ಭಾಷೆ ಕಿತ್ತಾಟ

ಭಾಷೆ ಕಿತ್ತಾಟ

ಭಾಷೆ , ಸಕ್ಕದ , ಕನ್ನಡ ಅಂತ ಅದೆಷ್ಟನೆಯೋ ಬಾರಿ ಕಿತ್ತಾಟ ಇಲ್ಲಿ ನಡೆದಿದೆ . ಹೌದೂ , ಭಾಷೆ ನಮಗೆ ಯಾಕೆ ಬೇಕು ?
ನಮ್ಮ ಮನಸ್ಸಿನ ವಿಚಾರಗಳನ್ನು ಪರಸ್ಪರ ತಿಳಿಸಲು ತಾನೇ ? ಭಾಷೆ ಯಾಕೆ ಉಳಿಯಬೇಕೆಂದರೆ ಹಿಂದಿನ ವಿಚಾರಗಳು ಮುಂದಿನ ಕಾಲಕ್ಕೆ ಉಳಿಸಿಕೊಂಡು ಹೋಗಬೇಕೆಂದು ತಾನೇ ?
ಶಬ್ದ ಮುಖ್ಯ ಅಲ್ಲ ; ಅರ್ಥ ಮುಖ್ಯ ಎಂದು ತಥಾಗತ ( ಅಂದ್ರೆ ಬುದ್ಧ ಮಾತ್ಮ ) ಹೇಳಿದ್ದಾನೆ . ಇದು ನಿಜ ಅಲ್ವೇ ? ಒಂದು ಶಬ್ದ ಅದು ಯಾವ ಮೂಲ ಇದ್ರೆ ಏನಂತೆ ಒಬ್ರು ಮಾತಾಡಿದ್ದು , ಬರೆದದ್ದು ಇನ್ನೊಬ್ರಿಗೆ ತಿಳಿದ್ರೆ, ಆಯ್ತಪ್ಪ ! ಇದು ಇಂಗ್ಲೀಶು , ಇದು ಸಂಸ್ಕೃತ , ಇದು ಪಾರ್ಸಿ , ಇದು ಉರ್ದು ನಮ್ಮ ಜನಕ್ಕೆ ಕಷ್ಟ ಆಗುತ್ತೆ ಅಂತ ಅಂತೀರೋ ಏನೋ ? ನಿಮ್ಮ ಮನಸ್ಸಿನಲ್ಲಿರೋ ಈ ಹಳ್ಳೀ ಜನ ಏನು ಮಾತಾಡ್ತಾ ಇದ್ದಾರೆ ನೋಡಿ ಅವರು ಇಂಗ್ಲೀಷು , ಸಂಸ್ಕೃತ ಇತ್ಯಾದಿಗಳನ್ನು ಲೀಲಾಜಾಲವಾಗಿ ಬಳಸ್ತಾ ಇರೋದನ್ನ ನೀವು ಕೊಂಚ ತೆರೆದ ಮನಸ್ಸಿನಿಂದ ನೋಡಿದರೆ ತಿಳಿಯುವದು . ಹಳ್ಳಿಗೆ ಹೋಗಿ ನೋಡದಿದ್ದರೆ ಟೀವೀಯಲ್ಲಿ ಬರುವ ರೈತಾಪಿ ಕಾರ್ಯಕ್ರಮ ನೋಡಿ . ಅರಿಯದ ಶಬ್ದವನ್ನ ಮನುಷ್ಯ ಕೇಳಿ ತಿಳಕೋತಾನೆ ಅಥವಾ ಊಹೆ ಮಾಡ್ತಾನೆ , ಅದೇ ಶಬ್ದ ಅನೇಕ ಬರಿ ಅವನಿಗೆ ಎದುರಾಗಿ , ತಾನು ತಿಳಿದ ಅರ್ಥಕ್ಕೆ ಹೊಂದಿಕೆ ಆದರೆ ಅದೇ ಅದರ ಅರ್ಥ ಎಂದು ಸ್ವೀಕರಿಸ್ತಾನೆ . ಎಲ್ರೂ ಡಿಕ್ಷನರೀ ನೋಡೋದಿಲ್ಲ , ಶಬ್ದ ಮೂಲಾನೋ ತಿಳಕೋಳೋದಿಲ್ಲ ;

ಈ ಭಾಷೆ ಕುರಿತು ಅನಗತ್ಯ ವಾದಕ್ಕಿಳಿದು ಶ್ರಮಪಡದೆ ಭಾಷೆಯ ಸದ್ಬಳಕೆ ಹೇಗೆ ಅಂತ ನೋಡೋಣ , ನಮಗೆ ತಿಳಿದ ವಿಶಯ ಇತರರಿಗೆ ತಿಳಿಸಿ ಅವರ ಜೀವನವನ್ನ ಕೊಂಚ ಉತ್ತಮಪಡಿಸೋಣ . ಉದಾಹರಣೆಗೆ , ಲೀನಕ್ಸ್ ಕಲಿತು , ಕಲಿಸಿ , ಜನರಲ್ಲಿ ಪ್ರಚಾರ ಮಾಡಿ , ಜನರ ಹಣ ಉಳಿಸೋಣ ; ತಂತ್ರಜ್ಞಾನವನ್ನ ಕನ್ನಡಕ್ಕೆ ತರೋಣ ; ಹೆಚ್ಚು ಕಲಿಯದ ಒಬ್ಬ ಮನುಷ್ಯನೂ ಕಂಪ್ಯೂಟರ್ ಬಳಸಿ ಅದರ ಲಾಭ ಪಡೆಯುವಂತಾಗಬೇಕು . ಪಂಡಿತರಷ್ಟೇ ಓದು ಬರಹ ಮಾಡುವದು ಬೇಡ ; ಪಾಮರರೂ ಮಾಡುವಂತಾಗಲಿ . ಪಾಮರರು ಹೇಳುವದನ್ನು ಪಂಡಿತರೂ ಕೇಳುವಂತಾಗಲಿ .

ಹಣ, ಶೇರು ಪೇಟೆ ಬಗ್ಗೆ ಗೊತ್ತಿರುವವರು ಗೊತ್ತಿಲ್ಲದವರಿಗೆ ತಿಳಿಸಿ , ಡಾಕ್ಟರರು ವೈದ್ಯಕೀಯ ವಿಷಯ ತಿಳಿಸಲಿ , ಇತ್ಯಾದಿ . ಕಾನೂನು, ಹಕ್ಕು , ಕರ್ತವ್ಯ , ಇತ್ಯಾದಿ ವಿಷಯಗಳನ್ನು ವಕೀಲರು ತಿಳಿಸಲಿ . ಇತ್ಯಾದಿ , ಇತ್ಯದಿ .
ಇದೇ ತರಹ ಭಾಷೆಯನ್ನ ನಾಲ್ಕು ಜನಕ್ಕೆ ಲಾಭ ಆಗುವ ಹಾಗೆ ಬಳಸುವದು ಹೇಗೆ ಎಂದು ನೋಡೋಣ . ಏನಂತೀರಾ ?

(ಬರಹ ಗಂಭೀರ ಆಯ್ತೇನೋ ? ಅಂದ ಹಾಗೆ ’ಪಾಮರರ ಅಭಿಪ್ರಾಯ’ ಕೇಳುವ ಚರ್ಚೆಯಲ್ಲಿ ನಾನು ಪಾಲ್ಗೊಳ್ಳಲಿಲ್ಲ . ಯಾಕಂತೀರಾ ? ನನ್ನ ಅಭಿಪ್ರಾಯ ಅಲ್ಲಿ ಹೇಳಿದ್ರೆ .. ನಾನು ಪಾಮರ (ದಡ್ಡರು , ನೀಚರು ಅಂತಾನೂ ಅರ್ಥ ಇದೆ ! ) ಅಂತ ನಾನೇ ಒಪ್ಕೊಂಡ ಹಾಗೆ ಆಗಲ್ವೇ ? :) ಅದಕ್ಕೇ ಸುಮ್ನಿದೇನೆ )

Rating
No votes yet

Comments