ನಾಯಿಂದ ಶಬ್ದಕ್ಕೆ ಕನ್ನಡದಲ್ಲಿ ಪದಗಳೆಷ್ಟು?

ನಾಯಿಂದ ಶಬ್ದಕ್ಕೆ ಕನ್ನಡದಲ್ಲಿ ಪದಗಳೆಷ್ಟು?

     ಸಂಪದದಲ್ಲಿ ಬರಯೋಕೆ ಪ್ರಾರಂಭಿಸಿದ ಪುಣ್ಯವೋ ಏನೋ, ಯಾವುದೇ ಸಣ್ಣ ವಿಷಯವಾದರೂ ಅದನ್ನು ಕೂಲಂಕುಷವಾಗಿ ನೋಡುವ ಅಭ್ಯಾಸ ಬಂದು ಬಿಟ್ಟಿದೆಯೆನ್ನಿಸುತ್ತಿದೆ. ಇತ್ತೀಚೆಗೆ ನನ್ನ ಕಕ್ಷಿದಾರನೊಬ್ಬ ಬೆಂಗಳೂರಿನಲ್ಲಿ ಒಂದು ಬ್ರ್ಯಾಂಚ್ ಆಫೀಸನ್ನು ತೆಗೆಯುತ್ತಿದ್ದೇನೆಂದು ಹೇಳಿ ಅದರ ಅಡ್ರೆಸ್ಸನ್ನು ನನಗೆ ತಿಳಿಸಿದ. ಅದು ಇರುವುದು ನಾಯಿಂದನಹಳ್ಳಿಯಲ್ಲಿ, ಅವನು ಅದನ್ನು ನಾಯಾಂಡಹಾಳ್ಳಿ ಅಂತ ಏನೇನೋ ತಪ್ಪು ತಪ್ಪಾಗಿ ಉಚ್ಚಿರಿಸುತ್ತಿದ್ದ. ನಾಯಿಂದ ಎಂದರೆ ಇಂಗ್ಲೀಷಿನಲ್ಲಿ "ಬಾರ್ಬರ್" ಎಂದು ಅದರ ಅರ್ಥವನ್ನು ಬಿಡಿಸಿ ಹೇಳಿದೆ. ಆಗ ನನಗೆ ಸ್ಪುರಿಸಿದ್ದೇ.........ಅರೇ ಕನ್ನಡದಲ್ಲಿ ಕ್ಷಾರಿಕ ಶಬ್ದಕ್ಕೂ ಕೂಡಾ ಎಷ್ಟೊಂದು ಶಬ್ದಗಳಿವೆಯೆಲ್ಲಾ ಎಂದು. ಅದನ್ನು ಅವಲೋಕನ ಮಾಡಿದಾಗ ನನಗೆ ಹೊಳೆದ ಕೆಲವು ಶಬ್ದಗಳನ್ನು ಇಲ್ಲಿ ಕೊಡುತ್ತಿದ್ದೇನೆ. 

    ಆ ಶಬ್ದಗಳು ಈ ರೀತಿಯಿವೆ: ನಾಯಿಂದ, ನಾಪಿತ, ಕ್ಷಾರಿಕ, ಚೌರದವನು, ಹಜಾಮ, ನಮ್ಮ ಬಳ್ಳಾರಿ ಜಿಲ್ಲೆಯ ಶಿಷ್ಟ ಭಾಷೆಯಲ್ಲಿ: "ಕೆಲ್ಸೇರು" ಬಹುಶಃ ಕೆರೆಯೋರು ಶಬ್ದದ ಅಪಭ್ರಂಶವೆಂದುಕೊಳ್ಳುತ್ತೇನೆ.  ಮತ್ತು ಜನಸಾಮಾನ್ಯರ ಆಡು ಭಾಷೆಯಲ್ಲಿ "ಕೆತ್ತುಗ", ಹಾಗೆಯೇ ಉತ್ತರ ಕರ್ನಾಟಕದಲ್ಲಿ ಅವರನ್ನು ಹಡಪದವರೆನ್ನುತ್ತಾರೆ. (ಹಡಪದ ಅಪ್ಪಣ್ಣ ಒಬ್ಬ ಶ್ರೇಷ್ಠ ಶಿವಶರಣನಾಗಿದ್ದ). ಹಾಗೆಯೇ "ಚೌರದ" ಅಥವಾ "ಕ್ಷೌರದ" ಅಂಗಡಿಗೆ "ಆಯುಷ್ಕರ್ಮ ಶಾಲೆ"ಯೆನ್ನುತ್ತಾರೆನ್ನುವುದನ್ನೂ ಎಲ್ಲೋ ಒಂದೆಡೆ ಓದಿದ ನೆನಪು.

     ನಮ್ಮ ಕನ್ನಡ ನಿಜಕ್ಕೂ ಶ್ರೀಮಂತ ಭಾಷೆಯಾಗಿರುವುದರಿಂದ, ಇನ್ನೂ ಹೆಚ್ಚು ಶಬ್ದಗಳಿದ್ದರೂ ಇರಬಹುದು.

Rating
No votes yet

Comments