ಕವಲು

ಕವಲು

ನಡೆದು ಬಂದ ಕವಲುಗಳಲ್ಲಿ ಇಂದು ನನ್ನನ್ನು ಹುಡುಕುತ್ತಿದ್ದೇನೆ
ಮುಂದೊಡೆಯುವ ಕವಲುಗಳಲ್ಲಿ ಮತ್ತೆ ಕಳಚಿಕೊಳ್ಳಲಿದ್ದೇನೆ
ಒಡೆಯುವಾಗ ಅದೆಷ್ಟು ನೋವು
ಬಿರಿಯುವ ಕನವರಿಕೆಗಳು ಬೊಬ್ಬಿಟ್ಟಂತೆ
ಸುಕ್ಕು ಸುಕ್ಕು; ಒಣ - ಭಣ ಭಣ
ಒಮ್ಮೊಮ್ಮೆ ಬಿಕ್ಕಳಿಕೆ - ಕಂಬನಿ ಮತ್ತೆ ರೋದನ
ತಡೆಗಟ್ಟಲಾರದ ವೇದನೆಯ ರೂಪ ಆಕ್ರೋಶ
ಎಲ್ಲವನ್ನದುಮಿ ನನ್ನ ನಾನು ಕಟ್ಟಬೇಕೆನ್ನುವ ಆವೇಶ
ಬೆಂಕಿಯ ಮುಚ್ಚಿ ಮೇಲೆ ಬದುಕ ಕಲ್ಪಿಸುವ ಧರೆಯಂತೆ
ಸ್ಥಿತಿಗಿದುವೇ ಕಾರಣ, ಅದಕ್ಕಾಗಿ
ನಡೆದು ಬಂದ ಕವಲುಗಳಲ್ಲಿ ನನ್ನನ್ನು ಹುಡುಕುತ್ತಿದ್ದೇನೆ
ಮುಂದೊಡೆಯುವ ಕವಲುಗಳಲ್ಲಿ ಮತ್ತೆ ಕಳಚಿಕೊಳ್ಳಲಿದ್ದೇನೆ
ಇಂದು ಒಡೆಯುತ್ತಿರುವ ಕವಲುಗಳಿಗೆ ನನ್ನನ್ನು ಒಡ್ಡಿಕೊಳ್ಳುತ್ತಿದ್ದೇನೆ
 

Rating
No votes yet

Comments