ಚಲೋ ಮಲ್ಲೇಶ್ವರ 20
ನನಗೆ ಗೊತ್ತಿತ್ತು ಹೀಗೆಲ್ಲ ಆಗುತ್ತೆ ಎಂದು ಜಯಂತ್ ಹೇಳಿದರು. ಅದು ಹೇಗೆ ಎಂದು ನಾನು ಕೇಳಿದೆ. ಮಲ್ಯರು ನಮ್ಮನ್ನು ಬಿಟ್ಟು ಸಹಾರಾ ಕೈ ಜೋಡಿಸಿದ್ದು ಈ ಚಿಕ್ಕುನಿಂದ ಎಂದು ಹೇಳಿದರು. ನಾನೇನು ಮಾಡಿದೆ ಎಂದರು ಚಿಕ್ಕು... ನಾನು ೧೦೮ ಸುತ್ತು ಹೊಡೆದು ಬಂದಿದ್ದರೇ ಮಲ್ಯ ಅವರು ಒಪ್ಪಿಕೊಳ್ಳುತ್ತಿದ್ದರು ಎಂದರು ...ನೀವು ಹೇಳಿದ್ದಕ್ಕಾಗಿ ಒಂದೇ ಸುತ್ತು ಹೊಡೆದೆ ಎಂದು, ಮತ್ತೆ ಪ್ರದಕ್ಷಿಣೆಗೆ ಹೊರಟು ಹೋದರು. ಅಷ್ಟರಲ್ಲಿ ಒಂದು ಯುವಕರ ಗುಂಪು ಬಂದು ಗಣೇಶರ ಕಾಲಿಗೆ ಬಿದ್ದು, ನೀವು ಒಂದು ಕಾರ್ಯಕ್ರಮ ನಡೆಸಿಕೊಡಿ ಎಂದು ಕೇಳಿದರು. ಅವರು ಬೇಡ.. ಬೇಡ ..ಎಂದು ಹೇಳುತ್ತಿದ್ದರೂ, ಪಕ್ಕದಲ್ಲಿ ಇದ್ದ ಮಂಜಣ್ಣ ಅವರ ಕಡೆಗೆ ಒಂದು ಪಾಕೇಟು ಕೊಟ್ಟು ಹೊರಟು ಹೋದರು. ಗಣೇಶರು ನನಗೆ ಇದೆಲ್ಲಾ ಬೇಡವೇ ಬೇಡ ಎಂದು ಹೇಳಿ ಮೈಸೂರಿಗೆ ಹೊರಡಲು ಅನುವಾದರು. ಅಷ್ಟರಲ್ಲಿ ಮಂಜಣ್ಣ ಗಣೇಶರನ್ನು ಸಂಭಾಳಿಸಿ ಮತ್ತೆ ಕಾರ್ಯಕ್ರಮಕ್ಕೆ ಒಪ್ಪಿಸಿದರು.
ಮಲ್ಲೇಶ್ವರಂನಲ್ಲಿ ದೊಡ್ಡದಾದ ಪೆಂಡಾಲ್ ಹಾಕಿದ್ದರು. ಗಣೇಶರು ಬಂದು ಕುಳಿತರು. ಬಂದು ಎದುರಿಗೆ ನೋಡಿದ ಜನ ಜಂಗುಳಿ ನೋಡಿ ನಡುಗಲಾರಂಬಿಸಿದರು. ಅವರ ಜೊತೆ ಪೆಂಡಾಲ್ ಕೂಡ ಸ್ವಲ್ಪ ನಲುಗಿತು. ಪೊಲೀಸರಿಗೆ ಜನರನ್ನು ನಿಯಂತ್ರಣ ಮಾಡುವುದು ಕಷ್ಟವಾಗಿತ್ತು. ಗಣೇಶರು ಹೆದರುತ್ತ ಕುಳಿತ್ತಿದ್ದರು. ಅಷ್ಟರಲ್ಲಿ ಸತೀಶ ಹೆದರಬೇಡಿ, ಜನಗಳಿಗೆ ನಿಮ್ಮೆ ಮೇಲೆ ಅನುಮಾನ ಬರುತ್ತೆ ಎಂದರು. ನಿಮಗೆ ಸಹಾಯ ಮಾಡಲು ಜಯಂತ ಇದ್ದಾರೆ, ಅವರಿಗೆ ಸ್ವಲ್ಪ ಜೋತಿಷ್ಯ ವಿದ್ಯೆ ಬರುತ್ತೆ ಎಂದರು. ಆಗ ಗಣೇಶರು ನಿರಾಳವಾದರು.
ಕಾರ್ಯಕ್ರಮ ಶುರು ಆಯಿತು ಆರಂಬಿಕ ಭಾಷಣ ನಮ್ಮ ಕಂಚಿನ ಕಂಠದ ಮಂಜಣ್ಣನವರಿಂದ ಸಾಗಿತ್ತು. ಸುಮಾರು ಅರ್ಧ ಘಂಟೆ ಭಾಷಣ
ಮಾಡಿ ಮುಗಿಸಿದರು ಜಯಂತರು ಬಂದಿರಲಿಲ್ಲ, ಹೀಗಾಗಿ ಬೇರೆ ಏನೂ ಮಾಡಲಾರದೆ ಮಂಜಣ್ಣ ತಮ್ಮ ಭಾಷಣ ಮುಗಿಸಿ, ಗಣೇಶರಿಗೆ ಮೈಕ್ ಕೊಟ್ಟರು.ಒಬ್ಬೊಬ್ಬರಾಗಿ ಗಣೇಶರಿಗೆ ಪ್ರಶ್ನೆ ಕೆಳಹತ್ತಿದರು. ಒಬ್ಬ ನನಗೆ ತುಂಬಾ ಹೊಟ್ಟೆ ನೋವು ಗುರುಗಳೇ ಎಂದ. ಅಷ್ಟರಲ್ಲಿ ಗಣೇಶರು ತಮ್ಮ ಪಕ್ಕದಲ್ಲೇ ಇದ್ದ ಹುಲ್ಲಿನ ಎಳೆಗಳನ್ನ ತೆಗೆದು ಅದರ ಒಳಗಿರುವ ಪ್ರೊಟೀನ್, ಮತ್ತು ಜಾತಿ, ಒಳ ಜಾತಿ ಎಂದು ಪೂರ್ತಿ ಜಾತಕ ತೆಗೆದು ಇಟ್ಟರು. ನಮಗೆ ಆಶ್ಚರ್ಯ. ಹುಲ್ಲಿನ ಮಾಹಿತಿ ತಿಳಿಸಿ ಅವನ ಕೈಗೆ ಕೊಟ್ಟರು. ಮತ್ತೆ ಸತೀಶ್ ಅವರಿಗೆ ಎಲ್ಲಿ ಜಯಂತ ಎಂದರು. ಅದಕ್ಕೆ ೧೦೮ ಎಂದರು ಸತೀಶ.
ಮತ್ತೆ ಗಣೇಶರು ದಾಸವಾಳದ ಹೂವು ತೆಗೆದುಕೊಂಡು ಅದರ ಒಳಗೆ ಇರುವ ಸತ್ವಗುಣಗಳ ಜೊತೆಗೆ, ಸ್ವಲ್ಪ ಆಧ್ಯಾತ್ಮ ಬೆರೆಸಿ ಹೇಳುತ್ತಿದ್ದರು. ಸುಮಾರು ೪ ಘಂಟೆ ಹೀಗೆ ಸಸ್ಯಗಳ ಬಗ್ಗೆ ಭಾಷಣ ಮಾಡುತ್ತ ಇದ್ದರು.
ಅಷ್ಟರಲ್ಲಿ ಒಂದು ಅಂಬುಲನ್ಸ್ ಬಂದು ನಿಂತಿತು. ಯಾರಿಗೆ? ಏನೂ ಆಯಿತು ಎಂದು ಬಂದು ಗಣೇಶರಿಗೆ ಕೇಳಿದರು. ನನಗೆ ಏನೂ? ಗೊತ್ತು ಎಂದರು. ಪಕ್ಕದಲ್ಲಿ ಇದ್ದ ಒಬ್ಬ ಮನುಷ್ಯ ಗಣೇಶರು ಹೇಳಿದ್ದ ೧೦೮ ಎಂದು ಕೇಳಿ, ೧೦೮ಕ್ಕೆ ಫೋನ್ ಮಾಡಿದ್ದ. ಮಂಜಣ್ಣರು ಅವರಿಗೆ ಸಮಾಧಾನ ಮಾಡಿ ಕಳುಹಿಸಿದರು.
ಗಣೇಶರು ಉಟ್ಟಿದ್ದ ಸೀರೆ ಕೆಳಗಡೆ ಇಳಿಯುತ್ತಿತ್ತು... ಮತ್ತೆ ಕಾರ್ಯಕ್ರಮ ನಾಳೆಗೆ ಮುಂದುವರೆಯುವುದು ಎಂದು ಹೇಳಿ ಕಾರ್ಯಕ್ರಮ ಮುಗಿಸಿದರು. ಮರುದಿನ ಜಯಂತ ಗಣೇಶರಿಗೆ ಸಹಾಯ ಮಾಡಿದರು. ಮೂರುದಿನ ಹೀಗೆ ಕಾರ್ಯಕ್ರಮ ನಡೆಯಿತು. ಗಣೇಶರು ತುಂಬಾ ಸುಸ್ತಾಗಿ ಹೋಗಿದ್ದರು. ಆದರೂ, ಗಣೇಶರಿಗೆ ತುಂಬಾ ಖುಷಿಯಾಗಿತ್ತು. ಏಕೆಂದರೆ ಅವರು ತಮ್ಮ ತೂಕ ಇಳಿಸಬೇಕೆಂದು ಶತ ಪ್ರಯತ್ನ ಮಾಡಿದ್ದರು ಆಗಿರಲಿಲ್ಲ.
Comments
ಉ: ಚಲೋ ಮಲ್ಲೇಶ್ವರ 20
In reply to ಉ: ಚಲೋ ಮಲ್ಲೇಶ್ವರ 20 by Chikku123
ಉ: ಚಲೋ ಮಲ್ಲೇಶ್ವರ 20
In reply to ಉ: ಚಲೋ ಮಲ್ಲೇಶ್ವರ 20 by Chikku123
ಉ: ಚಲೋ ಮಲ್ಲೇಶ್ವರ 20
In reply to ಉ: ಚಲೋ ಮಲ್ಲೇಶ್ವರ 20 by ಗಣೇಶ
ಉ: ಚಲೋ ಮಲ್ಲೇಶ್ವರ 20
In reply to ಉ: ಚಲೋ ಮಲ್ಲೇಶ್ವರ 20 by sm.sathyacharana
ಉ: ಚಲೋ ಮಲ್ಲೇಶ್ವರ 20
In reply to ಉ: ಚಲೋ ಮಲ್ಲೇಶ್ವರ 20 by ಗಣೇಶ
ಉ: ಚಲೋ ಮಲ್ಲೇಶ್ವರ 20
In reply to ಉ: ಚಲೋ ಮಲ್ಲೇಶ್ವರ 20 by ಗಣೇಶ
ಉ: ಚಲೋ ಮಲ್ಲೇಶ್ವರ 20
In reply to ಉ: ಚಲೋ ಮಲ್ಲೇಶ್ವರ 20 by ಗಣೇಶ
ಉ: ಚಲೋ ಮಲ್ಲೇಶ್ವರ 20
ಉ: ಚಲೋ ಮಲ್ಲೇಶ್ವರ 20
ಉ: ಚಲೋ ಮಲ್ಲೇಶ್ವರ 20
In reply to ಉ: ಚಲೋ ಮಲ್ಲೇಶ್ವರ 20 by kavinagaraj
ಉ: ಚಲೋ ಮಲ್ಲೇಶ್ವರ 20
ಉ: ಚಲೋ ಮಲ್ಲೇಶ್ವರ 20
ಉ: ಚಲೋ ಮಲ್ಲೇಶ್ವರ 20
ಉ: ಚಲೋ ಮಲ್ಲೇಶ್ವರ 20