ಬರಿದಾದ ತೊಟ್ಟಿಲು

ಬರಿದಾದ ತೊಟ್ಟಿಲು

ಒಬ್ಬ ತಾಯಿಯು  ತನ್ನ ಬೆಳೆದು ನಿಂತ  ಮಗುವನ್ನ  ಕಳೆದುಕೊಂಡಾಗ ಅವಳ ಮನದಾಳದಲ್ಲಿನ ಆಘಾತವನ್ನ ಅವಳು ಹಾಡಿನ ರೂಪದಲ್ಲಿ ಹ್ಯಾಗ್ ವ್ಯಕ್ತಪಡಿಸ್ತಾಳೆ ಅನ್ನೋದು ಇಲ್ಲಿದೆ


 


ತವರಿನ ತೊಟ್ಟೀಲ


ಬರಿದು ಮಾಡಿಟ್ಟೆಲ್ಲ


ನಮ್ಮನ್ನ ಅಗಲಿ ನೀ ದೂರ ಹೊಂಟೆಲ್ಲ


 


ಹಡೆದವ್ವನ ಮಮತೆ


ನೀನ್ಯಾಕ ಮರೆತೆ


ಹೆತ್ತವರ ಪ್ರೀತ್ಯಾಗಾಗಿತ್ತೇನ ಕೊರತೆ


 


ಮನಿಗೆ ನೀ ಆರತಿ


ಜಗವಾಳೋ ಸಾರಥಿ


ಆಗಂತ ಹೇಳಿದ್ದೆ  ನೀ ಹೆಂಗ ಮರೆತಿ


 


ಬಿದರೀನ ಜಂತ್ಯಾಗ


ಎತ್ತರದ ಜೋಳಗ್ಯಾಗ


ಮಲಗಿದ್ದ ನನಕೂಸ ಇಟ್ಟಾರ ಕುಣಿಯಾಗ


 


ವಿಧಿಯ ಆವೇಶದಲಿ


ಸಾವೀನ ವೇಶದಲಿ


ನೀ ಹೊರಟೆ ಬಂಧೀಸಿ  ಭಾವಪರವಶದಲಿ


 


ಕರುಳೀನ ಕುಡಿಯ


ಕಳಕೊಂಡ ಉಡಿಯ


ತುಂಬಾಕ ಮತ್ತೊಮ್ಮೆ ನೀ ಎದ್ದು ನಡೆಯ


 


                         ನಿಮ್ಮ ಸುಮಂಗಲಾ


 

Rating
No votes yet

Comments