ಒಲವಿನ ಒಡಲು

ಒಲವಿನ ಒಡಲು

 


ಅಳುವೆ  ಏಕೆ ಮನವೆ


ನಿನಗಿ ನಾನಿರುವೆ ಓ ಎನ್ನ ಒಲವೆ


ಎನ್ನುಡಿಯು ಚೆನ್ನುಡಿಯು ನಿನಗಾಗಲಿಂದು


ನಿನ್ನೊಲವು ನನ್ನೊಲವು ನನಗಾಗಲೆಂದೆಂದು


 


ಅಕ್ಷಿಯಲುದುರದಿರೆ ಅಮೃತದ ಬಿಂದು


ಬಿಂದು ಎನಬಾಳ ಸುಧೆಯಾಗು ಎಂದು


ಮನದಾಗಸದಲಿ ಹಾರೆನ್ನ ಹಕ್ಕಿಯಾಗಿ


ಎನ್ನೆದೆಯ ಗೂಡಿನಲಿ ಬಚ್ಚಿಟ್ಟುಕೊಳುವೆನಾನಿನ್ನ ಸುಪ್ತಚೇತನವಾಗಿ


 


ಒರಗೆಲೆ ಎನ್ಮನವೆ ಎನ್ನೊಡಲೊಳಗೆ


ಪ್ರೀತಿಯಾ ನೌಕೆಯಲಿ ಹೊತ್ತೊಯ್ವೆ ನಿನ್ನೆನ್ನ ಬಾಳ ಕಡಲೊಳಗೆ


ಸುಳಿಯ ಸೆಳೆತದಲಿ ಸಿಲುಕದಂತಿನ್ನೆಂದು


ಸುಖ ತೀರದೆಡೆಗೆ ಕರೆದೊಯ್ವೆ ನಿನ್ನಿಂದು


 


                ನಿಮ್ಮ ಸುಮಂಗಲಾ


 

Rating
No votes yet

Comments