ಷ್ಮ ಹಾಗೂ ಸ್ಥೂಲ ಪರಿಚಯ ಅಧಿಕೃತವಾಗಿ ಅದನ್ನ ನಡೆಸುವವರಿಂದ ಪರಿಚಯ ಮಾಡಿಸಿಕೊಡಲು ಪ್ರಯತ್ನಿಸುವೆ. ಆದರೆ, ಅದರ ನಿಜವಾದ ಅನುಭವ ನನಗೆ ಅದರಲ್ಲಿ ಭಾಗವಹಿಸಿದಾಗಲೇ ವೇದ್ಯವಾದದ್ದು. ಕುರುಡು ಹುಡುಗನ ಹಾಲಿನ ಅನುಭವ ನಿಮ್ಮ ಮುಂದೆ ಹೇಳಿ ಮುಂದೆ ಸಾಗಿದಲ್ಲಿ ಆಗಬಹುದು ಎಂದು ಅನ್ನಿಸುತ್ತಿದೆ. ಹುಡುಗ ತನ್ನ ಕಣ್ಣುಕಾಣುವ ಅಪ್ಪನಿಗೆ ಮುಗ್ಧತೆಯಲ್ಲಿ ಒಂದಿನ ಕೇಳಿದ, "ಅಪ್ಪಾ ಹಾಲು ಹೇಗಿರುತ್ತೇ?" ಅಪ್ಪನ ಉತ್ತರ "ಅದಾ ಬೆಳ್ಳಗಿರುತ್ತಪ್ಪಾ..!" ಹುಡುಗ ಮಂದುವರೆದ "ಅಪ್ಪಾ, ಬೆಳ್ಳಗೆ ಅಂದ್ರೆ ಹೆಂಗಿರುತ್ತಪ್ಪಾ?" ಅಪ್ಪ ಹೇಳಿದ, "ಮ್... ಮ್... ಬೆಳ್ಳಗೆ ಅಂದ್ರೆ, ಬೆಳ್ಳಗೆ ಅಂದ್ರೆ..." ಆಕಾಶ ನೋಡಿದವನೇ, "ಮೋಡ ಇದ್ದ ಹಾಗೆ ಇರುತ್ತಪ್ಪಾ". ಮತ್ತೆ ಹುಡುಗ ಮುಂದುವರೆದ " ಮೋಡ ಹೇಗಿರುತ್ತಪ್ಪಾ?" ಅಷ್ಟೊತ್ತಿಗೆ ಅಲ್ಲಿ ಹಾರಿ ಬಂದ ಬೆಳ್ಳನೆ ಕೊಕ್ಕರೆಯಿಂದಾಗಿ, ಅಪ್ಪ ಹೇಳಿದ "ಕೊಕ್ಕರೆಯ ಹಾಗೆ ಇರುತ್ತಪ್ಪಾ" ಹುಡುಗ ಮತ್ತೆ ಕೇಳಿದ "ಕೊಕ್ಕರೆ ಹೇಗಿರುತ್ತಪ್ಪಾ?" ಬಹುಷ: ಆಗ ಅಪ್ಪನಿಗೆ ಜ್ಞಾನೋದಯವಾದಂತೆ ತೋರುತ್ತದೆ, ಹೇಳುತ್ತಾನೆ, "ನೋಡು, ಈ ಕೈ ಮುಟ್ಟಿ ನೋಡು, ಹೀಗಿರುತ್ತೆ ಕೊಕ್ಕರೆ" ಅಂತನ್ನುತ್ತಾ, ತನ್ನ ಕೈಯನ್ನ ಕೊಕ್ಕರೆಯಾಕಾರಕ್ಕೆ ತಂದುಕೊಂಡ. ಕುರುಡು ಹುಡುಗ, ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಮುಟ್ಟಿನೋಡುತ್ತಾ, ತನ್ನ ಅನುಭವಕ್ಕೆ ಆ ಕೊಕ್ಕರೆಯನ್ನ ಸಂಪೂರ್ಣ ಅನುಭವಕ್ಕೆ ತಂದುಕೊಳ್ಳುತ್ತಿದ್ದಂತೆ, ಜೋರಾಗಿ ಕಿರುಚಿಕೊಂಡ, "ಅಯ್ಯಯ್ಯಪ್ಪಾ..!, ನಾನು ಹಾಲು ಕುಡಿಯಲ್ಲಪ್ಪಾ...! ಹೀಗೆ, ಈ ತರದಲ್ಲಿ ಅಂಕುಡೊಂಕು ಇದ್ದಲ್ಲಿ ಆ ಹಾಲು ನನ್ನ ಗಂಟಲಿನಿಂದ ಹೊಟ್ಟೆಗೆ ಇಳಿಯೋದು ಹೇಗೆ?"
ಬಹುಷಃ ನಮ್ಮ ಬಹುತೇಕರ ಕತೆ ವಾಕ್ಪಥದ ಬಗ್ಗೆ ಹೀಗೆ ಆಗಿದೆಯೋ ಎನೋ; ನನ್ನದಂತೂ ಅದೇ ಆಗಿತ್ತು ಎಂದು ನನಗನ್ನಿಸಿದ್ದು ವಾಕ್ಪಥ ೭ನೇ ಹೆಜ್ಜೆಯಲ್ಲಿ ನನ್ನ ಹೆಜ್ಜೆ ಸೇರಿದಾಗ. ವಾಕ್ಪಥ ನನ್ನ, ನನ್ನೊಂದಿಗೆ ಬಂದಿದ್ದ ಸ್ನೇಹಿತನ ಮನಸೂರೆಗೊಂಡಿದ್ದು ಅದರ ಶಿಸ್ತಿನಿಂದಾಗಿ. ಒತ್ತಾಯದಿಂದ ಕರೆತಂದಿದ್ದ ನನ್ನ ಸ್ನೇಹಿತ ವಾಕ್ಪಥ ಮುಗಿಯುವದರೊಳಗೆ "ಕ್ಲೀನ್ ಬೋಲ್ಡ್" ಅಗೋಗಿದ್ದ.
ವಾಕ್ಪಥದ ಭಾಷಣಗಳು, ಕೇವಲ ೮ ನಿಮಿಷ ಅವಧಿಗೆ ನಿಗದಿಯಾದವು. ಸಮಯಪರಿಪಾಲಕರು ೬ನೇ ನಿಮಿಷಕ್ಕೆ ಹಸಿರು ಬಾವುಟ, ೭ನೇ ನಿಮಿಷಕ್ಕೆ ಹಳದಿ ಬಾವುಟ, ೮ನೇ ನಿಮಿಷಕ್ಕೆ ಕೆಂಪು ಬಾವುಟ ತೋರಿಸುವ ಉದ್ಧೇಶ ಭಾಷಣಕಾರರ ಓಘಕ್ಕೆ ತಡೆ ಒಡ್ಡಲಲ್ಲ. ಕೇವಲ ಸಮಯ ಪರಿಪಾಲನೆಯ ಎಚ್ಚರಿಕೆಗೆ. ಇನ್ನು, ಒಂದು ದಿನದ ಕಾರ್ಯಕ್ರಮ ಸದ್ಯ ಕೇವಲ ಮೂರು ಭಾಷಣಕ್ಕೆ ಅವಕಾಶ ಮಾಡಿಕೊಡುತ್ತಿದೆ. ಅದಕ್ಕೆ ಇರುವ ಪ್ರತ್ಯೇಕ ವಿಮರ್ಶಕರು, ಮೂರು ಭಾಷಣ ಮುಗಿದ ನಂತರ ತಮ್ಮ ವಿಮರ್ಶೆಯಲ್ಲಿ, ಭಾಷಣಕಾರರು ಎಲ್ಲಿ ತಿದ್ದುಕೊಳ್ಳಬೇಕು, ಎಲ್ಲಿ ಚೆನ್ನಾಗಿ ಸಾಗಿದ್ದಾರೆ ಅನ್ನೋದನ್ನ ತಿಳಿಸಿಕೊಡುತ್ತಾರೆ. ನಂತರ ಸಮಯಪರಿಪಾಲಕರು, ಮೂರು ಭಾಷಣಕಾರರು ಮತ್ತು ಮೂರೂ ವಿಮರ್ಶಾಕಾರರು ತೆಗೆದುಕೊಂಡ ಸಮಯದ ಪಟ್ಟಿ ನೀಡುತ್ತಾರೆ. ವಿಮರ್ಶಾಕಾರರಿಗೆ ಒಟ್ಟು ಎರಡು ನಿಮಿಷದ ಸಮಯ, ಅವರಿಗೂ ಸಮಯಕ್ಕೆ ತಕ್ಕ ಹಾಗೆ ಬಾವುಟ ತೋರಿರುತ್ತಾರೆ ಸಮಯ ಪರಿಪಾಲಕರು. ನಂತರ ಬರುವವರು ವ್ಯಾಕರಣಶುದ್ಧಿಗಾರರು. ಇವರು, ಭಾಷಣ ಹೇಗೆ ಭಾಷೆಯ ಹಿಡಿತದಲ್ಲಿ ಉತ್ತಮಗೊಳ್ಳಬಹುದಿತ್ತು, ಉಪಯೋಗಿಸಿದ ಆಂಗ್ಲ ಪದಗಳಿಗೆ, ಪರ್ಯಾಯಪದಗಳಿತ್ತಾ ಎಂಬುದನ್ನ ತಿಳಿಸುತ್ತಾ, "ಮ್ಯಾನರಿಸಮ್" ಎಂದು ಕರೆಸಿಕೊಳ್ಳುವ ನಮ್ಮ ಅಭ್ಯಾಸದ ಬಗ್ಗೆ ತಿಳಿಸಿಕೊಡುತ್ತಾ ಅದನ್ನ ತಿದ್ದುಕೊಳ್ಳಲು ನೆರೆವಾಗುತ್ತಾರೆ. [ಅದೂ... ಅದೂ..., ಇದೂ... ಇದೂ... ಅಂತ, ಅರ್ಥವಾಯಿತೇ, ನೋಡಿ, I see, You see, OK, ಇವೆಲ್ಲಾ ಈ ಮ್ಯಾನರಿಸಂನ ಉದಾಹರಣೆಗಳು. ಇದಕ್ಕೆ ಕಾರಣ ನಮ್ಮ ಅಭ್ಯಾಸ ಬಲ ಅಥವಾ ಮುಕ್ತವಾಗಿ ಭಾಷಣ ಮಾಡಿ ಅಭ್ಯಾಸವಿಲ್ಲದೇ ಇರುವುದು ಇರಬಹುದೆಂದು ನನ್ನ ಅನಿಸಿಕೆ, ಅರ್ಥವಾಯಿತಲ್ಲಾ.. :)]
ಈ ಎಂದಿನ ಪ್ರಕ್ರಿಯೆ ಮುಗಿದ ನಂತರ, ಆಶುಭಾಷಣವೋ, ಅನಿಸಿಕೆಯೋ ಅಥವಾ ಇತರೆ ಎರ್ಪಾಡುಗಳು ಮುಂದುವರೆದರೆ, ನಂತರದ ಕಾರ್ಯಕ್ರಮ, ಮುಂದಿನ ಹೆಜ್ಜೆ ಏನಾಗಬೇಕು, ಯಾರಿಂದಾಗಬೇಕು ಹೀಗೆ ಇತರ ಗೋಷ್ಟೀ ಸಂಬಂಧಿತ ಚರ್ಚೆಗಳೊಂದಿಗೆ ವಾಕ್ಪಥದ ಅಂದಿನ ಹೆಜ್ಜೆ ನಿಲ್ಲುತ್ತದೆ.
ನಂತರದ್ದು, ಅತ್ಯಂತ ಆಸಕ್ತಿಕರ ವಿಚಾರ. ವಾಕ್ಪಥ ಇಂದಿಗೆ, ಪುಳಿಯೋಗರ ಪಾಯಿಂಟ್‌ನ ಮೇಲೆ ಇರುವ ಸೃಷ್ಟಿ ವೆಂಚರ್ಸ್‌ನಲ್ಲಿ ನಡೆಯುತ್ತಿರುವುದರಿಂದ, ನಮ್ಮ ಇತರೇ ಕಾರ್ಯಕ್ರಮಗಳು ಕೆಳಗಿಳಿದ ನಂತರವೂ, ಪುಳಿಯೋಗರೆ, ಪೊಂಗಲ್, ಚಹಾ, ಕಾಫೀಗಳೊಂದಿಗೆ ಮುಂದುವರೆಯುವಂತಾಗುವುದು ಯಾರಿಗೆ ತಪ್ಪೆನಿಸಲು ಸಾಧ್ಯ...? ಅದು ಅವರವರ ಭಾವಕ್ಕೆ, ಅವರವರ ಆಸಕ್ತಿಗೆ ಬಿಟ್ಟ ವಿಷಯವಲ್ಲವೇ?
ಈ ಮೂಲಕ ನಾನು ಆಸಕ್ತರಿಗೆ ತಿಳಿಸುವುದೇನೆಂದರೆ, ವಾಕ್ಪಥ ನಿಮಗೆ ಎರಡು ರೀತಿಯ ಅವಕಾಶ ಒದಗಿಸಿದೆ. ನೋಡಿ, ನಿಮಗೆ ಭಾಷಣದಲ್ಲಿ ಆಸಕ್ತಿ ಇದೆ ಎಂದಾದಲ್ಲಿ, ನಿಮಗೆ ಮಾತು ಆಡಲು ಕಲಿಕೆಯ ಅವಶ್ಯಕತೆ ಇದೆ ಎಂದಾದಲ್ಲಿ, ಸಭಾಕಂಪನ, ಹೆದರಿಕೆ ಎಲ್ಲಾ ಓಡಿಸುವ ಇರಾದೆ ಇದ್ದಲ್ಲಿ, ಅನುಭವದ ಅವಶ್ಯಕತೆ ಹೆಚ್ಚೆನಿಸಿದಲ್ಲಿ, ನೀವು ಪುಳಿಯೋಗರೆ ಪಾಯಿಂಟ್‌ನ ಮೇಲಿರುವ ಸೃಷ್ಟಿ ವೆಂಚರ್ಸ್‌ನ ಒಳ ಪ್ರವೇಶಿಸಿ. ಅದಲ್ಲದೇ, ನಿಮ್ಮ ಆಸಕ್ತಿ ಇದಾವುದರಲ್ಲೂ ಇಲ್ಲ ಅನ್ನುವುದಾದಲ್ಲಿ, ಅದರ ಬದಲು, ಸೃಷ್ಟಿವೆಂಚರ‍್ನ ಕೆಳಗಿರುವ ಪುಳಿಯೋಗರೆ ಪಾಯಿಂಟ್‌ನ ಸರ್ವರೀತಿಯಲ್ಲೂ ಉಪಯೋಗಿಸಿಕೊಂಡು, ಪುನೀತ/ಪಾವನರಾಗಬಹುದಾಗಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇನೆ. ಹಾಗೆಯೇ... ಎರಡರಲ್ಲೂ ಆಸಕ್ತಿ ಇರೋ ನಮ್ಮಂಥವರಾರಾದರೂ ಇದ್ದಲ್ಲಿ, ಮೊದಲಿಗೇ ಸ್ವಲ್ಪ ಹೆಚ್ಚಿನ ಸಮಯವನ್ನ ಈ ಎಲ್ಲಾ ಕಾರ್ಯಕ್ರಮಗಳಿಗೂ ಪೂರ್ವನಿಯೋಜಿತವಾಗಿ ಮೀಸಲಿಡುವುದು ಒಳ್ಳೆಯದು ಎಂಬುದನ್ನೂ ಈ ಮೂಲಕ ವಿಷದೀಕರಿಸಲು ಸಂತೋಷಿಸುತ್ತೇನೆ.
ನಿಮ್ಮೊಲವಿನ,
ಸತ್ಯ.. :-)
ಚಿತ್ರ ಕೃಪೆ: ವಾಕ್ಪಥ ನಿರ್ವಹಣಾ ತಂಡ
Comments
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by Jayanth Ramachar
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by partha1059
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by sm.sathyacharana
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by partha1059
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by bhalle
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by sm.sathyacharana
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by bhalle
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by manju787
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by manju787
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by Prabhu Murthy
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by makara
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by Chikku123
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by sm.sathyacharana
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by ಗಣೇಶ
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by RAMAMOHANA
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by bhalle
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by sm.sathyacharana
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by RAMAMOHANA
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by sm.sathyacharana
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by manju787
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!
In reply to ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..! by Prabhu Murthy
ಉ: ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್..!