ಹೆಣ್ಣು ಎಂಬ ಕಾರಣಕ್ಕೆ......!

ಹೆಣ್ಣು ಎಂಬ ಕಾರಣಕ್ಕೆ......!

 

 

 

 

 

 

 

 ಮಗಳೆ   ನಿನ್ನ ಮೊಗದಲೆನಿತೊ

 ಬದುಕ ಬೆಳೆಸೊ ಪ್ರೀತಿ..!

 ಆದರೆಮಗೆ "ಹೆಣ್ಣು "ನೀನು

ಎಂಬ ದುಗುಡ ಭೀತಿ..!

                           ತಾಯಿಸೆರಗ ಮರೆಯಲವಿತು

                           ಮರೆತು ಬಿಡುವೆ  ದುಃಖ

                          ತಂದೆ ಮುಖವ ನೋಡಿ ಅರಿತು

                          ಕುಳಿತು ಬಿಡುವೆ ಪಕ್ಕ  !

ಪುಟ್ಟ ತಮ್ಮ ಹಠವ ಮಾಡೆ

ಸಂತೈಸುವೆ  ಅವನ..

ಕೋಪ ತಾಪ ಬದಿಗೆ ಸರಿಸಿ

 ನಗುವ ಶುಭ್ರ ವದನ..!

                              ಹೆಣ್ಣು ಎಂಬ ಕಾರಣಕ್ಕೆ

                              ಅಂಜಬೇಡ ನೀನು..!

                              ಮನೆಯ ಮನಕೆ ಎಲ್ಲ ಜನಕೆ

                                ನುಡಿಯೆ  ಸವಿಯ ಜೇನು..!

 ಗಂಡು ಹೆಣ್ಣು ಸಮರು ಇಂದು

 ಬದುಕು ನಡೆವ ರಥಕೆ

   ಪ್ರೀತಿ ಮಾತು ಸಾಮರಸ್ಯ

   "ಗಾಲಿ" ಯಶದ ಪಥಕೆ !

                        

 ಚಿತ್ರ ಕೃಪೆ : ಅಂತರ್ಜಾಲ

Rating
No votes yet

Comments